Indian temple rules

ದೇವಾಸ್ಥವನ್ನ ಒಂದು ಶಾಂತಿಯ ಧಾಮ ಮತ್ತು ದೇವರು ನೆಲೆಸಿರುವ ಸ್ಥಳ, ನಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಒಮ್ಮೆ ದೇವಸ್ಥಾನಕ್ಕೆ ಹೋದರೆ ಆ ಕಷ್ಟಗಳನ್ನೆಲ್ಲ ಮರೆತುಬಿಡುತ್ತೇವೆ ನಾವು, ಇದಕ್ಕೆ ಕಾರಣ ದೇವಸ್ಥಾನದ ದೇವರ ಶಕ್ತಿ.

ಇನ್ನು ಕೆಲವರು ದೇವಾಲಯಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನ ಮಾಡುತ್ತಾರೆ, ನಾವು ಮಾಡುವ ಈ ಸಣ್ಣ ಪುಟ್ಟ ತಪ್ಪುಗಳಿಂದ ನಾವು ಹಲವು ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಮತ್ತು ನಮಗೆ ದೋಷ ಕೂಡ ತಟ್ಟಿಕೊಳ್ಳುತ್ತದೆ. ಇನ್ನು ಕೆಲವು ತಪ್ಪುಗಳ ಜನರಿಗೆ ಅರಿವೇ ಇರುವುದಿಲ್ಲ, ಹಾಗಾದರೆ ದೇವಾಲಯಗಳಲ್ಲಿ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Indian temple rules

ಸ್ನೇಹಿತರೆ ಜೀವನದಲ್ಲಿ ಯಾವುದೇ ವಿಷಯವನ್ನ ತೆಗೆದುಕೊಳ್ಳಿ ಅದಕ್ಕೆ ಒಂದು ವಿಧಿ ವಿಧಾನ ಇದ್ದೆ ಇರುತ್ತದೆ, ಹಾಗಾಗಿ ದೇವಸ್ಥಾನಗಳಲ್ಲಿ ಕೆಲವು ವಿಷಯಗಳನ್ನ ಸರಿಯಾಗಿ ಪಾಲನೆ ಮಾಡಿದರೆ ತುಂಬಾ ಒಳ್ಳೆಯದು. ಮೊದಲನೆಯದಾಗಿ ದೇವಸ್ಥಾನದಲ್ಲಿ ಜೋರಾಗಿ ಮಾತನಾಡುವುದು ಮತ್ತು ನಗುವುದು ಮಾಡಬಾರದು, ಯಾಕೆ ಅಂದರೆ ನಾವು ಜೋರಾಗಿ ಮಾತನಾಡುವುದರಿಂದ ಮತ್ತು ನಗಾಡುವುದರಿಂದ ನಮ್ಮ ಮನಸ್ಸಿನ ಏಕಾಗ್ರತೆ ಕಡಿಮೆ ಆಗುತ್ತದೆ ಮತ್ತು ದೇವರ ಧ್ಯಾನಕ್ಕೆ ಅಡ್ಡಿಯನ್ನ ಉಂಟು ಮಾಡುತ್ತದೆ.

ಇನ್ನು ಎರಡನೆಯದಾಗಿ ದೇವಸ್ಥಾನದಲ್ಲಿ ಯಾರಾದರೂ ಪ್ರಾರ್ಥನೆಯನ್ನ ಮಾಡುತ್ತಿದ್ದಾಗ ಅವರ ಮುಂದೆ ಹೋಗಿ ನಾವು ಇಲ್ಲಬಾರದು ಅಥವಾ ಅವರ ಮುಂಡುಗಡೆಯಿಂದ ನಡೆದುಕೊಂಡು ಹೋಗಬಾರದು, ಹೀಗೆ ಮಾಡುವುದರಿಂದ ಆ ವ್ಯಕ್ತಿಯ ಪ್ರಾರ್ಥನೆಗೆ ನಾವು ಭಂಗ ಮಾಡಿದಂತೆ ಆಗುತ್ತದೆ.

ಇನ್ನು ಮೂರನೆಯದಾಗಿ ಕೆಲವರಿಗೆ ಹೇಗೆ ಪ್ರದಕ್ಷಿಣೆ ಹಾಕಬೇಕು ಎಂದು ತಿಳಿದಿರುವುದಿಲ್ಲ ಮತ್ತು ಯಾವಾಗಲು ಅಪ್ರದೀಕ್ಷಿಣೆಯನ್ನ ಹಾಕುತ್ತಾರೆ ಅದೂ ಅಶುಭ, ಸ್ನೇಹಿತರೆ ಯಾವಾಗಲು ಬಲಬದಿಯಿಂದ ಪ್ರದಕ್ಷಿಣೆಯನ್ನ ಹಾಕಬೇಕು ಮತ್ತು ಶಿವಲಿಂಗಕ್ಕೆ ಮಾತ್ರ ಅರ್ಧ ಸುತ್ತನ್ನ ಹಾಕಬೇಕು.

Indian temple rules

ಇನ್ನು ಮುಖ್ಯವಾದ ವಿಷಯ ಏನು ಅಂದರೆ ಚರ್ಮದಿಂದ ಮಾಡಿದ ಬೆಲ್ಟ್ ಧರಿಸಿ ಯಾವುದೇ ಕಾರಾಣಕ್ಕೂ ದೇವಸ್ಥಾನಕ್ಕೆ ಹೋಗಬಾರದು ಅಥವಾ ಚರ್ಮದ ಯಾವುದೇ ವಸ್ತುವನ್ನ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಬಾರದು, ಸ್ನೇಹಿತರೆ ಚರ್ಮವನ್ನ ಅಶುದ್ಧವೆಂದು ಪರಿಗಣಿಸಲಾಗಿದೆ.

ಇನ್ನು ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ದೇವರ ಮೂರ್ತಿಯ ಎದುರುಗಡೆ ನಿಲ್ಲಬಾರದು, ಯಾಕೆ ಅಂದರೆ ದೇವರ ಮೂರ್ತಿಯಿಂದ ಹೊರಬರುವ ಪ್ರಭಾವಶಾಲಿ ಶಕ್ತಿಯನ್ನ ತಡೆದುಕೊಳ್ಳುವ ಶಕ್ತಿ ನಮ್ಮ ದೇಹಕ್ಕೆ ಇರುವುದಿಲ್ಲ.

ಸ್ನೇಹಿತರೆ ನೀವು ಇನ್ನುಮುಂದೆ ದೇವಸ್ಥಾನಕ್ಕೆ ಹೋದಾಗ ಈ ನಿಯಮಗಳನ್ನ ಪಾಲನೆ ಮಾಡಿ ದೇವರ ಅನುಗ್ರಹವನ್ನ ಪಡೆದುಕೊಳ್ಳಿ, ಸ್ನೇಹಿತರೆ ಈ ಮಾಹಿತಿಯನ್ನ ದೇವಸ್ಥಾನಕ್ಕೆ ಹೋಗುವ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Indian temple rules

Please follow and like us:
error0
http://karnatakatoday.in/wp-content/uploads/2019/07/Indian-temple-rules-1-1024x576.jpghttp://karnatakatoday.in/wp-content/uploads/2019/07/Indian-temple-rules-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲದೇವಾಸ್ಥವನ್ನ ಒಂದು ಶಾಂತಿಯ ಧಾಮ ಮತ್ತು ದೇವರು ನೆಲೆಸಿರುವ ಸ್ಥಳ, ನಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಒಮ್ಮೆ ದೇವಸ್ಥಾನಕ್ಕೆ ಹೋದರೆ ಆ ಕಷ್ಟಗಳನ್ನೆಲ್ಲ ಮರೆತುಬಿಡುತ್ತೇವೆ ನಾವು, ಇದಕ್ಕೆ ಕಾರಣ ದೇವಸ್ಥಾನದ ದೇವರ ಶಕ್ತಿ. ಇನ್ನು ಕೆಲವರು ದೇವಾಲಯಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನ ಮಾಡುತ್ತಾರೆ, ನಾವು ಮಾಡುವ ಈ ಸಣ್ಣ ಪುಟ್ಟ ತಪ್ಪುಗಳಿಂದ ನಾವು ಹಲವು ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಮತ್ತು ನಮಗೆ ದೋಷ ಕೂಡ ತಟ್ಟಿಕೊಳ್ಳುತ್ತದೆ. ಇನ್ನು ಕೆಲವು...Film | Devotional | Cricket | Health | India