ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ಭಾರತ ಕ್ರಿಕೆಟ್ ತಂಡದ ಎಡಗೈ ಅನುಭವಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಂಪೂರ್ಣ ಟೂರ್ನಿಯಿಂದ ನಿರ್ಗಮಿಸುವಂತಾಗಿದೆ. ಐಸಿಸಿ ಟೂರ್ನಿಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಧವನ್ ಅನುಪಸ್ಥಿತಿಯಿಂದ ಭಾರತಕ್ಕೆ ಭಾರಿ ಹೊಡೆತವುಂಟಾಗಿದೆ. ಸಹಜವಾಗಿಯೇ ಶಿಖರ್ ಧವನ್ ಅನುಪಸ್ಥಿತಿಯಿಂದ ರೋಹಿತ್ ಶರ್ಮಾ ಮೇಲೆ ಒತ್ತಡ ಹೆಚ್ಚಿದೆ.

ಈಗಾಗಲೇ ಎರಡು ಶತಕಗಳನ್ನು ಬಾರಿಸಿರುವ ರೋಹತ್ ಮತ್ತಷ್ಟು ಒತ್ತಡವನ್ನು ನಿಭಾಯಿಸಬೇಕಿದೆ. ಇನ್ನು ಗಾಯಾಳು ಧವನ್ ಸ್ಥಾನಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ರಿಷಬ್ ಪಂಥ್ ಸೇರಿಕೊಂಡಿದ್ದಾರೆ. ಧವನ್ ಅಲಭ್ಯತೆ ಮೊದಲೇ ತಂಡಕ್ಕೆ ಶಾಕ್ ನೀಡಿದೆ ಮುಖ್ಯ ಕಾರಣ ಎಂದರೆ ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿದ್ದ ಏಕಮಾತ್ರ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಾಗಿದ್ದರು.

ಈ ಮೂಲಕ ಎದುರಾಳಿಗಳ ಮೇಲೆ ರಣತಂತ್ರ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಧವನ್ ಅಲಭ್ಯತೆಯಲ್ಲಿ ಭಾರತದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ ಅಲಭ್ಯತೆ ಕಾಡುತ್ತಿದೆ. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಆಲ್ ರೌಂಡರ್ ಗಾಯಗೊಂಡಿದ್ದಾನೆ. ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಟೀಂ ಇಂಡಿಯಾಗೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ.

ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಬೌಲರ್ ಭುವನೇಶ್ವರ್ ಬಳಿಕ ಇದೀಗ ಮತ್ತೋರ್ವ ಆಲ್​ರೌಂಡರ್​ ಗಾಯಗೊಂಡಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ವೇಳೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದು ನಂತರ ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ವೇಗಿ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತಕ್ಕೆ ಗುರಿಯಾಗಿದ್ದಾರೆ. ಇದೀಗ ಅಭ್ಯಾಸದ ವೇಳೆ ವಿಜಯ್ ಶಂಕರ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

 

ಈ ಗಾಯದ ತೀವ್ರತೆ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ. ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತದ್ದ ವೇಳೆ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಎಸೆದ ಚೆಂಡು ವಿಜಯ್ ಶಂಕರ್ ಕಾಲಿನ ಹೆಬ್ಬೆರಳಿಗೆ ಬಡಿದು ಗಾಯವಾಗಿದೆ. ಇನ್ನು ಗಾಯ ಜಾಸ್ತಿಯಾಗಿಲ್ಲ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿರುವುದರಿಂದ ಸ್ವಲ್ಪ ಆತಂಕ ಕಡಿಮೆಯಾಗಿದೆ.

Please follow and like us:
error0
http://karnatakatoday.in/wp-content/uploads/2019/06/vijay-shanker-injured-1024x576.jpghttp://karnatakatoday.in/wp-content/uploads/2019/06/vijay-shanker-injured-150x104.jpgKarnataka Trendingಎಲ್ಲಾ ಸುದ್ದಿಗಳುಕ್ರಿಕೆಟ್ನಗರಬೆಂಗಳೂರುಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ಭಾರತ ಕ್ರಿಕೆಟ್ ತಂಡದ ಎಡಗೈ ಅನುಭವಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಂಪೂರ್ಣ ಟೂರ್ನಿಯಿಂದ ನಿರ್ಗಮಿಸುವಂತಾಗಿದೆ. ಐಸಿಸಿ ಟೂರ್ನಿಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಧವನ್ ಅನುಪಸ್ಥಿತಿಯಿಂದ ಭಾರತಕ್ಕೆ ಭಾರಿ ಹೊಡೆತವುಂಟಾಗಿದೆ. ಸಹಜವಾಗಿಯೇ ಶಿಖರ್ ಧವನ್ ಅನುಪಸ್ಥಿತಿಯಿಂದ ರೋಹಿತ್ ಶರ್ಮಾ ಮೇಲೆ ಒತ್ತಡ ಹೆಚ್ಚಿದೆ. ಈಗಾಗಲೇ ಎರಡು ಶತಕಗಳನ್ನು ಬಾರಿಸಿರುವ ರೋಹತ್ ಮತ್ತಷ್ಟು ಒತ್ತಡವನ್ನು ನಿಭಾಯಿಸಬೇಕಿದೆ. ಇನ್ನು ಗಾಯಾಳು ಧವನ್ ಸ್ಥಾನಕ್ಕೆ...Film | Devotional | Cricket | Health | India