ಧೋನಿ ನಿವೃತ್ತಿ ಕುರಿತು ಹಲವಾರು ಮಂದಿ ವಿವಿಧ ರೀತಿಯಲ್ಲಿ ಮಾತಾಡುತ್ತಿದ್ದರೆ. ಮಹಿ ಯಾವಾಗ ಕೊಡುತ್ತಾರೆ ರಾಜೀನಾಮೆ, ಮುಂದಿನ ಟ್ವೆಂಟಿ ಟ್ವೆಂಟಿ ಕಪ್ ಆಡುತ್ತಾರಾ ಇಲ್ಲವೋ ಹೀಗೆ ಗುಮಾನಿಗಳು ಏಳುತ್ತಲೇ ಇವೆ. ಇನ್ನು ಇದೆಲ್ಲಕಿಂತ ಮುಂಚೆ ಸದ್ಯಕ್ಕೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಆಯ್ಕೆಯಾಗುವುದು ಕಷ್ಟ ಎಂದು ಹೀಗೆಲ್ಲ ಹೇಳಲಾಗುತ್ತಿದೆ. ಬಿಸಿಸಿಐ ಧೋನಿಯನ್ನು ಪ್ರಥಮ ವಿಕೆಟ್ ಕೀಪರ್ ಆಗಿ ಪರಿಗಣಿಸುವುದಿಲ್ಲ ಎಂದು ಹೇಳುತ್ತಿದೆ ಎನ್ನುತ್ತಿದೆ. ಸದ್ಯಕ್ಕೆ ಇವೆಲ್ಲದಕ್ಕೆ ಧೋನಿಯೇ ಈಗ ಉತ್ತರ ನೀಡಿದ್ದಾರೆ. ಮುಂದಿನ ಎರಡು ತಿಂಗಳು ಕಾಲ ತಾನು ಎಲ್ಲಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಧೋನಿ ತಗೆದುಕೊಂಡಿರುವ ಆ ಮಹತ್ವದ ನಿರ್ಧಾರ ಏನು ಗೊತ್ತಾ. ಧೋನಿ ಈ ಕುರಿತು ಶನಿವಾರ ತನ್ನ ನಿರ್ಧಾರ ತಿಳಿಸಿದ್ದು, ವಿಂಡೀಸ್ ವಿರುದ್ಧದ ಪಂದ್ಯದ ಬದಲು, ಟೀಂ ಇಂಡಿಯಾದಿಂದ ಎರಡು ತಿಂಗಳ ಕಾಲ ದೂರವಿದ್ದು, ತನ್ನ ಆರ್ಮಿ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬಿಸಿಸಿಐನ ಆಯ್ಕೆ ಸಮಿತಿಯ ಸಭೆಗೂ ಮೊದಲು ಧೋನಿ ತನ್ನ ನಿರ್ಧಾರ ಪ್ರಕಟಿಸಿದ್ದು, ತನ್ನ ಪ್ಯಾರಾಮಿಲಿಟರಿ ಪಡೆಯನ್ನು ಸೇರಿಕೊಂಡು, ಅಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎನ್ನಲಾಗಿದೆ. ಐಸಿಸಿ ವಿಶ್ವಕಪ್ ಟೂರ್ನಿಯ ಸೋಲಿನ ಬಳಿಕ ಭಾರತ ತಂಡ ತನ್ನ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಇದರ ನಡುವೆಯೇ ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರ ಮಾಧ್ಯಮಗಳಿಗೆ ಮಾತ್ರವಲ್ಲ ಬಿಸಿಸಿಐ ಆಯ್ಕೆ ಸಮಿತಿಗೂ ಗೊಂದಲ ಮೂಡಿಸಿತ್ತು.

ವೆಸ್ಟ್ ಇಂಡೀಸ್ ಸರಣಿಗೆ ಧೋನಿ ಅವರನ್ನು ಪರಿಗಣಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿ ಇರುವಾಗಲೇ ಧೋನಿ ಅಚ್ಚರಿ ಮೂಡಿಸಿದ್ದಾರೆ.ವಿಂಡೀಸ್ ಪ್ರವಾಸದಿಂದ ಹೊರಗುಳಿಯುವ ಧೋನಿ ನಿರ್ಧಾರದ ಬಳಿಕ ರಿಷಬ್ ಪಂತ್ ಧೋನಿ ಜಾಗದಲ್ಲಿ ವಿಕೆಟ್‌ಕೀಪರ್ ಆಗಿರುವ ಸಾಧ್ಯತೆಯಿದೆ. ಮಹೇಂದ್ರ ಸಿಂಗ್ ಧೋನಿ ಓರ್ವ ಕ್ರಿಕೆಟಿಗನಾಗಿಯೇ ಎಲ್ಲರಿಗೂ ಚಿರಪರಿಚಿತ. ಆದರೆ ಧೋನಿ ಓರ್ವ ಸೈನಿಕ ಎಂದು ಸಾಕಷ್ಟು ಮಂದಿಗೆ ತಿಳಿದಿಲ್ಲ.

ಧೋನಿ ಅವರ ಕ್ರಿಕೆಟ್ ಸೇವೆಯನ್ನು ಗುರುತಿಸಿ ಭಾರತೀಯ ಸೇನೆ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಿದೆ. ಇದೇ ಕಾರಣಕ್ಕೆ ಧೋನಿ ಇನ್ನೆರಡು ತಿಂಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿರುವ ಧೋನಿ ತಮ್ಮ ಸಹೋದ್ಯೋಗಿ ಸೈನಿಕರೊಂದಿಗೆ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ಕ್ಯಾಂಪ್ ನಲ್ಲಿ ಸಮಯ ಕಳೆಯಲಿದ್ದಾರೆ.

ಆ ಮೂಲಕ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದಾರೆ.ಆದರೆ ಧೋನಿ ಸೇನಾ ಕರ್ತವ್ಯಕ್ಕೆ ಮಾತ್ರ ತೆರಳುತ್ತಿದ್ದಾರೆ. ಅದರ ಹೊರತು ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಅಧಿಕಾರಿಗಳೇ ಬಹಿರಂಗ ಪಡಿಸಿದ್ದಾರೆ. ಆ ಮೂಲಕ ಧೋನಿ ತಮ್ಮ ಅಲಭ್ಯತೆ ಸ್ಪಷ್ಟವಾಗಿದ್ದು, ಆಯ್ಕೆ ಸಮಿತಿ ಗೊಂದಲ ಕೂಡ ನಿವಾರಣೆಯಾಗಿದೆ.

Please follow and like us:
error0
http://karnatakatoday.in/wp-content/uploads/2019/07/dhoni-regiment-1024x576.jpghttp://karnatakatoday.in/wp-content/uploads/2019/07/dhoni-regiment-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಕ್ರಿಕೆಟ್ಧೋನಿ ನಿವೃತ್ತಿ ಕುರಿತು ಹಲವಾರು ಮಂದಿ ವಿವಿಧ ರೀತಿಯಲ್ಲಿ ಮಾತಾಡುತ್ತಿದ್ದರೆ. ಮಹಿ ಯಾವಾಗ ಕೊಡುತ್ತಾರೆ ರಾಜೀನಾಮೆ, ಮುಂದಿನ ಟ್ವೆಂಟಿ ಟ್ವೆಂಟಿ ಕಪ್ ಆಡುತ್ತಾರಾ ಇಲ್ಲವೋ ಹೀಗೆ ಗುಮಾನಿಗಳು ಏಳುತ್ತಲೇ ಇವೆ. ಇನ್ನು ಇದೆಲ್ಲಕಿಂತ ಮುಂಚೆ ಸದ್ಯಕ್ಕೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಆಯ್ಕೆಯಾಗುವುದು ಕಷ್ಟ ಎಂದು ಹೀಗೆಲ್ಲ ಹೇಳಲಾಗುತ್ತಿದೆ. ಬಿಸಿಸಿಐ ಧೋನಿಯನ್ನು ಪ್ರಥಮ ವಿಕೆಟ್ ಕೀಪರ್ ಆಗಿ ಪರಿಗಣಿಸುವುದಿಲ್ಲ ಎಂದು ಹೇಳುತ್ತಿದೆ ಎನ್ನುತ್ತಿದೆ. ಸದ್ಯಕ್ಕೆ ಇವೆಲ್ಲದಕ್ಕೆ ಧೋನಿಯೇ ಈಗ...Film | Devotional | Cricket | Health | India