ಜಿಯೋ ದಿಗ್ಗಜ ಮುಕೇಶ್ ಅಂಬಾನಿ ದೇಶದ ಅತಿದೊಡ್ಡ ಬ್ಯಾಂಕ್ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಡಿಜಿಟಲ್ ಟ್ರಾನ್ಸಕ್ಷನ್ ಮತ್ತು ಎಲ್ಲ ರೀತಿಯ ಪೇಯಮೆಂಟ್ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ವಿಶೇಷವಾಗಿ ಜಿಯೋ ಮತ್ತು sbi ಗ್ರಾಹಕರಿಗೆ ಇದು ನೆರವಾಗಲಿದೆ. ನಿಮಗೆ ಗೊತ್ತಿರಬಹುದು ಆನ್ಲೈನ್ ಮೂಲಕ ಹಣದ ವರ್ಗಾವಣೆ ಹಾಗೂ ಇತರೆ ಸೇವೆಗಳನ್ನು ಬಳಸುವವರಿಗೆ ಸ್ಟೇಟ್ ಬ್ಯಾಂಕ್ ವಿಶೇಷ ಆಫರ್ ನೀಡುತ್ತದೆ.

ಮತ್ತು ಕೆಲ ಲಕ್ಷುರಿ ಪಾಯಿಂಟ್ ಗಳನ್ನು ಕೂಡ ನೀಡುತ್ತದೆ ಇದೆ ಮಾದರಿ ಇದೀಗ ಜಿಯೋ ಮತ್ತು sbi ಸೇರಿ ಈಗ ಮತ್ತೆ SBI YONO ಎನ್ನುವ ಹೊಸ ಸೇವೆಯನ್ನು ನಿಮ್ಮ ಮುಂದೆ ತಂದಿದ್ದಾರೆ. ಇಲ್ಲಿ ಎಲ್ಲ ಬಗೆಯ ಡಿಜಿಟಲ್ ಪೇಯ್ಮೆಂಟ್, ಟ್ಯಾಕ್ಸಿ ಸೇವೆ, ಬಿಲ್ ಕಟ್ಟುವುದು, ಹಣ ವರ್ಗಾವಣೆ ಯಾವುದೇ ಬಗೆಯ ಸೇವೆಯನ್ನು ಆಫರ್ ಮಾದರಿಯಲ್ಲಿ ನೀಡಲಾಗುತ್ತದೆ.

ಇನ್ನು ಇದನ್ನು ವಿಶೇಷವಾಗಿ ಮೈ ಜಿಯೋ ಜೊತೆ ಲೀನಗೊಳಿಸುವುದೇ ಈ ಆಫರ್ ಆಗಿದೆ ಅದು ಕೂಡ ಜಿಯೋ ಗ್ರಾಹಕರಿಗಾಗಿಯೇ ಎನ್ನುವುದು ವಿಶೇಷ. ಇಷ್ಟೇ ಅಲ್ಲದೆ ಜಿಯೋ ಸೇವೆಗಳು ಕೂಡ ಇಲ್ಲಿ ನಿಮಗೆ ಅತ್ಯಂತ ರಿಯಾಯಿತಿ ದರದಲ್ಲಿ ಸಿಗಲಿದೆ ಮತ್ತು ಜಿಯೋ ಫೋನ್, ಸಿಮ್, ಡಾಂಗಲ್, ಎಲ್ಲ ಬಗೆಯ ವಸ್ತುಗಳು ನಿಮಗೆ ಆಫರ್ ನಲ್ಲಿ ಸಿಗಲಿದೆ ಎಂದು ತಿಳಿಸಲಾಗಿದೆ.

ಜಿಯೋ ಮತ್ತು SBI ಒಪ್ಪಂದ ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಮಾರ್ಕೆಟಿಂಗ್ ದ್ರಷ್ಟಿಯಿಂದ ಇದೊಂದು ಉತ್ತಮ ಸೇವೆ ಎನ್ನಲಾಗುತ್ತಿದೆ ಈ ಸೇವೆಯ ಬಗ್ಗೆ ಹೆಚ್ಚಿನ ಅಪ್ಡೇಟ್ ಇನ್ನಷ್ಟೇ ಬರಬೇಕಿದೆ. ದೇಶದ ಅತಿದೊಡ್ಡ ಬ್ಯಾಂಕಿಂಗ್ ಸೇವೆ ಮತ್ತು ದೇಶದಲ್ಲೇ ಕ್ರಾಂತಿ ಮೂಡಿಸಿದ ಜಿಯೋ ಒಪ್ಪಂದ ಮಾಡಿಕೊಂಡಿರುವುದು ಗ್ರಾಹಕರಿಗೆ ಸಂತಸ ತಂದಿದ್ದು ಮುಂದೆ ಯಾವ ರೀತಿಯ ಆಫರ್ ಸಿಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ .

Please follow and like us:
0
http://karnatakatoday.in/wp-content/uploads/2018/08/sbi-1024x576.pnghttp://karnatakatoday.in/wp-content/uploads/2018/08/sbi-150x104.pngKarnataka Todayಅಂಕಣಆಟೋಎಲ್ಲಾ ಸುದ್ದಿಗಳುಜಿಯೋ ದಿಗ್ಗಜ ಮುಕೇಶ್ ಅಂಬಾನಿ ದೇಶದ ಅತಿದೊಡ್ಡ ಬ್ಯಾಂಕ್ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಡಿಜಿಟಲ್ ಟ್ರಾನ್ಸಕ್ಷನ್ ಮತ್ತು ಎಲ್ಲ ರೀತಿಯ ಪೇಯಮೆಂಟ್ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ವಿಶೇಷವಾಗಿ ಜಿಯೋ ಮತ್ತು sbi ಗ್ರಾಹಕರಿಗೆ ಇದು ನೆರವಾಗಲಿದೆ. ನಿಮಗೆ ಗೊತ್ತಿರಬಹುದು ಆನ್ಲೈನ್ ಮೂಲಕ ಹಣದ ವರ್ಗಾವಣೆ ಹಾಗೂ ಇತರೆ ಸೇವೆಗಳನ್ನು ಬಳಸುವವರಿಗೆ ಸ್ಟೇಟ್ ಬ್ಯಾಂಕ್ ವಿಶೇಷ ಆಫರ್ ನೀಡುತ್ತದೆ. ಮತ್ತು ಕೆಲ...Karnataka news