Income Tax ride of Punith Rajakumar

ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ಜನವರಿ ಮೂರನೇ ತಾರೀಕು ಸ್ಯಾಂಡಲ್ ವುಡ್ ಗೆ ಒಂದು ದೊಡ್ಡ ಶಾಕ್ ಆಗಿತ್ತು ಅಂತ ಎಲ್ಲರಿಗೂ ತಿಳಿದಿರಬಹುದು. ಸರಿಸುಮಾರು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಕನ್ನಡದ ಸ್ಟಾರ್ ನಟರ ಮನೆಯ ಮೇಲೆ ತೆರಿಗೆ ಇಲಖೆಯ ಅಧಿಕಾರಿಗಳು ದಾಳಿ ಮಾಡಿದರು, ಇನ್ನು ಅದೇ ರೀತಿ ಕನ್ನಡದ ಹೆಸರಾಂತ ನಿರ್ಮಾಪಕರ ಮನೆಯ ಮೇಲೆ ಕೂಡ ತೆರಿಗೆ ಇಲಾಖೆಯವರು ದಾಳಿಯನ್ನ ಮಾಡಿದರು.

ಇನ್ನು ನಟ ಪುನೀತ್ ರಾಜಕುಮಾರ್ ಅವರ ಮನೆಯ ಮೇಲೆ ಕೂಡ IT ದಾಳಿ ಮಾಡಲಾಯಿತು, ಇನ್ನು ತಮ್ಮ ಮನೆಯ ಮೇಲೆ ಆದ IT ದಾಳಿಯ ಬಗ್ಗೆ ಪುನೀತ್ ರಾಜಕುಮಾರ್ ಹೇಳಿದ್ದೇನು, ಅವರ ಬಳಿ ಎಷ್ಟು ಆಸ್ತಿ ಇದೆ, ಏನೆಲ್ಲಾ ದಾಖಲೆಗಳು ಸಿಕ್ಕವು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Income Tax ride of Punith Rajakumar

ಇನ್ನು ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ IT ದಾಳಿ ನಡೆದ ಸಂದರ್ಭದಲ್ಲಿ ಅವರ ಮನೆಯಲ್ಲಿ ಪುನೀತ್ ರಾಜಕುಮಾರ್ ಮತ್ತು ಅವರ ಪತ್ನಿ ಇದ್ದರು, ಇನ್ನು ಅವರ ಮನೆಗೆ 8 ಜನ IT ಅಧಿಕಾರಿಗಳು ದಾಳಿಯನ್ನ ಮಾಡಿರುತ್ತಾರೆ.

ಇನ್ನು ಪುನೀತ್ ರಾಜಕುಮಾರ ಅವರ ಮನೆಯಲ್ಲಿ ಎಲ್ಲಾ ದಾಖಲೆಗಳನ್ನ ಪರಿಶೀಲನೆ ಮಾಡಿದರು IT ಅಧಿಕಾರಿಗಳು, ಇನ್ನು ಈ ಸಮಯದಲ್ಲಿ IT ಅಧಿಕಾರಿಗಳಿಗೆ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧ ಪಟ್ಟ ಕೆಲವು ಆಸ್ತಿಯ ವಿವರಗಳು ಸಿಕ್ಕಿದೆ.

ಇನ್ನು ಪುನೀತ್ ರಾಜಕುಮಾರ್ ಅವರು ಕೋರಮಂಗಲದಲ್ಲಿ ಕೆಲವು ಸೈಟ್ ಗಳನ್ನ ಹೊಂದಿದ್ದಾರಂತೆ, ಹೌದು ಪುನೀತ್ ರಾಜಕುಮಾರ್ ಕೋರಮಂಗಲದಲ್ಲಿ ಸುಮಾರು ಜಮೀನುಗಳನ್ನ ಹೊಂದಿದ್ದಾರೆ.

Income Tax ride of Punith Rajakumar

ನಿಮಗೆ ಗೊತ್ತಿರಬಹುದು ಕೋರಮಂಗಲ ಅಂದರೆ ಒಂದು ಹೈ ಟೆಕ್ ಸಿಟಿ ಮತ್ತು ಅದನ್ನ ಒಂದು ರೀತಿಯ ಹೈ ಫೈ ಏರಿಯಾ ಅಂತ ಕರೆದರೆ ತಪ್ಪಾಗಲ್ಲ, ಇನ್ನು ಇಂತಹ ಜಾಗದಲ್ಲಿ ಒಂದು ಎಕರೆ ಜಾಗ ಇದ್ದರೆ ಎಷ್ಟು ಕೋಟಿಗೆ ಬೆಲೆ ಬಾಳಬಹುದು ಅಂತ ನೀವೇ ಯೋಚನೆ ಮಾಡಿ ಸ್ನೇಹಿತರೆ.

ಇನ್ನು ಪುನೀತ್ ರಾಜಕುಮಾರ್ ಅವರು ಕೋರಮಂಗಲದಲ್ಲಿ ಕೆಲವು ಕಟ್ಟಡಗಳನ್ನ ಕೂಡ ನಿರ್ಮಾಣ ಮಾಡಿದ್ದರಂತೆ, ಇನ್ನು ಆ ಕಟ್ಟಡದ ಮೂಲಕ ತಿಂಗಳಿಗೆ ಸುಮಾರು ಬಾಡಿಗೆ ಹಣ ಕೂಡ ಪುನೀತ್ ರಾಜಕುಮಾರ್ ಅವರ ಹೆಸರಿಗೆ ಬರುತ್ತಿದೆಯಂತೆ. ಇನ್ನು ಪುನೀತ್ ರಾಜಕುಮಾರ್ ಕೋರಮಂಗಲದಲ್ಲಿ ಹ್ಯಾಂಗ್ ಒವರ್ ಹೋಟೆಲ್ ಕುಂಡ ಹೊಂದಿದ್ದಾರೆ, ಈ ಹೋಟೆಲ್ ಮೂಲಕ ಪುನೀತ್ ರಾಜಕುಮಾರ್ ಅವರಿಗೆ ಲಕ್ಷಾಂತರ ಹಣ ಆದಾಯ ಬರುತ್ತಿದೆಯಂತೆ.

ಇನ್ನು ಪುನೀತ್ ರಾಜಕುಮಾರ್ ಕೆಲವು ವೈನ್ ಶಾಪ್ ಕೂಡ ಹೊಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಇನ್ನು ಪುನೀತ್ ರಾಜಕುಮಾರ್ ಅವರು ದೊಡ್ಡ ವಾಣಿಜ್ಯ ವ್ಯವಹಾರಗಳನ್ನ ಮಾಡುತ್ತಾರಂತೆ.

ಇನ್ನು IT ಅಧಿಕಾರಿಗೆ ಪುನೀತ್ ರಾಜಕುಮಾರ್ ಮನೆಯಲ್ಲಿ ಕೆಲವು ಚಿನ್ನ ಮತ್ತು ಕ್ಯಾಶ್ ಕೂಡ ಸಿಕ್ಕಾವಂತೆ ಆದರೆ ಪುನೀತ್ ರಾಜಕುಮಾರ್ ಅವೆಲ್ಲದಕ್ಕೂ ದಾಖಲೆಗಳನ್ನ ಹೊಂದಿದ್ದಾರೆ ಎಂದು ಮಾಹಿತಿಗಳು ಹೇಳಿವೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Income Tax ride of Punith Rajakumar

Please follow and like us:
0
http://karnatakatoday.in/wp-content/uploads/2019/01/Income-tax-ride-to-Punith-Rajakumar-1024x576.jpghttp://karnatakatoday.in/wp-content/uploads/2019/01/Income-tax-ride-to-Punith-Rajakumar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ಜನವರಿ ಮೂರನೇ ತಾರೀಕು ಸ್ಯಾಂಡಲ್ ವುಡ್ ಗೆ ಒಂದು ದೊಡ್ಡ ಶಾಕ್ ಆಗಿತ್ತು ಅಂತ ಎಲ್ಲರಿಗೂ ತಿಳಿದಿರಬಹುದು. ಸರಿಸುಮಾರು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಕನ್ನಡದ ಸ್ಟಾರ್ ನಟರ ಮನೆಯ ಮೇಲೆ ತೆರಿಗೆ ಇಲಖೆಯ ಅಧಿಕಾರಿಗಳು ದಾಳಿ ಮಾಡಿದರು, ಇನ್ನು ಅದೇ ರೀತಿ ಕನ್ನಡದ ಹೆಸರಾಂತ ನಿರ್ಮಾಪಕರ ಮನೆಯ ಮೇಲೆ ಕೂಡ ತೆರಿಗೆ ಇಲಾಖೆಯವರು ದಾಳಿಯನ್ನ ಮಾಡಿದರು. ಇನ್ನು ನಟ ಪುನೀತ್ ರಾಜಕುಮಾರ್ ಅವರ ಮನೆಯ...Kannada News