ನಮ್ಮ ದೈನಂದಿನ ಜೀವನದಲ್ಲಿ ಯಾವುದಾದರೂ ಒಂದ್ಕಕಾಗಿ ಯಾರನ್ನಾದರೂ ಅವಲಂಬಿಸುವ ಪರಿಸ್ಥಿತಿ ಇದೆ ಇರುತ್ತದೆ ಮತ್ತು ಹೀಗೆ ಅಕ್ಕಪಕ್ಕದವರಿಂದ ಕೇಳಿ ತಗೆದುಕೊಂಡು ಸೌಹಾರ್ದತೆಯಿಂದ ಬದುಕು ಸಾಗಿಸುವುದು ಭಾರತೀಯರ ಮುಖ್ಯ ಗುಣಲಕ್ಷಣ. ಇನ್ನು ನಮ್ಮ ಪೂರ್ವಜರು ಹೇಳಿರುವ ಹಲವಾರು ವಿಷಯಗಳು ನಮ್ಮನ್ನು ಚಕಿತಗೊಳಿಸುತ್ತದೆ, ಅದೇನೆಂದರೆ ಕೆಲವು ವಸ್ತುಗಳನ್ನು ನಾವು ಯಾವತ್ತೂ ಬೇರೆಯವರಿಂದ ನೇರವಾಗಿ ತಗೆದುಕೊಳ್ಳಬಾರದಂತೆ. ಹಾಗಾದರೆ ಆ ಕೆಲವು ವಸ್ತುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಈ ಕೆಲವು ವಸ್ತುಗಳನ್ನ ನಾವು ಬೇರೆಯವರಿಗೆ ತೆಗೆದುಕೊಂಡುದರೆ ನಮಗೆ ದರಿದ್ರ ಅಂಟಿಕೊಳ್ಳುತ್ತದೆ ಎಂದು ಶಾಸ್ತ್ರ ಹೇಳುತ್ತದೆ, ಇನ್ನು ವಸ್ತುಗಳನ್ನ ನಾವು ಬೇರೆಯವರಿಂದ ಪಡೆದುಕೊಂಡರೆ ನಾವು ಜೀವನದಲ್ಲಿ ಹಲವು ಕಷ್ಟಗಳನ್ನ ಎದುರಿಸಬೇಕಾಗುತ್ತದೆ ಮತ್ತು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಮ್ಮದಾಗುವುದಿಲ್ಲ. ಸ್ನೇಹಿತರೆ ಸಾಮಾನ್ಯವಾಗಿ ಅಡುಗೆ ಮನೆಗೆ ಬೇಕಾದ ಯಾವುದಾದರೂ ವಸ್ತುವನ್ನ ಬೇರೆಯವರಿಗೆ ಪಡೆಯಬೇಕು ಅಂದುಕೊಂಡಾಗ ಖಾರದ ಪುಡಿ ಮತ್ತು ಎಣ್ಣೆಯನ್ನ ನೇರವಾಗಿ ಯಾವುದೇ ಕಾರಣಕ್ಕೂ ಬೇರೆಯವರಿಂದ ಪಡೆಯಬಾರದು ಮತ್ತು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಎಂದು ನೇರವಾಗಿ ಈ ವಸ್ತುಗಳು ಹಸ್ತಾಂತರಿಸಬಾರದು.

Indian traditional information

ಇಷ್ಟೇ ಅಲ್ಲದೆ ಬದನೆಕಾಯಿ ಕೂಡ ಬೇರೆಯವರ ಕೈಯಿಂದ ತಗೆದುಕೊಳ್ಳಬಾರದು ಯಾಕೆಂದ್ರೆ ಇದು ಶನೇಶ್ವರನಿಗೆ ಇಷ್ಟವಾಗಲ್ಲ, ಹೌದು ಬದನೆಕಾಯಿಯನ್ನ ಬೇರೆಯವರಿಂದ ಪಡೆದುಕೊಂಡರೆ ನೀವು ಶನೇಶ್ವರ ಕೋಪಕ್ಕೆ ಗುರಿಯಬೇಕಾಗುತ್ತದೆ. ಅದೇ ರೀತಿ ಮನೆಯಲ್ಲಿ ಪೂಜೆ ಪುನಸ್ಕಾರ ನಡೆಯುವಾಗ ಮತ್ತು ಯಾವುದಾದರೂ ವಸ್ತುಗಳು ವಸ್ತುಗಳು ಬೇಕಾದಾಗ ನೇರವಾಗಿ ಬೇರೆಯವರ ಕೈಯ್ಯಲ್ಲಿ ಸ್ವೀಕರಿಸಬಾರದು, ಇದು ಕೂಡ ಒಳ್ಳೆಯದಲ್ಲ ನೆಲದ ಮೇಲೆ ಇಟ್ಟು ನಂತರ ತಗೆದುಕೊಳ್ಳಿ. ಇನ್ನು ಆಭರಣಗಳ ವಿಚಾರಕ್ಕೆ ಬಂದರೆ ನವರತ್ನ ಉಂಗುರವನ್ನು ಕೂಡ ಇನ್ನೊಬ್ಬರ ಕೈಯಿಂದ ನೇರವಾಗಿ ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ, ನವರತ್ನದ ಆಭರಣಗಳನ್ನ ಪಕ್ಕದಲ್ಲಿಟ್ಟು ನಂತರ ತಗೆದುಕೊಳ್ಳಿ.

ಇನ್ನು ನೆರೆವಾಗಿ ಬೇರೆಯವರ ಕೈಯಿಂದ ಉಂಗುರವನ್ನ ಪಡೆದುಕೊಂಡರೆ ದುಷ್ಟ ಶಕ್ತಿ ನಿಮ್ಮ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ಪಕ್ಕದಲ್ಲಿ ಇಟ್ಟು ತಗೆದುಕೊಳ್ಳುವುದರಿಂದ ನೆಗೆಟಿವ್ ಎನರ್ಜಿ ನಿಮ್ಮನ್ನು ಕಾಡುವುದು ತಪ್ಪುತ್ತದೆ. ಅದೇ ರೀತಿ ಹುಣಸೆ, ಹೌದು ಸ್ನೇಹಿತರೆ ಹುಳಿ ವಸ್ತುಗಳನ್ನು ಕೂಡ ತೆಗೆದುಕೊಳ್ಳುವುದು ಒಳ್ಳೆಯದಲ್ಲ, ಇನ್ನು ಹುಳಿ ವಸ್ತುಗಳನ್ನ ಬೇರೆಯವರಿಂದ ಪಡೆಯುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಸುಖ ಶಾಂತಿ ಇರುವುದಿಲ್ಲ ಮತ್ತು ಇದರಿಂದ ಕೆಡುಕು ಉಂಟಾಗಬಹುದು ಎನ್ನುತ್ತದೆ ನಮ್ಮ ಪೂರ್ವಜರ ಕೆಲ ಮಾತುಗಳು. ಇನ್ನು ವಸ್ತ್ರವನ್ನ ದಾನವಾಗಿ ಪಡೆದರೆ ಒಳ್ಳೆಯದು ಎಂದು ಹೇಳುತ್ತಾರೆ, ಆದರೆ ಯಾವುದೇ ಕಾರಣಕ್ಕೂ ದಾನವಾಗಿ ಪಡೆದ ವಸ್ತ್ರವನ್ನ ಹಾಗೆ ಧರಿಸಬಾರದು ಮತ್ತು ಧರಿಸಿದರೆ ನಿಮ್ಮ ದೇಹದ ಮೇಲೆ ದುಷ್ಟ ಶಕ್ತಿ ಪ್ರಭಾವ ಭೀರುವ ಸಾಧ್ಯತೆ ಜಾಸ್ತಿ ಇರುತ್ತದೆ ಆದ್ದರಿಂದ ಆ ಬಟ್ಟೆಯನ್ನ ಒಮ್ಮೆ ತೊಳೆದು ನಂತರ ಧರಿಸಿ.

Indian traditional information

Please follow and like us:
error0
http://karnatakatoday.in/wp-content/uploads/2019/11/Indian-traditional-rules-1024x576.jpghttp://karnatakatoday.in/wp-content/uploads/2019/11/Indian-traditional-rules-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲನಮ್ಮ ದೈನಂದಿನ ಜೀವನದಲ್ಲಿ ಯಾವುದಾದರೂ ಒಂದ್ಕಕಾಗಿ ಯಾರನ್ನಾದರೂ ಅವಲಂಬಿಸುವ ಪರಿಸ್ಥಿತಿ ಇದೆ ಇರುತ್ತದೆ ಮತ್ತು ಹೀಗೆ ಅಕ್ಕಪಕ್ಕದವರಿಂದ ಕೇಳಿ ತಗೆದುಕೊಂಡು ಸೌಹಾರ್ದತೆಯಿಂದ ಬದುಕು ಸಾಗಿಸುವುದು ಭಾರತೀಯರ ಮುಖ್ಯ ಗುಣಲಕ್ಷಣ. ಇನ್ನು ನಮ್ಮ ಪೂರ್ವಜರು ಹೇಳಿರುವ ಹಲವಾರು ವಿಷಯಗಳು ನಮ್ಮನ್ನು ಚಕಿತಗೊಳಿಸುತ್ತದೆ, ಅದೇನೆಂದರೆ ಕೆಲವು ವಸ್ತುಗಳನ್ನು ನಾವು ಯಾವತ್ತೂ ಬೇರೆಯವರಿಂದ ನೇರವಾಗಿ ತಗೆದುಕೊಳ್ಳಬಾರದಂತೆ. ಹಾಗಾದರೆ ಆ ಕೆಲವು ವಸ್ತುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Film | Devotional | Cricket | Health | India