innocent Raviprakash

ಇವತ್ತಿನ ಕಾಲದಲ್ಲಿ ಜನರು ಸಹಾಯ ಮಾಡಬೇಕು ಅಂದರೆ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ, ಒಂದು ಕಾಲದಲ್ಲಿ ಕನ್ನಡದಲ್ಲಿ ನಾಗಮಂಡಲ, ಸೂರ್ಯವಂಶ, ಹಬ್ಬ ಮತ್ತು ಜೋಡಿ ಹಕ್ಕಿಯಂತಹ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟ ನಟಿ ವಿಜಯಲಕ್ಷ್ಮಿ ಈಗ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿರುವುದು ನಿಮಗೆ ಗೊತ್ತೇ ಇದೆ.

ಇನ್ನು ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅವರ ಸಹೋದರಿ ನಮಗೆ ಸಹಾಯ ಮಾಡಿ ಎಂದು ಮೀಡಿಯಾಗಳಲ್ಲಿ ಕೇಳಿಕೊಂಡಿದ್ದರು.

ಇನ್ನು ಒಬ್ಬ ಕಲಾವಿದೆಗೆ ಇಂತಹ ಪರಿಸ್ಥಿತಿ ಬಂತು ಎಂದು ಕಿಚ್ಚ ಸುದೀಪ್ ಮತ್ತು ಕೆಲವು ಗಣ್ಯ ವ್ಯಕ್ತಿಗಳು ವಿಜಯಲಕ್ಷ್ಮಿ ಅವರಿಗೆ ಸಹಾಯವನ್ನ ಮಾಡಿದ್ದರು ಮತ್ತು ಚಿತ್ರರಂಗ ಕೂಡ ಅವರ ಸಹಾಯಕ್ಕೆ ಮುಂದಾಗಿತ್ತು ಮತ್ತು ಅಷ್ಟೇ ಅಲ್ಲದೆ ಜನರು ಕೂಡ ವಿಜಯಲಕ್ಷ್ಮಿ ಅವರಿಗೆ ಸಹಾಯವನ್ನ ಮಾಡಿದ್ದರು.

innocent Raviprakash

ಈಗ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಿದ ಒಬ್ಬ ವ್ಯಕ್ತಿಗೆ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಜನರು ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ ಅನಿಸುತ್ತದೆ.

ಇನ್ನು ಇದರಲ್ಲಿ ಯಾರದ್ದು ತಪ್ಪು ಮತ್ತು ಯಾರದ್ದು ಸರಿ ಎನ್ನುವುದು ಮುಂದೆ ಗೊತ್ತಾಗಬೇಕಿದೆ, ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಟಿ ವಿಜಯಲಕ್ಷ್ಮಿ ಅವರು ಸಹಾಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೋರಿದ್ದರಿಂದ ನಟ ರವಿಪ್ರಕಾಶ್ ಅವರು ವಿಜಯಲಕ್ಷ್ಮಿಯವರಿಗೆ ಒಂದು ಲಕ್ಷ ರೂಪಾಯಿಗಳ ಹಣ ಸಹಾಯವನ್ನ ಮಾಡಿದ್ದರು.

ಇನ್ನು ವಿಜಯಲಕ್ಷ್ಮಿ ಅವರ ಸಹೋದರಿ ಕೂಡ ರವಿಪ್ರಕಾಶ್ ಅವರನ್ನ ಡಾಕ್ಟರ್ ಬಳಿ ಇವರು ನಮ್ಮ ಸಂಬಂಧಿ ಎಂದು ಹೇಳಿದ್ದರು, ಆದರೆ ಈಗ ಅವರು ರವಿಪ್ರಕಾಶ್ ಅವರಿಗೆ ತಿರುಗಿ ಬಿದ್ದಿದ್ದಾರೆ.

innocent Raviprakash

ಸಹಾಯವನ್ನ ಪಡೆದ ನಂತರ ವಿಜಯಲಕ್ಷ್ಮಿ ಅವರ ಸಹೋದರಿ ಈಗ ಹೇಳುತ್ತಿರುವುದು ಏನು ಅಂದರೆ, ರವಿಪ್ರಕಾಶ್ ಎನ್ನುವುವವರು ಒಂದು ಲಕ್ಷ ರೂಪಾಯಿ ನೀಡಿ ವಿಜಯಲಕ್ಷ್ಮಿ ಅವರಿಗೆ ಫೋನ್ ಮತ್ತು ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಲು ಮುಂದಾಗಿದ್ದಾರೆ.

ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿಪ್ರಕಾಶ್ ಅವರು ಇದೆಲ್ಲ ಶುದ್ಧ ಸುಳ್ಳು ಮತ್ತು ಅವರು ಮಾಧ್ಯಮದ ಮುಂದೆ ಬಂದು ಮಾತನಾಡಲಿ ಮತ್ತು ತಾಕತ್ತಿದ್ದರೆ ನಾನು ಆ ರೀತಿ ನಡೆದುಕೊಂಡಿದ್ದೇನೆ ಎಂದು ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲನ್ನ ಹಾಕಿದ್ದಾರೆ.

ನಿಜಕ್ಕೂ ವಿಜಯಲಕ್ಷ್ಮಿ ಅವರು ಈ ಪರಿಸ್ಥಿತಿಯಲ್ಲಿ ಇದ್ದಾಗ ಸಹಾಯ ಮಾಡಿದ ರವಿಪ್ರಕಾಶ್ ಅವರು ವಿಜಯಲಕ್ಷ್ಮಿ ಅವರನ್ನ ಹೇಗೆ ಆ ದೃಷ್ಟಿಯಲ್ಲಿ ನೋಡಲು ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

innocent Raviprakash

Please follow and like us:
0
http://karnatakatoday.in/wp-content/uploads/2019/03/Innocent-Raviprakash-1024x576.jpghttp://karnatakatoday.in/wp-content/uploads/2019/03/Innocent-Raviprakash-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಇವತ್ತಿನ ಕಾಲದಲ್ಲಿ ಜನರು ಸಹಾಯ ಮಾಡಬೇಕು ಅಂದರೆ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ, ಒಂದು ಕಾಲದಲ್ಲಿ ಕನ್ನಡದಲ್ಲಿ ನಾಗಮಂಡಲ, ಸೂರ್ಯವಂಶ, ಹಬ್ಬ ಮತ್ತು ಜೋಡಿ ಹಕ್ಕಿಯಂತಹ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟ ನಟಿ ವಿಜಯಲಕ್ಷ್ಮಿ ಈಗ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿರುವುದು ನಿಮಗೆ ಗೊತ್ತೇ ಇದೆ. ಇನ್ನು ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅವರ ಸಹೋದರಿ ನಮಗೆ ಸಹಾಯ ಮಾಡಿ ಎಂದು ಮೀಡಿಯಾಗಳಲ್ಲಿ...Kannada News