Janumada jodi heroin Shilpa

ಕೆಲವರ ಮುಖದ ಛಾಯೆ ಅವರ ಹೃದಯವನ್ನ ತೋರಿಸುತ್ತದೆ, ಅವರ ಒಳ್ಳೆಯ ಮನಸ್ಸು ಅವರ ಮುಖದಲ್ಲಿ ಕಾಣುತ್ತದೆ, ಅಂತಹ ಮುಖದ ಛಾಯೆ ಮತ್ತು ಹೃದಯ ಹೊಂದಿರುವ ನಟಿ, ಹಳ್ಳಿ ಹುಡುಗಿಯ ಪಾತ್ರಗಳನ್ನ ಮಾಡಿ ಕನ್ನಡಿಗರ ಹೃದಯ ಗೆದ್ದ ನಟಿ ಶಿಲ್ಪಾ.

ಜನುಮದ ಜೋಡಿ ಚಿತ್ರದಲ್ಲಿ ನಟಿ ಶಿಲ್ಪಾ ನಟನೆ ಅಮೋಘ, ಈಕೆ ಹುಟ್ಟಿದ್ದು ಕೇರಳದಲ್ಲಿ ಆದರೆ ಕನ್ನಡದಲ್ಲಿ ಹೆಚ್ಚು ಪ್ರಸಿದ್ದಿ ಗಳಿಸಿದರು, ಶಿಲ್ಪಾ ಅವರ ನಿಜವಾದ ಹೆಸರು ‘ಚಿಪ್ಪಿ’ ಇವರು ಕೊನೆಯದಾಗಿ ನಟಿಸಿದ ಚಿತ್ರ ಕೂಡ ಕನ್ನಡ ಚಿತ್ರಾನೇ.

Janumada jodi heroin Shilpa

ಇನ್ನು ಈಕೆ ನಟಿಸಿದ ಕೊನೆಯ ಚಿತ್ರ 2004 ರಲ್ಲಿ ಬಿಡುಗಡೆಯಾದ ‘ಪಾಂಡವ’ ಚಿತ್ರ, 2001 ರಲ್ಲಿ ಡೈರೆಕ್ಟರ್ ರಂಜಿತ್ ಅವರನ್ನ ಮದುವೆಯಾದ ಶಿಲ್ಪಾ ಅವರಿಗೆ ಒಂದು ಮುದ್ದಾದ ಮಗಳಿದ್ದಾಳೆ.

ಮದುವೆಯ ನಂತರ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನ ಆರಂಭಿಸಿದ ಶಿಲ್ಪಾ ಗಂಡನ ನಿರ್ದೇಶನದಲ್ಲಿ ಚಿತ್ರ ನಿರ್ಮಾಣ ಮಾಡಿದರು ಆದರೆ ಆ ಚಿತ್ರಗಳು ಓಡಲಿಲ್ಲ. ಚಿತ್ರ ನಿರ್ಮಾಣದಲ್ಲಿ ತುಂಬಾ ಹಣವನ್ನ ಕಳೆದುಕೊಂಡರು ನಟಿ ಶಿಲ್ಪಾ, ನಂತರ ಧಾರಾವಾಹಿಗಳಲ್ಲಿ ನಟಿಸಲು ಶುರು ಮಾಡಿದ ಈ ನಟಿ ಆರ್ಥಿಕವಾಗಿ ಸುಧಾರಿಸಿದ ಮೇಲೆ ಸೀರಿಯಲ್ ನಿರ್ಮಾಣಕ್ಕೆ ಕೈ ಹಾಕಿದರು, ಆದರೆ ಈ ಬಾರಿ ದೇವರು ಅವರ ಕೈ ಬಿಡಲಿಲ್ಲ.

Janumada Jodi film Heroin Shilpa

ಈಗ ಶಿಲ್ಪಾ ಅವರ ನಿರ್ಮಾಣದಲ್ಲಿ ಮಲಯಾಳಂ ನಲ್ಲಿ ‘ವನಂಬಡಿ’ ಹಾಗು ತಮಿಳಿನಲ್ಲಿ ‘ಮೌನರಾಗಮ್’ ಸೀರಿಯಲ್ ಗಳು ಪ್ರಸಾರವಾಗುತ್ತಿದ್ದು ಎರಡು ಸೀರಿಯಲ್ ಗಳು ಸೂಪರ್ ಹಿಟ್ ಆದವು. ಈಗ ದೊಡ್ಡ ನಿರ್ಮಾಪಕಿಯಾಗಿ ಬೆಳೆದಿದ್ದಾರೆ ಶಿಲ್ಪಾ ಅವರು, ಸೀರಿಯಲ್ ನಿರ್ಮಾಪಕಿ ಆಗಿದ್ದರು ಸಹ ಲೈಟ್ ಬಾಯ್ ಇಂದ ಹಿಡಿದು ಪ್ರತಿಯೊಬ್ಬರನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಾರಂತೆ ನಟಿ ಶಿಲ್ಪಾ.

Janumada jodi heroin Shilpa

ಇನ್ನು ಶಿಲ್ಪಾ ಅವರು ಸೀರಿಯಲ್ ಸೆಟ್ ನಲ್ಲಿ ಬಾಸ್ ಎನ್ನುವ ಮನೋಭಾವ ಇಲ್ಲದೆ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡುತ್ತಾರೆ, ಒಳ್ಳೆಯವರನ್ನ ಆ ದೇವರು ಕೈ ಬಿಡಲ್ಲ ಅನ್ನುವುದಕ್ಕೆ ಇವರೇ ಸಾಕ್ಷಿ, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/Janumada-jodi-heroin-Shilpa-1024x576.jpghttp://karnatakatoday.in/wp-content/uploads/2018/11/Janumada-jodi-heroin-Shilpa-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕೆಲವರ ಮುಖದ ಛಾಯೆ ಅವರ ಹೃದಯವನ್ನ ತೋರಿಸುತ್ತದೆ, ಅವರ ಒಳ್ಳೆಯ ಮನಸ್ಸು ಅವರ ಮುಖದಲ್ಲಿ ಕಾಣುತ್ತದೆ, ಅಂತಹ ಮುಖದ ಛಾಯೆ ಮತ್ತು ಹೃದಯ ಹೊಂದಿರುವ ನಟಿ, ಹಳ್ಳಿ ಹುಡುಗಿಯ ಪಾತ್ರಗಳನ್ನ ಮಾಡಿ ಕನ್ನಡಿಗರ ಹೃದಯ ಗೆದ್ದ ನಟಿ ಶಿಲ್ಪಾ. ಜನುಮದ ಜೋಡಿ ಚಿತ್ರದಲ್ಲಿ ನಟಿ ಶಿಲ್ಪಾ ನಟನೆ ಅಮೋಘ, ಈಕೆ ಹುಟ್ಟಿದ್ದು ಕೇರಳದಲ್ಲಿ ಆದರೆ ಕನ್ನಡದಲ್ಲಿ ಹೆಚ್ಚು ಪ್ರಸಿದ್ದಿ ಗಳಿಸಿದರು, ಶಿಲ್ಪಾ ಅವರ ನಿಜವಾದ ಹೆಸರು 'ಚಿಪ್ಪಿ' ಇವರು ಕೊನೆಯದಾಗಿ...Kannada News