ಕ್ರಿಕೆಟ್ ಆಟ ಜಗತ್ತಿನಲ್ಲಿ ಎಷ್ಟು ಪ್ರಸಿದ್ದಿ ಪಡೆದಿದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಬಹುಷಃ ಪುಟ್ಬಾಲ್ ನಂತರ ಅತಿ ಹೆಚ್ಚು ಜನರು ವೀಕ್ಷಿಸುವ ಆಟ ಎನ್ನಬಹುದು. ಇನ್ನು ಭಾರತದ ವಿಷಯಕ್ಕೆ ಬಂದರೆ ಕ್ರಿಕೆಟ್ ಇಲ್ಲಿ ಪ್ರತಿಯೊಬ್ಬರ ಜೀವ ಎನ್ನಬಹುದು. ರಾಷ್ಟೀಯ ಕ್ರೀಡೆಗಿಂತ ಈ ಆಟ ಭಾರತೀಯರನ್ನು ಹೆಚ್ಚು ಸೆಳೆದಿದೆ. ಇನ್ನು ಈ ಕ್ರಿಕೆಟ್ ಜಗತ್ತಿನಲ್ಲಿ ಅದೆಷ್ಟೋ ದಾಖಲೆಗಳು ರಚಿತವಾಗಿವೆ ಹಾಗು ದಿನೇ ದಿನೇ ಒಂದೊಂದೇ ದಾಖಲೆಗಳು ಕೂಡ ಮುರಿಯುತ್ತ ಬಂದಿದೆ. ಭಾರತದ ಹೆಸರಾಂತ ಹಾಗು ವಿಶ್ವ ಕ್ರಿಕೆಟ್ ನಲ್ಲಿ ಛಾಪು ಮೂಡಿಸಿದ ಅದೆಷ್ಟೋ ಭಾರತೀಯ ಕ್ರಿಕೆಟಿಗರಿದ್ದಾರೆ. ಇವರ ಹೆಸರಿನಲ್ಲಿರುವ ಈ ಕೆಲವು ದಾಖಲೆಗಳನ್ನು ಇದುವರೆಗೂ ಕೂಡ ಯಾರು ಮುರಿಯಲು ಸಾಧ್ಯವಾಗಿಲ್ಲ. ಹಾಗಿದ್ದರೆ ಭಾರತೀಯರು ಮಾಡಿದ ಆ ವಿಶಿಷ್ಟ ದಾಖಲೆ ಏನು ಎನ್ನುವುದನ್ನು ತಿಳಿಯೋಣ ಬನ್ನಿ. ಮೊದಲನೆಯದಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 21 ಮೇಡನ್‌ಗಳನ್ನು ಎಸೆದ ದಾಖಲೆ ಬಾಪು ನಾಡ್ಕರ್ಣಿಯವರ ಹೆಸರಲ್ಲಿದೆ. ಈ ದಾಖಲೆಯನ್ನು 52 ವರ್ಷಗಳಿಂದ ಯಾರೂ ಕೂಡ ಬೀಟ್ ಮಾಡಿಲ್ಲ. ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ ಇದೊಂದು ದಾಖಲೆ ಇನ್ನು ಹಾಗೆ ಉಳಿದಿದೆ.

ಇನ್ನು ಭಾರತದ ತಂಡ ಕಂಡ ಉದಯೋನ್ಮುಖ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು 100 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದರೂ ವಿಶ್ವಕಪ್ ಆಡಲು ಸಾಧ್ಯವಾಗದ ವಿಶ್ವದ ಏಕೈಕ ಆಟಗಾರ ಅಪರೂಪದ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವಿನೂತನ ದಾಖಲೆ ಮಾಡಿರುಇವ ಇವರ ಈ ಹೆಸರಾಕ್ಲಿ ಇದೊಂದು ವಿಶೇಷ ದಾಖಲೆ ಕೂಡ ಇದೆ. ಭಾರತದ ಪರವಾಗಿ ಅತಿ ವೇಗದ ಡಬಲ್ ಸೆಂಚುರಿ ಮತ್ತು ಟ್ರಿಪಲ್ ಸೆಂಚುರಿ ಗಳಿಸಿದ  ದಾಖಲೆ ಹೊಂದಿದ್ದಾರೆ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.

ಕೇವಲ 42 ಏಕದಿನ ಪಂದ್ಯಗಳ ನಂತರ ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ತಲುಪಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದೆ. ಇದು ಕೂಡ ಬಹಳ ಅಪರೂಪದ ದಾಖಲೆಯಾಗಿದೆ.  ಭಾರತ ತಂಡದ ಕಪ್ತಾನರಲ್ಲಿ ಒಬ್ಬರಾದ ಮೊಹಮ್ಮದ್ ಅಜರುದ್ದೀನ್ ಅವರ ಹೆಸರಿನಲ್ಲಿ ಅದ್ಭುತ ದಾಖಲೆ ಇದೆ. 3 ಟೆಸ್ಟ್ ಪಂದ್ಯಗಳಲ್ಲಿ 3 ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.  ಪಾದಾರ್ಪಣ ಸಮಯದಲ್ಲೇ ಈ ದಾಖಲೆ ಇವರು ಮಾಡಿರುವುದು ಬಹಳ ವಿಶೇಷ .

ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್, ಭಾರತ ಮಾತ್ರವಲ್ಲ ವಿಶ್ವ ಕ್ರಿಕೆಟ್ ನ ಲೆಜೆಂಡ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ನೂರಾರು ದಾಖಲೆಗಳಿವೆ. ಅವರು ಕ್ರಿಕೆಟ್ ಇತಿಹಾಸದಲ್ಲಿ 782 ಪಂದ್ಯಗಳನ್ನು ಆಡಿದ್ದಾರೆ. ಅವರು ಎಂದಿಗೂ 58 ಮತ್ತು 75 ಸ್ಕೋರ್ ಗಳನ್ನೂ ಇಂದಿಗೂ ಕೂಡ ಗಳಿಸಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ 3 ಡಬಲ್ ಸೆಂಚುರಿ ಗಳಿಸಿದ ವಿಶ್ವದ ಏಕೈಕ ಆಟಗಾರ ರೋಹಿತ್ ಶರ್ಮಾ.

ಇನ್ನು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 10,000 ಮತ್ತು 11000 ರನ್ ಗಳಿಸಿದ ಅತಿ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ. ಟಿ 20 ಅಂತರಾಷ್ಟ್ರೀಯ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಗಳಿಸಿದ ಏಕೈಕ ಆಟಗಾರ ಯುವರಾಜ್ ಸಿಂಗ್. ಸದ್ಯಕ್ಕೆ ಈ ಎಲ್ಲ ದಾಖಲೆಗಳನ್ನು ಯಾರು ಕೂಡ ಮುರಿದಿಲ್ಲ.

Please follow and like us:
error0
http://karnatakatoday.in/wp-content/uploads/2020/02/indian-cricket-1024x576.jpghttp://karnatakatoday.in/wp-content/uploads/2020/02/indian-cricket-150x104.jpgKarnataka Trendingಅಂಕಣಕ್ರಿಕೆಟ್ಕ್ರಿಕೆಟ್ ಆಟ ಜಗತ್ತಿನಲ್ಲಿ ಎಷ್ಟು ಪ್ರಸಿದ್ದಿ ಪಡೆದಿದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಬಹುಷಃ ಪುಟ್ಬಾಲ್ ನಂತರ ಅತಿ ಹೆಚ್ಚು ಜನರು ವೀಕ್ಷಿಸುವ ಆಟ ಎನ್ನಬಹುದು. ಇನ್ನು ಭಾರತದ ವಿಷಯಕ್ಕೆ ಬಂದರೆ ಕ್ರಿಕೆಟ್ ಇಲ್ಲಿ ಪ್ರತಿಯೊಬ್ಬರ ಜೀವ ಎನ್ನಬಹುದು. ರಾಷ್ಟೀಯ ಕ್ರೀಡೆಗಿಂತ ಈ ಆಟ ಭಾರತೀಯರನ್ನು ಹೆಚ್ಚು ಸೆಳೆದಿದೆ. ಇನ್ನು ಈ ಕ್ರಿಕೆಟ್ ಜಗತ್ತಿನಲ್ಲಿ ಅದೆಷ್ಟೋ ದಾಖಲೆಗಳು ರಚಿತವಾಗಿವೆ ಹಾಗು ದಿನೇ ದಿನೇ ಒಂದೊಂದೇ ದಾಖಲೆಗಳು ಕೂಡ ಮುರಿಯುತ್ತ...Film | Devotional | Cricket | Health | India