ಭಾರತದಲ್ಲಿ ಜಿಯೋ ಬಂದ ಮೇಲೆ ಆದ ಬದಲಾವಣೆ ಸಾಮಾನ್ಯವಾದದ್ದೇನಲ್ಲ, ಟೆಲಿಕಾಂ ಕ್ಷೇತ್ರವನ್ನ ನಡುಗಿಸಿದ ಜಿಯೋ ಒಂದರ ಮೇಲೆ ಒಂದು ಆಫ಼ರ್ ನೀಡುತ್ತಾ ಗ್ರಾಹಕರನ್ನು ತನ್ನತ್ತ ಕೆಲವೇ ದಿನಗಳಲ್ಲಿ ಸೆಳೆದಿತ್ತು. ಇದರ ಉಪಯೋಗ ಪಡೆದುಕೊಂಡ ಗ್ರಾಹಕ ಜಿಯೋ ಸೇವೆಯನ್ನು ಮೆಚ್ಚುತ್ತ ಬಂದಿದ್ದ ಇದೀಗ ಮನೋರಂಜನಾ ಕ್ಷೇತ್ರದಲ್ಲಿ ಜಿಯೋ ಮತ್ತೊಂದು ಹೆಜ್ಜೆ ಇಟ್ಟಿದೆ. ಹೌದು ಜಿಯೋ ಗ್ರಾಹಕರಿಗೆ ಅಮ್ಬನಿ ಭರ್ಜರಿ ಸುದ್ದಿಯೊಂದನ್ನ ನೀಡಿದ್ದಾರೆ ಬರೋಬ್ಬರಿ ಐದು ವರ್ಷಗಳ ಕಾಲ ಈ ಒಪ್ಪಂದ ಇರಲಿದ್ದು ಗ್ರಾಹಕರಿಗೆ ಎಲ್ಲಿಲ್ಲದ ಸಂತಸ ನೀಡಿದೆ.

2023 ರ್ರವರೆಗೆ ಜಿಯೋ ಒಪ್ಪಂದ ಮಾಡಿಕೊಂಡಿದೆ ಹಾಗಿದ್ರೆ ಏನಿದು ಸುದ್ದಿ ನೋಡೋಣ ಬನ್ನಿ. ಭಾರತದಲ್ಲಿ ಕ್ರೀಡೆಗೆ ಬಹಳಷ್ಟು ಅಭಿಮಾನಿಗಳಿದ್ದಾರೆ, ಅದರಲ್ಲೂ ಕ್ರಿಕೆಟ್ ಎಂದರೆ ಸಾಕು ಈ ದೇಶದ ಜನರಿಗೆ ಎಲ್ಲಿಲ್ಲದ ಪ್ರೀತಿ. ವೀಕ್ಷಕರ ಸಂಖ್ಯೆ ಅಂತೂ ಹೇಳತೀರದು, ಇದೆ ವಿಷಯವನ್ನು ಮನಗಂಡ ಜಿಯೋ ಈಗ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಈ ಮೂಲಕ ಇನ್ನು ಐದು ವರ್ಷಗಳ ಸ್ಟಾರ್ ಸ್ಪೋರ್ಟ್ಸ್ ಅನ್ನು ಉಚಿತವಾಗಿ ನಾವು ಜಿಯೋ ಟಿವಿ ಮೂಲಕ ವೀಕ್ಷಣೆ ಮಾಡಬಹುದು.

ಈಗಾಗಲೇ ನಡೆಯುತ್ತಿರುವ ಏಷ್ಯಾ ಕಪ್ ಸೇರಿದಂತೆ ಮಂದಿನ ಐದು ವರ್ಷಗಳಲ್ಲಿ ಟೀಮ್ ಇಂಡಿಯಾ ಭಾಗವಹಿಸುವ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ನೇರವಾಗಿ ಪ್ರಸಾರ ಮಾಡುವ ಹಕ್ಕನ್ನು ಹೊಂದಿರುವ ಸ್ಟಾರ್ ಇಂಡಿಯಾ ದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಜಿಯೋ, ಮುಂದಿನ ಐದು ವರ್ಷ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ತನ್ನ ಬಳಕೆದಾರರಿಗೆ ಉಚಿತವಾಗಿ ತೋರಿಸಲಿದೆ.

ಟೀಮ್ ಇಂಡಿಯಾ ಆಡುವ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಅಂದ್ರೆ, T20, ODI ಮತ್ತು ಟೆಸ್ಟ್‌ ಪಂದ್ಯಗಳನ್ನು ಜಿಯೋ ತನ್ನ ಜಿಯೋ ಟಿವಿ ಆಪ್‌ನಲ್ಲಿ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಅಲ್ಲದೇ ದೇಶದಲ್ಲಿ ಆಡುವ ರಣಜಿ ಪಂದ್ಯಗಳನ್ನು ಜಿಯೋದಲ್ಲಿಯೇ ನೋಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಮಾಹಿತಿ ನಿಮಗೆ ಖುಷಿ ಕೊಟ್ಟಿದ್ದಾರೆ ವಿಷಯವನ್ನು ಹಂಚಿಕೊಳ್ಳಿ.

Please follow and like us:
0
http://karnatakatoday.in/wp-content/uploads/2018/09/jio-ambani-1024x576.pnghttp://karnatakatoday.in/wp-content/uploads/2018/09/jio-ambani-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಭಾರತದಲ್ಲಿ ಜಿಯೋ ಬಂದ ಮೇಲೆ ಆದ ಬದಲಾವಣೆ ಸಾಮಾನ್ಯವಾದದ್ದೇನಲ್ಲ, ಟೆಲಿಕಾಂ ಕ್ಷೇತ್ರವನ್ನ ನಡುಗಿಸಿದ ಜಿಯೋ ಒಂದರ ಮೇಲೆ ಒಂದು ಆಫ಼ರ್ ನೀಡುತ್ತಾ ಗ್ರಾಹಕರನ್ನು ತನ್ನತ್ತ ಕೆಲವೇ ದಿನಗಳಲ್ಲಿ ಸೆಳೆದಿತ್ತು. ಇದರ ಉಪಯೋಗ ಪಡೆದುಕೊಂಡ ಗ್ರಾಹಕ ಜಿಯೋ ಸೇವೆಯನ್ನು ಮೆಚ್ಚುತ್ತ ಬಂದಿದ್ದ ಇದೀಗ ಮನೋರಂಜನಾ ಕ್ಷೇತ್ರದಲ್ಲಿ ಜಿಯೋ ಮತ್ತೊಂದು ಹೆಜ್ಜೆ ಇಟ್ಟಿದೆ. ಹೌದು ಜಿಯೋ ಗ್ರಾಹಕರಿಗೆ ಅಮ್ಬನಿ ಭರ್ಜರಿ ಸುದ್ದಿಯೊಂದನ್ನ ನೀಡಿದ್ದಾರೆ ಬರೋಬ್ಬರಿ ಐದು ವರ್ಷಗಳ ಕಾಲ ಈ ಒಪ್ಪಂದ...Kannada News