ಒಬ್ಬ ಮನುಷ್ಯ ಏನು ಬೇಕಾದರೂ ತಡೆದುಕೊಳ್ಳುತ್ತಾನೆ ಆದರೆ ಹಸಿವನ್ನ ಮಾತ್ರ ಅವನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ, ಹೌದು ಸ್ನೇಹಿತರೆ ಹೊಟ್ಟೆ ಹಸಿವನ್ನ ತಾಳಲಾರದೆ ಪ್ರಪಂಚದಲ್ಲಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಅದೆಷ್ಟೋ ಬಡವರು ಆಹಾರ ಇಲ್ಲದೆ ನರಳಾಡುತ್ತಿದ್ದಾರೆ, ಆದರೆ ಇನ್ನು ಇಲ್ಲಿ ನಾವು ಬೇಸರ ಮಾಡಿಕೊಳ್ಳಬೇಕಾದ ವಿಷಯ ಏನು ಅಂದರೆ ದಿನಕ್ಕೆ ನಾವು ನೂರಾರು ಟನ್ ಆಹಾರವನ್ನ ಹಾಳು ಮಾಡುತ್ತಿದ್ದೇವೆ, ಆಹಾರವನ್ನ ಹಾಳು ಮಾಡದೆ ತಮಗೆ ಬೇಕಾದಷ್ಟೇ ಆಹಾರವನ್ನ ಸೇವನೆ ಮಾಡಿದರೆ ಉಳಿದ ಆಹಾರ ಬೇರೆಯವರ ಹೊಟ್ಟೆ ತುಂಬಿಸುತ್ತದೆ. ಇನ್ನು ಎಲ್ಲಾ ಕೆಲಸವನ್ನ ಸರ್ಕಾರವೇ ಮಾಡಲು ಎಂದು ಸುಮ್ಮನೆ ಕೂರದೆ ಕೆಲವು ಜನರು ಮುಂದೆ ಬಂದು ಒಳ್ಳೆಯ ಕೆಲಸಕ್ಕೆ ನಾಂದಿ ಹಾಡುತ್ತಾರೆ ಕೆಲವರು ಮತ್ತು ಅಂತವರಲ್ಲಿ ನಾವು ಹೇಳುವ ಈ ವೈದ್ಯೆ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಈ ಡಾಕ್ಟರ್ ಯಾರು ಮತ್ತು ಈಕೆ ಮಾಡಿದೆ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈಕೆ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈಕೆಯ ಹೆಸರು ಇಸಾ ಫಾತಿಮಾ, ಚನೈ ನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿರುವ ಈಕೆ ಒಂದು ದಿನ ದಿನಪತ್ರಿಕೆ ಓದುತ್ತಿದ್ದಾಗ ಜನಸಂಖ್ಯೆಯ ಎರಡು ಪಟ್ಟು ಆಹಾರವನ್ನ ಜನರು ವೆಸ್ಟ್ ಮಾಡುತ್ತಿದ್ದಾರೆ ಅನ್ನುವ ಸುದ್ದಿಯನ್ನ ಆ ದಿನಪತ್ರಿಕೆಯಲ್ಲಿ ಓದುತ್ತಾರೆ. ಇನ್ನು ಈ ಸುದ್ದಿ ಫಾತಿಮಾ ಅವರಿಗೆ ತುಂಬಾ ಕಾಡಿತು, ಈ ವಿಷಯವಾಗಿ ನಾನು ಏನಾದರು ಮಾಡಬೇಕು ಎಂದು ಭಾವಿಸಿದ ಫಾತಿಮಾ ಅವರು ಕೊನೆಗೆ ಒಂದು ನಿರ್ಧಾರವನ್ನ ಮಾಡುತ್ತಾರೆ. ಹೌದು ಒಂದು ದಿಟ್ಟ ನಿರ್ಧಾರವನ್ನ ತೆಗೆದುಕೊಂಡ ಡಾಕ್ಟರ್ ಫಾತಿಮಾ ಅವರು ಕಮ್ಯುನಿಟಿ ಫ್ರಿಡ್ಜ್ ಅನ್ನುವ ಒಂದು ವಿನೂತನವಾದ ಪ್ಲ್ಯಾನ್ ಮಾಡಿ ಅದನ್ನ ಕಾರ್ಯರೂಪಕ್ಕೆ ತಂದು ಚನೈ ನ ಇಡ್ವರ್ಡ್ ಬೀಚ್ ಬಳಿ ಒಂದು ದೊಡ್ಡದ ಫ್ರಿಡ್ಜ್ ಖರೀದಿ ಮಾಡಿ ಅದನ್ನ ಆ ಬೀಚ್ ನಲ್ಲಿ ತಂದು ಇಟ್ಟರು.

Issa Fathima Chanai

 

ತುಂಬಾ ಜನರು ತಮಗೆ ಇಷ್ಟ ಇಲ್ಲದ ಆಹಾರವನ್ನ ಕಸದ ತೊಟ್ಟಿಗೆ ಹಾಕಿ ಅದನ್ನ ಹಾಳು ಮಾಡುತ್ತಾರೆ ಮತ್ತು ಇನ್ನು ಕೆಲವರು ಬೇಡವಾದ ಆಹಾರವನ್ನ ಯಾರಿಗೆ ಕೊಡಬೇಕು ಎಂದು ತಿಳಿಯದೆ ಅದನ್ನ ಬಿಸಾಕುತ್ತಾರೆ, ಹೀಗೆ ಮಾಡುವವರು ಆಹಾರವನ್ನ ತಮ್ಮ ಆಹಾರವನ್ನ ಬಿಸಾಕದೆ ಈ ಫ್ರಿಡ್ಜ್ ನಲ್ಲಿ ತಂದು ಇಡಲಿ ಅನ್ನುವ ಕಾರಣಕ್ಕೆ ಫಾತಿಮಾ ಅವರು ಒಂದು ದೊಡ್ಡ ಗಾತ್ರದ ಫ್ರಿಡ್ಜ್ ತಂದು ಆ ಬೀಚ್ ನಲ್ಲಿ ಇಟ್ಟರು. ಇನ್ನು ಇದರಲ್ಲಿ ಇರುವ ಆಹಾರವನ್ನ ಯಾರು ಹಸಿವಿನಲ್ಲಿ ಇದ್ದಾರೋ, ಯಾರಿಗೆ ಅವಶ್ಯಕತೆ ಇದೆಯೋ ಅವರು ಬಂದು ಅವರಿಗೆ ಇಷ್ಟವಾದ ಆಹಾರವನ್ನ ಯಾವುದೇ ಹಣ ಕೊಡದೆ ತಿನ್ನಬಹುದಾಗಿದೆ. ಇನ್ನು ಫಾತಿಮಾ ಅವರ ಈ ವಿಧಾನ ಈಗ ಅಭೂತಪೂರ್ವವಾದ ಯಶಸ್ಸನ್ನ ಕಂಡಿದೆ, ಕೆಲವು ಜನರು ಮತ್ತು ಶಾಲೆಯ ಮಕ್ಕಳು ಪ್ರತಿದಿನ ಏನಾದರು ಒಂದು ಆಹಾರವನ್ನ ತಂದು ಈ ಫ್ರಿಡ್ಜ್ ನಲ್ಲಿ ಇಟ್ಟು ಹೋಗುತ್ತಿದ್ದಾರೆ, ಇನ್ನು ಇದರ ಜೊತೆಗೆ ತಾವು ಉಪಯೋಗ ಮಾಡದೇ ಇರುವ ಬಟ್ಟೆ, ಚಪ್ಪಲಿ ಮತ್ತು ಇತರೆ ವಸ್ತುಗಳನ್ನ ಕೂಡ ಅಲ್ಲಿ ತಂದು ಇಡುತ್ತಿದ್ದಾರೆ.

ಡಾಕ್ಟರ್ ಫಾತಿಮಾ ಅವರ ಈ ಒಂದು ಆಲೋಚನೆ ಅದೆಷ್ಟೋ ಜನರ ಹಸಿವನ್ನ ನೀಗಿಸುತ್ತಿದೆ, ಇನ್ನು ಈಗ ಬೆಂಗಳೂರಿನಲ್ಲಿ ಕೂಡ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ, ತಿನ್ನಲು ಊಟ ಇಲ್ಲದೆ ಬರಿ ನೀರು ಕುಡಿದು ಬದುಕುತ್ತಿದ್ದ ಅದೆಷ್ಟೋ ಜನರು ಈ ಫ್ರಿಡ್ಜ್ ನಲ್ಲಿ ಇರುವ ಆಹಾರವನ್ನ ಸೇವಿಸಿ ತಮ್ಮ ಹಸಿವನ್ನ ನೀಗಿಸಿಕೊಳ್ಳುತ್ತಿದ್ದಾರೆ. ನಮಗೆ ಹೆಚ್ಚಾದ ಆಹಾರ ಬೇರೆಯವರ ಹೊಟ್ಟೆಯನ್ನ ತುಂಬಿಸುತ್ತದೆ ಅನ್ನುವುದಾದರೆ ಅದಕ್ಕಿಂತ ಖುಷಿಯ ವಿಚಾರ ಇನ್ನೊಂದು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹಸಿವಿನಿಂದ ಮಲಗುತ್ತಿದ್ದ ಅದೆಷ್ಟೋ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ ಡಾಕ್ಟರ್ ಫಾತಿಮಾ ಅವರ ಒಳ್ಳೆಯ ತನದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Issa Fathima Chanai

Please follow and like us:
error0
http://karnatakatoday.in/wp-content/uploads/2020/02/News-of-Doctor-Issa-fathima-1-1024x576.jpghttp://karnatakatoday.in/wp-content/uploads/2020/02/News-of-Doctor-Issa-fathima-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಒಬ್ಬ ಮನುಷ್ಯ ಏನು ಬೇಕಾದರೂ ತಡೆದುಕೊಳ್ಳುತ್ತಾನೆ ಆದರೆ ಹಸಿವನ್ನ ಮಾತ್ರ ಅವನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ, ಹೌದು ಸ್ನೇಹಿತರೆ ಹೊಟ್ಟೆ ಹಸಿವನ್ನ ತಾಳಲಾರದೆ ಪ್ರಪಂಚದಲ್ಲಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಅದೆಷ್ಟೋ ಬಡವರು ಆಹಾರ ಇಲ್ಲದೆ ನರಳಾಡುತ್ತಿದ್ದಾರೆ, ಆದರೆ ಇನ್ನು ಇಲ್ಲಿ ನಾವು ಬೇಸರ ಮಾಡಿಕೊಳ್ಳಬೇಕಾದ ವಿಷಯ ಏನು ಅಂದರೆ ದಿನಕ್ಕೆ ನಾವು ನೂರಾರು ಟನ್ ಆಹಾರವನ್ನ ಹಾಳು ಮಾಡುತ್ತಿದ್ದೇವೆ, ಆಹಾರವನ್ನ ಹಾಳು ಮಾಡದೆ...Film | Devotional | Cricket | Health | India