Jialladikari shilpa Prabhakar

ಕೆಲವೊಬ್ಬರು ಹುಟ್ಟಿರುವುದು ಜನಸೇವೆಗೇನೋ ಅನಿಸುತ್ತದೆ, ನಾವು ಹೇಳುವ ಈ ಜಿಲ್ಲಾಧಿಕಾರಿ ಜನರು ಸ್ವಚ್ಛವಾದ ನೀರು ಕುಡಿಯಬೇಕು ಎಂದು ಇಂತಹ ಸಾಹಸ ಮಾಡಲು ಕೂಡ ಹಿಂಜರಿಯಲ್ಲ ಗೊತ್ತಾ.

ಅಷ್ಟಕ್ಕೂ ಈ ಜಿಲ್ಲಾಧಿಕಾರಿ ಮಾಡಿದ್ದೇನು ಗೊತ್ತಾ?, ತಮಿಳುನಾಡಿನ ತಿರುನಲ್ವೇಲಿ ಯಾ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶಿಲ್ಪಾ ಪ್ರಭಾಕರ್ ಇತ್ತೀಚಿಗೆ ಜಿಲ್ಲೆಯಲ್ಲಿ ಖಾಯಿಲೆಯಾಗಲು ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಯ ಜನ ಸ್ವಚ್ಛ ನೀರು ಕುಡಿಯುತ್ತಿದ್ದಾರೆಯೇ ಎಂದು ವಾಟರ್ ಟ್ಯಾಂಕರ್ ಗಳನ್ನ ಪರಿಶೀಲನೆ ಮಾಡಲು ಹೊರಟರು ಶಿಲ್ಪಾ.

Jialladikari shilpa Prabhakar

ವಾಟರ್ ಟ್ಯಾಂಕರ್ ಬಳಿ ಹೋದಾಗ ಅಲ್ಲಿನ ಸಿಬ್ಬಂದಿ ಎಲ್ಲ ಸ್ವಚ್ಛವಾಗಿದೆ ಎಂದು ಹೇಳಿದರು, ಅವರನ್ನ ನಂಬಿ ಸುಮ್ಮನೆ ಹೋಗುವ ಮನಸ್ಸು ಶಿಲ್ಪಾ ಅವರದ್ದು ಅಲ್ಲ.

ವಾಟರ್ ಟ್ಯಾಂಕರ್ ಸ್ವಚ್ಛವಾಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಏಕಾಏಕಿ 140 ಅಡಿ ಹತ್ತಿದರು ಶಿಲ್ಪಾ, ಅಷ್ಟು ಎತ್ತರದ ಟ್ಯಾಂಕ್ ಹತ್ತಲು ಗಂಡಸರೇ ಭಯ ಪಡುತ್ತಾರೆ ಆದರೆ ಹಿಂದೆ ಮುಂದೆ ನೋಡದೆ ಟ್ಯಾಂಕರ್ ಹತ್ತಿದರು ಶಿಲ್ಪಾ. ನಂತರ ಟ್ಯಾಂಕ್ ವಾಲಾಗೆ ಪರಿಶೀಲನೆ ಮಾಡಿ ಸಿಬ್ಬಂದಿಗಳನ್ನ ತರಾಟೆಗೆ ತಗೆದುಕೊಂಡು ಇನ್ನಷ್ಟು ಕ್ಲೀನ್ ಆಗಿ ಇಡುವಂತೆ ಹೇಳಿದರು.

Jialladikari shilpa Prabhakar

ಮತ್ತೆ ಇನ್ನೊಂದು ಸ್ಥಳಕ್ಕೆ ಹೋಗಿ ಅಲ್ಲಿಯೂ ಟ್ಯಾಂಕ್ ಹತ್ತಿ ಪಾರಿಶೀಲನೆ ಮಾಡಿದರು ಶಿಲ್ಪಾ, ಇದನ್ನ ಕಂಡ ಟ್ಯಾಂಕ್ ಕ್ಲೀನಿಂಗ್ ಸಿಬ್ಬಂದಿ ಬೆಚ್ಚಿ ಬಿದ್ದರು, ನಾನು ಯಾವುದೇ ಕ್ಷಣದಲ್ಲಿ ಬಂದು ಟ್ಯಾಂಕ್ ಚೆಕ್ ಮಾಡುತ್ತೀನಿ ಒಂದು ವೇಳೆ ಟ್ಯಾಂಕ್ ಕ್ಲೀನ್ ಆಗಿ ಇಲ್ಲ ಅಂದರೆ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಕೆ ಕೊಟ್ಟರು ಜಿಲ್ಲಾಧಿಕಾರಿ ಶಿಲ್ಪಾ. ನನಗೆ ಟ್ಯಾಂಕ್ ಹತ್ತಿದ ಯಾವುದೇ ಅನುಭವ ಇಲ್ಲ, ಇದೆ ಮೊದಲ ಬಾರಿಗೆ ಟ್ಯಾಂಕ್ ಹತ್ತಿದ್ದು ಎಂದು ಹೇಳಿದರು ಜಿಲ್ಲಾಧಿಕಾರಿ ಶಿಲ್ಪಾ.

Jialladikari shilpa Prabhakar

ಇಂತಹ ಜಿಲ್ಲಾಧಿಕಾರಿಗಳು ಅಪಾರುಪಕ್ಕೆ ಒಬ್ಬರು ಇರುತ್ತಾರೆ, ಶಿಲ್ಪಾ ಅವರ ದೈರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಜಿಲ್ಲಾಧಿಕಾರಿ ಶಿಲ್ಪಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/jilladikari-1024x576.pnghttp://karnatakatoday.in/wp-content/uploads/2018/09/jilladikari-150x104.pngKarnataka Today's Newsಎಲ್ಲಾ ಸುದ್ದಿಗಳುನಗರಸುದ್ದಿಜಾಲಕೆಲವೊಬ್ಬರು ಹುಟ್ಟಿರುವುದು ಜನಸೇವೆಗೇನೋ ಅನಿಸುತ್ತದೆ, ನಾವು ಹೇಳುವ ಈ ಜಿಲ್ಲಾಧಿಕಾರಿ ಜನರು ಸ್ವಚ್ಛವಾದ ನೀರು ಕುಡಿಯಬೇಕು ಎಂದು ಇಂತಹ ಸಾಹಸ ಮಾಡಲು ಕೂಡ ಹಿಂಜರಿಯಲ್ಲ ಗೊತ್ತಾ. ಅಷ್ಟಕ್ಕೂ ಈ ಜಿಲ್ಲಾಧಿಕಾರಿ ಮಾಡಿದ್ದೇನು ಗೊತ್ತಾ?, ತಮಿಳುನಾಡಿನ ತಿರುನಲ್ವೇಲಿ ಯಾ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶಿಲ್ಪಾ ಪ್ರಭಾಕರ್ ಇತ್ತೀಚಿಗೆ ಜಿಲ್ಲೆಯಲ್ಲಿ ಖಾಯಿಲೆಯಾಗಲು ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಯ ಜನ ಸ್ವಚ್ಛ ನೀರು ಕುಡಿಯುತ್ತಿದ್ದಾರೆಯೇ ಎಂದು ವಾಟರ್ ಟ್ಯಾಂಕರ್ ಗಳನ್ನ ಪರಿಶೀಲನೆ ಮಾಡಲು ಹೊರಟರು ಶಿಲ್ಪಾ. ವಾಟರ್...Kannada News