ಸ್ಯಾಂಡಲ್ವುಡ್ ನಾಯಕರು ನಿರ್ಮಾಪಕರ ಮೇಲೆ ಐಟಿ ದಾಳಿಯಾದ ವಿಷಯ ತಿಳಿಯುತ್ತಿದಂತೆ ಚಂದನವನದಲ್ಲಿ ಇದೀಗ ಬರಿ ಅಂತೆಕಂತೆಗಳ ಸುದ್ದಿಯೇ ಹೆಚ್ಚಾಗಿದೆ. ಐಟಿ ಅಧಿಕಾರಿಗಳು ಒಮ್ಮೆಲೇ ನಡೆಸಿದ ಈ ದಾಳಿ ಇದೀಗ ಎಲ್ಲ ನಟರನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಯಶ್ ಶೂಟಿಂಗ್ ಬಿಟ್ಟು ಮುಂಬೈನಿಂದ ಬಂದರು ಹಾಗು ನಟ ಸುದೀಪ್ ಕೂಡ ಪ್ಯಾಕಪ್ ಮಾಡಿಕೊಂಡು ಬಂದರು. ನಂತರ ಮಾತನಾಡಿದ ಇಬ್ಬರು ತಮಗೆ ಸದ್ಯಕ್ಕೆ ಈ ಬಗ್ಗೆ ಏನು ತಿಳಿದಿಲ್ಲ. ಐಟಿಯವರು ಬಂದಿದ್ದಾರೆ, ಇದು ನನಗೆ ಲೈಫಿನಲ್ಲೇ ಮೊದಲ ಅನುಭವ ಎಂದು ಯಶ್ ಹೇಳಿಕೊಂಡಿದ್ದಾರೆ. ಶೂಟಿಂಗ್ ಇದ್ದ ಕಾರಣ ಯಾವುದೇ ರೀತಿಯ ಸುದ್ದಿ ಸಿಕ್ಕಿರಲಿಲ್ಲ ಟಿವಿ ಮಾಧ್ಯಮಗಳ ಮೂಲಕ ತಿಳಿಯಿತು ಎಂದರು.

ಇನ್ನು ಈ ಬಗ್ಗೆ ಮಾತನಾಡಿದ ಸುದೀಪ್ ಕೂಡ ಇದೆ ರೀತಿ ಹೇಳಿದರು ಕನ್ನಡಲ್ಲಿ ಬರುತ್ತಿರುವ ದೊಡ್ಡ ದೊಡ್ಡ ಬಜೆಟ್ ಚಿತ್ರಗಳ ಕುರಿತ ಸಣ್ಣ ರೈಡ್ ಇದಾಗಿರಬಹುದು, ಇದರ ಬಗ್ಗೆ ಮಾಹಿತಿ ಪಡೆಯಲು ಐಟಿ ಅಧಿಕಾರಿಗಳು ಬಯಸಿರಬಹುದು ಎಂದರು. ಯಾವುದೇ ಕಾರಣಕ್ಕೂ ಬೇರೆ ರೀತಿಯಲ್ಲಿ ಸುದ್ದಿಯನ್ನು ಬಿತ್ತರಿಸಬೇಡಿ ಎಂದು ಮನವಿ ಮಾಡಿಕೊಂಡರು.

ಜೆಪಿ ನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹಾಗಾಗಿ ಭಯ ಪಡಬೇಕಾದ ಅಗತ್ಯವಿಲ್ಲ. ಆದಾಯ ಇಲಾಖೆ ಅಧಿಕಾರಿಗಳು ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಈ ದಾಳಿ ಹಿಂದೆ ರಾಜಕೀಯ ಕೈವಾಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸುದೀಪ್, ಮೂರು ಚಿತ್ರಗಳ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ದಾಳಿ ನಡೆದಿದೆ. ಯಾವುದೇ ಸಾಕ್ಷ್ಯಧಾರ ಇಲ್ಲದೆ ಸುಖಾ ಸುಮ್ಮನೆ ಬೇರೆಯವರ ಆರೋಪ ಮಾಡುವುದು ಸರಿಯಲ್ಲ. ಹಾಗಾಗಿ ಆ ಕುರಿತ ಪ್ರಶ್ನೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದರು.

Please follow and like us:
0
http://karnatakatoday.in/wp-content/uploads/2019/01/it-ride-yash-sudeep-1024x576.jpghttp://karnatakatoday.in/wp-content/uploads/2019/01/it-ride-yash-sudeep-150x104.jpgKarnataka Today's Newsಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಸುದ್ದಿಜಾಲಹಣಸ್ಯಾಂಡಲ್ವುಡ್ ನಾಯಕರು ನಿರ್ಮಾಪಕರ ಮೇಲೆ ಐಟಿ ದಾಳಿಯಾದ ವಿಷಯ ತಿಳಿಯುತ್ತಿದಂತೆ ಚಂದನವನದಲ್ಲಿ ಇದೀಗ ಬರಿ ಅಂತೆಕಂತೆಗಳ ಸುದ್ದಿಯೇ ಹೆಚ್ಚಾಗಿದೆ. ಐಟಿ ಅಧಿಕಾರಿಗಳು ಒಮ್ಮೆಲೇ ನಡೆಸಿದ ಈ ದಾಳಿ ಇದೀಗ ಎಲ್ಲ ನಟರನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಯಶ್ ಶೂಟಿಂಗ್ ಬಿಟ್ಟು ಮುಂಬೈನಿಂದ ಬಂದರು ಹಾಗು ನಟ ಸುದೀಪ್ ಕೂಡ ಪ್ಯಾಕಪ್ ಮಾಡಿಕೊಂಡು ಬಂದರು. ನಂತರ ಮಾತನಾಡಿದ ಇಬ್ಬರು ತಮಗೆ ಸದ್ಯಕ್ಕೆ ಈ ಬಗ್ಗೆ ಏನು ತಿಳಿದಿಲ್ಲ. ಐಟಿಯವರು...Kannada News