ಪ್ರಪಂಚದಲ್ಲೇ ಅತಿ ಹೆಚ್ಚು ವಿಸ್ತಾರವಾದ ಹಾಗು ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರೈಲ್ವೆ ಎಂದರೆ ಅದು ನಮ್ಮ ಭಾರತೀಯ ರೈಲ್ವೆ. ಈ ದೇಶದಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಕ್ಕಾಗಿ ರೈಲುಗಳನ್ನು ಅವಲಂಬಿಸಿದ್ದಾರೆ ಮತ್ತು ಶತಮಾನಗಳಿಂದ ಭಾರತೀಯ ರೈಲ್ವೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದ್ದು . ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ.

ಭಾರತದ ಸಂಪೂರ್ಣ ರೈಲು ಸಾಗಾಟದ ಏಕಸ್ವಾಮ್ಯ ಭಾರತೀಯ ರೈಲ್ವೆಯ ಕೈಯಲ್ಲಿದೆ. ಪ್ರತಿ ದಿನ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಪ್ರಯಾಣಿಕರನ್ನೂ, ಒಂದು ಕೋಟಿ ಟನ್ನಿಗೂ ಹೆಚ್ಚು ಸರಕನ್ನೂ , ಸಾಗಾಟ ಮಾಡುವ ಭಾರತೀಯ ರೈಲ್ವೆಯು ಪ್ರಪಂಚದಲ್ಲಿಯೇ ಅತಿ ದೊಡ್ಡ ಹಾಗೂ ಅತಿ ಚಟುವಟಿಕೆಯ ರೈಲು ಜಾಲಗಳಲ್ಲಿ ಒಂದಾಗಿದೆ.  ಭಾರತದ ರೈಲ್ವೆಯಲ್ಲಿ ಸರಿ ಸುಮಾರು 16 ಲಕ್ಷಕ್ಕಿಂತಲೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಒಂದೇ ಸಂಸ್ಥೆಯಲ್ಲಿ ಇಷ್ಟೊಂದು ಮಂದಿ ಕೆಲಸ ಮಾಡುತ್ತಿರುವುದು ಜಗತ್ತಿನಲ್ಲಿಯೇ ದೊಡ್ಡ ದಾಖಲೆ. ಚೀನಾದ ಸೇನೆಯನ್ನು ಬಿಟ್ಟರೆ ಒಂದೇ ಸಂಸ್ಥೆಯ ಅಡಿಯಲ್ಲಿ ಹೆಚ್ಚು ಜನರು ಉದ್ಯೋಗ ಮಾಡಿರುವುದು ಭಾರತೀಯ ರೈಲ್ವೆಯಲ್ಲಿ ಮಾತ್ರ.

ಇನ್ನು ಭಾರತೀಯ ರೈಲುಗಳ ಬಗ್ಗೆ ಹೇಳುವುದಾದರೆ. ಹಲವಾರು ಮಂದಿಗೆ ಒಂದು ಸಂದೇಹ ಇರುತ್ತದೆ. ಇಷ್ಟೊಂದು ದೂರ ಚಲಿಸುವ ರೈಲುಗಳ ದರ ಕೂಡ ಅತ್ಯಂತ ಕಡಿಮೆ. ಹೀಗಿರುವಾಗ ಈ ರೈಲುಗಳ ಮೈಲೇಜ್ ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗು ಇರುತ್ತದೆ. ಇಂದು ನಾವು ಭಾರತೀಯ ರೈಲುಗಳು ಎಷ್ಟು ಮೈಲೇಜ್ ನೀಡುತ್ತದೆ ಎನ್ನುವ ಬಗ್ಗೆ ತಿಳಿಯೋಣ. ಸದ್ಯಕ್ಕೆ ನಮ್ಮ ದೇಶದಲ್ಲಿ ಹೆಚ್ಚು ನಮ್ಮ ದೇಶದಲ್ಲಿ ಎಲೆಕ್ಟ್ರಿಕಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು ಓಡಿಸಲಾಗುತ್ತಿದೆ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಕಲ್ಲಿದ್ದಲಿನಿಂದ ಓಡುವ ರೈಲುಗಳಿದ್ದವು. ಹಳೆಯ ಸಿನೆಮಾದಲ್ಲಿ ಈ ರೈಲುಗಳ ದ್ರಶ್ಯವನ್ನು ನೀವು ನೋಡಿರಬಹುದು. ಪರಿಸರ ಮಾಲಿನ್ಯದ ಕಾರಣ ಅವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬರಲಾಗಿದೆ.


ರೈಲುಗಳಲ್ಲಿ ಗೂಡ್ಸ್ ಹಾಗು ಪ್ಯಾಸೆಂಜರ್ ರೈಲುಗಳು ಕೂಡ ಇರುವುದರಿಂದ ಅವುಗಳ ಹೊರುವ ಭಾರಕ್ಕೆ ಸರಿಯಾಗಿ ಮೈಲೇಜ್ ಕೂಡ ಬದಲಾಗುತ್ತದೆ. ಒಂದು ಸರಾಸರಿ ವರದಿಯ ಪ್ರಕಾರ ಒಂದು ಕಿಲೋಮೀಟರ್ ಚಲಿಸಲು 4 ರಿಂದ 5 ಲೀಟರ್ ಡೀಸೆಲ್ ಪ್ಯಾಸೆಂಜರ್ ರೈಲಿಗೆ ಬೇಕಾಗಬಹುದು. ಇನ್ನು ಈ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವುದಾದರೆ, ಡೀಸೆಲ್ ಇಂಜಿನ್ ಲೋಕೋಮೋಟಿವ್ ರೈಲನ್ನು ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ 5000 ಲೀಟರ್, 5500 ಲೀಟರ್ ಮತ್ತು 6000 ಲೀಟರ್. ಬೈಕು ಮತ್ತೆ ಕಾರಿನಂತೆ ರೈಲಿನ ಮೈಲೇಜ್ ಅದರ ಮೇಲೆ ಇರುವ ಭಾರವನ್ನು ಅವಲಂಬಿಸಿರುತ್ತದೆ.

24 ಕೋಚ್ ಪ್ರಯಾಣಿಕರ ರೈಲು 6 ಲೀಟರ್‌ನಲ್ಲಿ 1 ಕಿಲೋಮೀಟರ್ ಪ್ರಯಾಣಿಸುತ್ತದೆ. ಒಂದು ಎಕ್ಸ್ಪ್ರೆಸ್ ರೈಲಿನ ಮೈಲೇಜ್ ಬಹಳ ಉತ್ತಮವಾಗಿರುತ್ತದೆ. 1 ಕಿಮೀಗೆ ನಾಲ್ಕೂವರೆ ಲೀಟರ್ ಡೀಸೆಲ್ ಬೇಕಾಗಬಹುದು. ಇಷ್ಟು ಕಡಿಮೆ ಮೈಲೇಜ್ ಇದ್ದರೂ ಕೂಡ ರೈಲುಗಳ ದರ ಏಕೆ ಕಡಿಮೆ ಇರುತ್ತದೆ ಗೊತ್ತಾ. ಭಾರತದಲ್ಲಿ ವಿಸ್ತಾರವಾದ ರೈಲ್ವೆ ಮಾರ್ಗಗಳಿವೆ. ದಿನಕ್ಕೆ ಕೋಟಿ ಕೋಟಿ ಪ್ರಯಾಣಿಕರು ಸಂಚರಿಸುತ್ತಾರೆ, ದೇಶದ ಹಲವು ಭಾಗಗಳಲ್ಲಿ ರೈಲು ಬಹಳಷ್ಟು ಲಾಭದಿಂದ ಓಡುತ್ತಿದೆ. ಹೀಗಾಗಿ ಕೆಲ ಮಾರ್ಗಗಳ ನಷ್ಟವನ್ನು ಇಲ್ಲಿ ಸರಿದೂಗಿಸಲಾಗುತ್ತದೆ.

Please follow and like us:
error0
http://karnatakatoday.in/wp-content/uploads/2019/11/milage-of-indian-train-1024x576.pnghttp://karnatakatoday.in/wp-content/uploads/2019/11/milage-of-indian-train-150x104.pngKarnataka Trendingಆಟೋಎಲ್ಲಾ ಸುದ್ದಿಗಳುಪ್ರಪಂಚದಲ್ಲೇ ಅತಿ ಹೆಚ್ಚು ವಿಸ್ತಾರವಾದ ಹಾಗು ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರೈಲ್ವೆ ಎಂದರೆ ಅದು ನಮ್ಮ ಭಾರತೀಯ ರೈಲ್ವೆ. ಈ ದೇಶದಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಕ್ಕಾಗಿ ರೈಲುಗಳನ್ನು ಅವಲಂಬಿಸಿದ್ದಾರೆ ಮತ್ತು ಶತಮಾನಗಳಿಂದ ಭಾರತೀಯ ರೈಲ್ವೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದ್ದು...Film | Devotional | Cricket | Health | India