ವ್ಯಕ್ತಿಯ ರಾಶಿ ಮತ್ತು ಗುರುಬಲದ ಪ್ರಕಾರ ಆತನ ಭವಿಷ್ಯವನ್ನು ಅಳೆಯುವ ಕಲೆ ಹಿಂದೆ ಕೂಡ ನಮ್ಮ ದೇಶದಲ್ಲಿತ್ತು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗಳು ಬಹಳಷ್ಟು ಬುದ್ದಿವಂತರು ಮತ್ತು ಚುರುಕಿನ ಸ್ವಭಾವದವರು ಹಾಗಂತ ಉಳಿದವರು ದಡ್ಡರಂತಲ್ಲ, ಆದರೆ ಇವರಿಗಿಂತ ಸ್ವಲ್ಪ ಕಡಿಮೆ ಬುದ್ದಿಮತ್ತೆ ಹೊಂದಿರುತ್ತಾರೆ ಎಂದರ್ಥ. ಈ 4 ರಾಶಿಗಳಲ್ಲಿ ಹೆಚ್ಚಿನ ನಾಯಕತ್ವ ಗುಣ ಮತ್ತು ಒಬ್ಬ ಉತ್ತಮ ಹೋರಾಟಗಾರನ ಗುಣಗಳು ಇರುತ್ತದೆ ಎಂದು ಕೇವಲ ರಾಶಿ ಶಾಸ್ತ್ರವಲ್ಲ ಕೆಲ ಅಧ್ಯಯನದ ಮೂಲಕವು ತಿಳಿದು ಬಂದಿರುತ್ತದೆ.

ಹಾಗಿದ್ರೆ ಅವುಗಳನ್ನು ಒಂದೊಂದೇ ನೋಡೋಣ. ಮೊದಲೆನೆಯದು ಮೇಷ, ಈ ರಾಶಿಯವರು ಅಗ್ನಿಗೆ ಹೋಲಿಸುತ್ತಾರೆ ಅಷ್ಟು ಹೋರಾಟದ ಗುಣವಂತೆ ಇವರದ್ದು, ಕೆಲ ತತ್ವಗಳನ್ನೇ ಆಧಾರವಾಗಿಟ್ಟುಕೊಂಡು, ಇಂತಹ ಹೋರಾಟಕ್ಕೂ ಅಣಿಯಾಗುವ ನಾಯಕತ್ವ ಗುಣ ಇವರಲ್ಲಿ ಹೆಚ್ಚು. ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮೊದಲು ಅಪಾರ ಯೋಚನೆ ಮತ್ತು ಬುದ್ದಿಯನ್ನು ಉಪಯೋಗಿಸುತ್ತಾರೆ.

ಇನ್ನು ವೃಷಭ ರಾಶಿಯವರಿಗೆ ದ್ರಢಸಂಕಲ್ಪ ಹೆಚ್ಚು ಯಾವುದೇ ಹಿಡಿದ ಕೆಲಸವನ್ನು ಪೂರ್ತಿಯಾಗುವವರೆಗೂ ನಿದ್ರೆ ಮಾಡಲ್ಲ. ಇವರು ಸಂಗೀತ ಪ್ರಿಯರು, ಸಹನೆಯ ಗುಣ ಉಳ್ಳವರು. ಇನ್ನು ಸಿಂಹ ರಾಶಿಯವರು ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿದವರು ಕುಲಗೌರವ ಮತ್ತು ಕುಟುಂಬದ ಏಳಿಗೆಗೆ ಶ್ರಮಿಸುತ್ತಾರೆ.

ಒಮ್ಮೆ ಮಾಡಿದ ತಪ್ಪನ್ನು ಮತ್ತೆಂದೂ ಮಾಡಲ್ಲ, ಹಣದ ವಿಚಾರದಲ್ಲಿ ಸೂಕ್ಷ್ಮವಾಗಿ ಯೋಚಿಸುತ್ತಾರೆ. ಮಕರ ರಾಶಿಯವರು ಕೂಡ ಉತ್ತಮ ವಿಚಾರದ ವ್ಯಕ್ತಿತ್ವ ಹೊಂದಿರುತ್ತಾರೆ, ನೇರ ದಿಟ್ಟ ನಡೆಯಿಂದ ಜೀವನದಲ್ಲಿ ವಿಜಯ ಸಾಧಿಸುತ್ತಾರೆ, ಅಷ್ಟೇನು ತೋರಿಕೆಯ ಗುಣವಲ್ಲ ಆದರೆ ತನ್ನ ಏಳಿಗೆಗೆ ತಾನೇ ಶ್ರಮಿಸಿಕೊಳ್ಳುತ್ತಾರೆ.

Please follow and like us:
0
http://karnatakatoday.in/wp-content/uploads/2018/08/intelligent-1024x576.jpghttp://karnatakatoday.in/wp-content/uploads/2018/08/intelligent-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುವ್ಯಕ್ತಿಯ ರಾಶಿ ಮತ್ತು ಗುರುಬಲದ ಪ್ರಕಾರ ಆತನ ಭವಿಷ್ಯವನ್ನು ಅಳೆಯುವ ಕಲೆ ಹಿಂದೆ ಕೂಡ ನಮ್ಮ ದೇಶದಲ್ಲಿತ್ತು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗಳು ಬಹಳಷ್ಟು ಬುದ್ದಿವಂತರು ಮತ್ತು ಚುರುಕಿನ ಸ್ವಭಾವದವರು ಹಾಗಂತ ಉಳಿದವರು ದಡ್ಡರಂತಲ್ಲ, ಆದರೆ ಇವರಿಗಿಂತ ಸ್ವಲ್ಪ ಕಡಿಮೆ ಬುದ್ದಿಮತ್ತೆ ಹೊಂದಿರುತ್ತಾರೆ ಎಂದರ್ಥ. ಈ 4 ರಾಶಿಗಳಲ್ಲಿ ಹೆಚ್ಚಿನ ನಾಯಕತ್ವ ಗುಣ ಮತ್ತು ಒಬ್ಬ ಉತ್ತಮ ಹೋರಾಟಗಾರನ ಗುಣಗಳು ಇರುತ್ತದೆ ಎಂದು ಕೇವಲ ರಾಶಿ ಶಾಸ್ತ್ರವಲ್ಲ...Kannada News