ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿರುವ ಒಂದು ಪಂದ್ಯ ಎಂದರೆ ಅದು ಇಂಡೋ ಪಾಕ್ ಹೈ ವೋಲ್ಟೇಜ್ ಪಂದ್ಯಾಟ ಆದರೆ ಈ ಮಂಡ್ಯ ನಡೆಯೋದೆ ಈಗ ಅನುಮಾನ ಯಾಕೆ ಎನ್ನುವ ಸಂಪೂರ್ಣ ಕಾರಣವನ್ನು ನಾವು ತಿಳಿಸಲಿದ್ದೇವೆ ಕೇಳಿ. ಪುಲ್ವಾಮಾ ಉಗ್ರ ಆತ್ಮಾಹುತಿ ಬಾಂಬ್ ದಾಳಿ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯ ಆಡಬಾರದು ಎಂಬ ಕೂಗು ಭಾರತದಲ್ಲಿ ಜೋರಾಗಿತ್ತು. ಇದರ ಮಧ್ಯೆ ಪಾಕ್ ವಿರುದ್ಧದ ಪಂದ್ಯವನ್ನು ಆಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಇದೀಗ ಇಂಡೋ-ಪಾಕ್ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

ಜೂನ್ 16ರಂದು ಸಾಂಪ್ರಾದಾಯಿಕ ಎದುರಾಳಿಗಳಾದ ಇಂಡೋ-ಪಾಕ್ ಪಂದ್ಯ ನಿಗದಿಯಾಗಿದೆ. ಈ ಪಂದ್ಯ ನೋಡಲು ಇದೀಗ ಇಡೀ ಜಗತ್ತೆ ಎದುರು ನೋಡುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಪಂದ್ಯ ರದ್ದಾಗುವ ಸಾಧ್ಯತೆ ಇರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವಾಗಬಹುದು.


ಸದ್ಯ ಪಂದ್ಯಕ್ಕೆ ಉಭಯ ರಾಷ್ಟ್ರಗಳ ನಡುವಿನ ವೈಷಮ್ಯ ಅಥವಾ ರಾಜತಾಂತ್ರಿಕ ನಡೆ ಅಡ್ಡಿಯಾಗುತ್ತಿಲ್ಲ. ಬದಲಿಗೆ ಮಳೆರಾಯನ ಅವಕೃಪೆಯಿಂದ ಪಂದ್ಯ ರದ್ದಾಗಬಹುದು. ಹೌದು ಮಳೆಯಿಂದಾಗಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ, ನಿನ್ನೆಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಗಳು ರದ್ದಾಗಿತ್ತು.

ಸದ್ಯ ಟೌನ್ಟನ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಇಂದು ನಡೆಯಲಿದ್ದು ಅದಾಗಲೇ ಅಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಇನ್ನು ಮಳೆ ಹೀಗೆ ಮುಂದುವರೆದರೆ ಭಾನುವಾರ ನಡೆಯಲಿರುವ ಇಂಡೋ-ಪಾಕ್ ಪಂದ್ಯ ಸಹ ರದ್ದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ಇಂದು ಪಾಕ್ ನ ಸಂಸ್ಥೆ ಒಂದು ನಮ್ಮ ದೇಶದ ವೀರಯೋಧ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಂಡು ಜಾಹಿರಾತನ್ನು ಕೂಡ ಮಾಡಿದೆ.

ಪಾಕಿಸ್ತಾನದವರು ಅಭಿನಂದನ್ ಮಾದರಿಯಲ್ಲಿ ಕೊಹ್ಲಿಯನ್ನು ಸಂದರ್ಶನ ಮಾಡುತ್ತಿದ್ದಾರೆ ಎಂಬಂತೆ ತೋರಿಸಲು ಈ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಪಾಕಿಗರು ನೀವು ಟಾಸ್ ಗೆದ್ದರೆ ಏನು ಮಾಡುತ್ತೀರಿ? 11 ಜನರ ತಂಡದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ.

ಈ ವೇಳೆ ಅಭಿನಂದನ್ ರೀತಿ ಕಾಣುವ ವ್ಯಕ್ತಿ ನಾನು ಅದನ್ನು ಹೇಳಲು ಸಾಧ್ಯವಿಲ್ಲ ಎಂದು ಉತ್ತರ ನೀಡುತ್ತಾರೆ. ಇದಕ್ಕೆ ಪಾಕಿಗಳಿಗೆ ಈಗಾಗಲೇ ಸಾಕಷ್ಟು ಜನರು ಸಾಮಾಜಿಕ ತಾಣಗಳಲ್ಲಿ ಉಗಿಯುತ್ತಿದ್ದಾರೆ. ಇನ್ನೊಂದೆಡೆ ಇಂತಹ ವಿಕೃತ ಮನಸ್ಸಿನ ವಿರೊಡಗಿಗಳೆದ್ರು ಪಂದ್ಯ ಬೇಡ ಯಾವ ಸಂಬಂಧವು ಇಟ್ಟುಕೊಳ್ಳುವುದು ಬೇಡ ಎನ್ನುವ ವಾದ ಹಲವು ಕೂಡ ಕೇಳಿ ಬಂದಿದೆ.

Please follow and like us:
0
http://karnatakatoday.in/wp-content/uploads/2019/06/indo-pack-worldcup-match-1024x576.jpghttp://karnatakatoday.in/wp-content/uploads/2019/06/indo-pack-worldcup-match-150x104.jpgKarnataka Today's Newsಅಂಕಣಕ್ರಿಕೆಟ್ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿರುವ ಒಂದು ಪಂದ್ಯ ಎಂದರೆ ಅದು ಇಂಡೋ ಪಾಕ್ ಹೈ ವೋಲ್ಟೇಜ್ ಪಂದ್ಯಾಟ ಆದರೆ ಈ ಮಂಡ್ಯ ನಡೆಯೋದೆ ಈಗ ಅನುಮಾನ ಯಾಕೆ ಎನ್ನುವ ಸಂಪೂರ್ಣ ಕಾರಣವನ್ನು ನಾವು ತಿಳಿಸಲಿದ್ದೇವೆ ಕೇಳಿ. ಪುಲ್ವಾಮಾ ಉಗ್ರ ಆತ್ಮಾಹುತಿ ಬಾಂಬ್ ದಾಳಿ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯ ಆಡಬಾರದು ಎಂಬ ಕೂಗು ಭಾರತದಲ್ಲಿ ಜೋರಾಗಿತ್ತು. ಇದರ ಮಧ್ಯೆ ಪಾಕ್ ವಿರುದ್ಧದ ಪಂದ್ಯವನ್ನು ಆಡಲೇಬೇಕಾದ...Kannada News