India Loss the match

ಈ ಭಾರಿಯ ವಿಶ್ವ ಕಪ್ ಗೆಲ್ಲುವ ಬಲಿಷ್ಠ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೋಲುವುದರ ಮೂಲಕ ವಿಶ್ವ ಕಪ್ ಪಂದ್ಯಾವಳಿಗಳಿಂದ ಹೊರಗೆ ಬಿದ್ದಿದೆ. ಇನ್ನು ನ್ಯೂಜಿಲ್ಯಾಂಡ್ ವಿರುದ್ಧ 240 ರನ್ ಗಳಿಸಲಾಗದೆ ಹೊರಬಿದ್ದಿದ್ದು ನಿಜಕ್ಕೂ ಅಭಿಮಾನಿಗಳಿಗೆ ಬೇಸರವನ್ನ ಉಂಟುಮಾಡಿದೆ, ಇನ್ನು ಮೊದಲ ಪ್ರಮುಖ ಮೂರೂ ವಿಕೆಟ್ ಗಳನ್ನ ಕಳೆದುಕೊಂಡ ನಂತರವೂ ಕೂಡ ಹೋರಾಟವನ್ನ ಮುಂದುವರೆಸಿದ ಜಡೇಜಾ ಮತ್ತು ಧೋನಿ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದಗಳನ್ನ ಸಲ್ಲಿಸುತ್ತಿದ್ದಾರೆ.

ಇನ್ನು ಇದರ ಬೆನ್ನಲ್ಲೇ ಭಾರತದ ಸೋಲಿಗೆ ಕಾರಣಗಳನ್ನ ಹುಡುಕುತ್ತ ಹೊರಟ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಸೋಲಿಗೆ ನಿಜವಾದ ಕಾರಣ ಏನು ಅನ್ನುವುದನ್ನ ಹೊರಹಾಕಿದ್ದಾರೆ. ಹಾಗಾದರೆ ಕೊಹ್ಲಿ ಹೇಳಿದ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ನ್ಯೂಜಿಲ್ಯಾಂಡ್ ನೀಡಿದ 240 ರನ್ ಗಳ ಸುಲಭ ಗುರಿಯನ್ನ ಮುಟ್ಟಿ ಗೆದ್ದೇ ಬಿಟ್ಟೆವು ಎಂದು ಖುಷಿಯಲ್ಲಿ ಇದ್ದ ಭಾರತ ತಂಡಕ್ಕೆ ಹೆನ್ರಿ ಅವರು ಭಾರತದ ಪ್ರಮುಖ ವಿಕೆಟ್ ಗಳನ್ನ ಪಡೆಯುವುದರ ಮೂಲಕ ಭಾರತ ತಂಡಕ್ಕೆ ದೊಡ್ಡ ಆಘಾತವನ್ನ ನೀಡಿದರು. ಇನ್ನು ಪಂದ್ಯ ಮುಗಿಯಿತು ಅನ್ನುವಷ್ಟರಲ್ಲಿ ಜಡೇಜಾ ಮತ್ತು ಧೋನಿ ಗಟ್ಟಿಯಾಗಿ ನಿಂತು ಆದಿ ಗೆಲುವನ್ನ ತಂದುಕೊಡುವ ಭರವಸೆಯನ್ನ ನೀಡಿದರಾದರೂ ಅಂತಿಮವಾಗಿ ಭಾರತ ತಂಡ ಜಡೇಜಾ ಮತ್ತು ಧೋನಿ ಅವರನ್ನ ಕಳೆದುಕೊಳ್ಳುವುದರ ಮೂಲಕ ಸೋಲಿಗೆ ಶರಣಾಯಿತು.

India Loss the match

ಇನ್ನು ಸೋಲಿಗೆ ನಾನಾ ಕಾರಣಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿರುವ ಸಮಯದಲ್ಲಿ ನಾಯಕ ಕೊಹ್ಲಿ ಕೂಡ ಸೋಲಿಗೆ ನಿಜವಾದ ಕಾರಣ ಏನು ಅನ್ನುವುದನ್ನ ಹೇಳಿದ್ದಾರೆ. ಇನ್ನಿ ಕೊಹ್ಲಿ ಹೇಳಿದ ಪ್ರಕಾರ, ನಿಜಕ್ಕೂ ನಾವು ಪಂದ್ಯದ ಮೊದಲಾರ್ಧದಲ್ಲಿ ತುಂಬಾ ಚನ್ನಾಗಿ ಆಡಿದ್ದೆವು ಮತ್ತು ಮೊದಲಾರ್ಧದಲ್ಲಿ ನಾವು ಏನು ಮಾಡಬೇಕು ಅಂದುಕೊಂಡಿದ್ದೇವೋ ಅದನ್ನ ಮಾಡಿ ಆಗಿತ್ತು.

ಇನ್ನು ಗುರಿ ಬೆನ್ನತ್ತಲು ಆಗುವ ಮೊತ್ತಕ್ಕೆ ನ್ಯೂಜಿಲ್ಯಾಂಡ್ ತಂಡವನ್ನ ಕಟ್ಟಿ ಹಾಕಿದ್ದರು ನಮ್ಮ ಬೌಲರ್ ಗಳು, ಆದರೆ ನ್ಯೂಜಿಲ್ಯಾಂಡ್ ತಂಡದ ಬೌಲಿಂಗ್ ಎಲ್ಲವನ್ನ ಬದಲಾಯಿಸಿತು ಎಂದು ಹೇಳಿದರು ಕೊಹ್ಲಿ. ಟಾಪ್ ಆರ್ಡರ್ ಆಟಗಾರರ ವಿಫಲತೆಯ ನಂತರ ಉಳಿದ ಆಟಗಾರರ ಮೇಲೆ ಒತ್ತಡವನ್ನ ಹಿಡಿದಿಟ್ಟ ನ್ಯೂಜಿಲ್ಯಾಂಡ್ ತಂಡ ನಿಜಕ್ಕೂ ಗೆಲುವನ್ನ ತನ್ನತ್ತ ಮಾಡಿಕೊಂಡಿತ್ತು ಮತ್ತು ನಮ್ಮ ಬ್ಯಾಟರ್ ಗಳು ಕೆಟ್ಟ ಹೊಡೆತಗಳನ್ನ ಹೊಡೆದು ಔಟ್ ಆದರೂ ಎಂದು ಹೇಳಿದರು ಕೊಹ್ಲಿ.

India Loss the match

ಇನ್ನು ಮುಂದುವರೆಸಿದ ಕೊಹ್ಲಿ, ವಿಶ್ವ ಕಪ್ ನಲ್ಲಿ ನಮ್ಮ ತೋರಿದ ಪ್ರದರ್ಶನದ ಬಗ್ಗೆ ನನಗೆ ತೃಪ್ತಿ ಇದೆ ಎಂದು ಹೇಳಿದ್ದಾರೆ, ಜಡೇಜಾ ಈ ವಿಶ್ವ ಕಪ್ ನಲ್ಲಿ ಕೇವಲ ಎರಡೇ ಪಂದ್ಯಗಳನ್ನ ಆಡಿದರು ಕೂಡ ಅವರ ಆಟ ನಿಜಕ್ಕೂ ಅದ್ಭುತವಾಗಿತ್ತು ಮತ್ತು ಧೋನಿ, ಜಡೇಜಾ ಹಾಗು ಇಡೀ ಭಾರತ ತಂಡ ಮತ್ತು ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ ಕೊಹ್ಲಿ.

ಸ್ನೇಹಿತರೆ ನಿಮ್ಮ ಪ್ರಕಾರ ಭಾರತದ ಸೋಲಿಗೆ ಕಾರಣ ಏನು ಮತ್ತು ಭಾರತ ತಂಡವು ವಿಶ್ವ ಕಪ್ ನಲ್ಲಿ ತೋರಿದ ಪ್ರದರ್ಶನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಭಾರತ ತಂಡದ ಅಭಿಮಾನಿಗೆ ತಲುಪಿಸಿ.

India Loss the match

Please follow and like us:
0
http://karnatakatoday.in/wp-content/uploads/2019/07/Kohli-Statement-for-loss-the-match-1024x576.jpghttp://karnatakatoday.in/wp-content/uploads/2019/07/Kohli-Statement-for-loss-the-match-150x104.jpgeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಲೈಫ್ ಸ್ಟೈಲ್ಈ ಭಾರಿಯ ವಿಶ್ವ ಕಪ್ ಗೆಲ್ಲುವ ಬಲಿಷ್ಠ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೋಲುವುದರ ಮೂಲಕ ವಿಶ್ವ ಕಪ್ ಪಂದ್ಯಾವಳಿಗಳಿಂದ ಹೊರಗೆ ಬಿದ್ದಿದೆ. ಇನ್ನು ನ್ಯೂಜಿಲ್ಯಾಂಡ್ ವಿರುದ್ಧ 240 ರನ್ ಗಳಿಸಲಾಗದೆ ಹೊರಬಿದ್ದಿದ್ದು ನಿಜಕ್ಕೂ ಅಭಿಮಾನಿಗಳಿಗೆ ಬೇಸರವನ್ನ ಉಂಟುಮಾಡಿದೆ, ಇನ್ನು ಮೊದಲ ಪ್ರಮುಖ ಮೂರೂ ವಿಕೆಟ್ ಗಳನ್ನ ಕಳೆದುಕೊಂಡ ನಂತರವೂ ಕೂಡ ಹೋರಾಟವನ್ನ ಮುಂದುವರೆಸಿದ ಜಡೇಜಾ ಮತ್ತು ಧೋನಿ ಅವರಿಗೆ...Kannada News