indian film industry

ಭಾರತೀಯ ಚಿತ್ರರಂಗಕ್ಕೆ ಯಾಕೋ ಕಾಲ ಸರಿ ಇಲ್ಲ ಅನಿಸುತ್ತದೆ, ಕೆಲವು ನಟರು ದಿಡೀರ್ ಸಾವನ್ನಪ್ಪಿದರೆ ಕೆಲವು ನಟರು ಪ್ರಾಣ ಹಿಂಡುವ ಕಾಯಿಲೆಯಿಂದ ಬಳಲುತಿದ್ದಾರೆ.

ಹೌದು ಬಾಲಿವುಡ್ ಖ್ಯಾತ ಸಿಂಗರ್ ಬಾರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಇನ್ನು ಹಿರಿಯ ನಟರಿಬ್ಬರು ಆಸ್ಪತ್ರೆ ಸೇರಿದ್ದಾರ, ಬಾಲಿವುಡ್ ಸಿನಿ ಲೋಕದ ಹಿರಿಯ ನಟ ದಿಲೀಪ್ ಕುಮಾರ್ ( 95 ) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

indian film industry

ನಮೋನಿಯ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಬಾನುವಾರ ರಾತ್ರಿ ಮುಂಬೈ ನ ಲೀಲಾವತಿ ಆಸ್ಪತ್ರೆಗೆ ಸರಿಸಲಾಗಿದೆ, ಪರಿಸ್ಥಿತಿ ಸೀರಿಯಸ್ ಎಂದು ತಿಳಿದು ಬಂದಿದೆ. ದೇವದಾಸ್ ಕರ್ಮಾ, ಮುಘಲ್ ಆ ಅಜಂ ಅಂತ ಹಿಟ್ ಚಿತ್ರಗಳನ್ನು ಕೊಟ್ಟ ದೀಲಿಪ್ ಕುಮಾರ್ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮವಿ ಭೂಷಣ ಅವರಿಗೆ ಲಭಿಸಿದೆ.

ಇನ್ನು ಬಾಲಿವುಡ್ ನ ಖ್ಯಾತ ಗಾಯಕ, ಆಲ್ಬಮ್ ರಿಮಿಕ್ ಹಾಡುಗಳಿಂದ ಸಿನಿ ಪ್ರಿಯರ ಹೃದಯ ಗೆದ್ದ ನಿತಿನ್ ಬಾಲೀ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ, ಮಲಾಡ್ ನಿಂದ ಬೊರಿವಲ್ಲಿಗೆ ತೆರಳುತ್ತಿದ್ದಾಗ ಕಾರು ರಸ್ತೆ ವಿಭಜನೆಗೆ ಡಿಕ್ಕಿ ಹೊಡೆದ ಕಾರಣ ತೀವ್ರವಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗಿತ್ತು.

indian film industry

ಮುಖದ ಮೇಲೆ ಉಂಟಾದ ಗಾಯಗಳಿಗೆ ಹೋಲಿಗೆ ಹಾಕಿ, ಡಿಶ್ಚಾರ್ಜ್ ಮಾಡಲಾಗಿತ್ತು, ಆದರೆ ಮಲಾಡ್ ಗೆ ತೆರಳುತ್ತಿದ್ದಂತೆ ಏಕಾಏಕಿ ರಕ್ತ ವಾಂತಿ ಆಗಿದ್ದು ನಿತಿನ್ ಬಾಲೀ ಲೊ ಬಿಪಿ ಹಾಗೆ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟವಾಗಿದೆ.

ಇಷ್ಟಕ್ಕೆ ಮುಗಿಯದೆ ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಅಮೇರಿಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇನ್ನು ಇವರು ಕ್ಯಾನ್ಸೆರ್ ನಿಂದ ಬಳಲುತ್ತಿರುವ ಸೋನಾಲಿ ಬೇಂದ್ರೆಯವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಿಷಿ ಕಪೂರ್ ಅವರಿಗೆ ಕ್ಯಾನ್ಸೆರ್ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ಕುಟುಂಬ ಮೂಲದವರು ಸುಳ್ಳು ಎಂದಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರು ಖ್ಯಾತ ನಟರು ಬೇಗನೆ ಗುಣಮುಖರಾಗಲಿ ಎಂದು ಆಶಿಸೋಣ.

indian film industry

Please follow and like us:
0
http://karnatakatoday.in/wp-content/uploads/2018/10/kannada-star-singers-1024x576.jpghttp://karnatakatoday.in/wp-content/uploads/2018/10/kannada-star-singers-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಭಾರತೀಯ ಚಿತ್ರರಂಗಕ್ಕೆ ಯಾಕೋ ಕಾಲ ಸರಿ ಇಲ್ಲ ಅನಿಸುತ್ತದೆ, ಕೆಲವು ನಟರು ದಿಡೀರ್ ಸಾವನ್ನಪ್ಪಿದರೆ ಕೆಲವು ನಟರು ಪ್ರಾಣ ಹಿಂಡುವ ಕಾಯಿಲೆಯಿಂದ ಬಳಲುತಿದ್ದಾರೆ. ಹೌದು ಬಾಲಿವುಡ್ ಖ್ಯಾತ ಸಿಂಗರ್ ಬಾರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಇನ್ನು ಹಿರಿಯ ನಟರಿಬ್ಬರು ಆಸ್ಪತ್ರೆ ಸೇರಿದ್ದಾರ, ಬಾಲಿವುಡ್ ಸಿನಿ ಲೋಕದ ಹಿರಿಯ ನಟ ದಿಲೀಪ್ ಕುಮಾರ್ ( 95 ) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮೋನಿಯ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಬಾನುವಾರ ರಾತ್ರಿ ಮುಂಬೈ...Kannada News