ಭಾರತದಲ್ಲಿ ಜಿಯೋ ಕಂಪನಿಯು ಸೆಪ್ಟೆಂಬರ್ 5, 2016ರಂದು ಉಚಿತವಾಗಿ 4ಜಿ ಸೇವೆಯನ್ನು ವಾಣಿಜ್ಯಿಕ ಬಿಡುಗಡೆಗೊಳಿಸಿತ್ತು ಮತ್ತು ಪ್ರತಿದಿನಕ್ಕೆ ಸರಾಸರಿ 6 ಲಕ್ಷ ಚಂದಾದಾರರ ದರದಲ್ಲಿ ಕೇವಲ 83 ದಿನಗಳಲ್ಲಿ 5 ಕೋಟಿ, ಮತ್ತು 170 ದಿನಗಳಲ್ಲಿ 10 ಕೋಟಿ ಚಂದಾದಾರರ ಸಂಖ್ಯೆಯನ್ನು ದಾಟಿತ್ತು. ಸದ್ಯಕ್ಕೆ ಜಿಯೋ ಭಾರತದಲ್ಲಿ ಅತಿ ಲಾಭದಾಯಕ ಹಾಗು ಎಲ್ಲರ ನೆಚ್ಚಿನ ಬಳಕೆಯ ಇಂಟರ್ನೆಟ್ ಆಗಿದೆ. ಆದರೆ ಭಾರತದಲ್ಲಿ ಇತರೆ ಟೆಲಿಕಾಂ ಕಂಪನಿಗಳು ಸದ್ಯಕ್ಕೆ ನಷ್ಟದ ಹಾದಿ ಹಿಡಿದಿವೆ. ಜಿಯೋ ಕೂಡ ಇತ್ತೀಚಿಗೆ ತನ್ನ ಕರೆಗಳಿಗ್ಗೆ ಆರು ಪೈಸೆ ಶುಲ್ಕ ಕೂಡ ವಿಧಿಸಿದೆ.

ಭಾರತದಲ್ಲಿ ಏರ್ಟೆಲ್ ಹಾಗು ವೊಡಾಫೋನ್ ಕಂಪನಿಗಳು ಭಾರಿ ನಷ್ಟದಲಿವೆ. ಈಗಾಗಲೇ ವೊಡಾಫೋನ್ ಭಾರತ ಬಿಟ್ಟು ತೆರಳುವ ಸೂಚನೆ ನೀಡಿದೆ. ಇದರ ನಡುವೆಯೇ ಡಿಸೇಂಬರ್ ಮೊದಲ ವಾರದಲ್ಲಿ ಜಿಯೋ ಹಾಗು ಏರ್ಟೆಲ್ ಇಂಟರ್ನೆಟ್ ದರಗಳು ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿವೆ. ಭಾರತೀಯರ ಅಚ್ಚುಮೆಚ್ಚಿನ ಮೊಬೈಲ್ ನೆಟ್ ವರ್ಕ್ ಗಳಲ್ಲಿ ಒಂದಾಗಿರುವ ರಿಲಯನ್ಸ್ ಜಿಯೋ ಇದೇ ಡಿಸೆಂಬರ್ 6ರಿಂಡ ಕರೆ ಹಾಗೂ ಡೇಟಾ ಬಳಕೆ ಶುಲ್ಕಗಳನ್ನು ಕಡಾ 40 ರಷ್ಟು ಹೆಚ್ಚಿಸಲಿದೆ. ಡಿಸೆಂಬರ್ 6 ರಿಂದ ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಹೇಳಿರುವ ಮೊಬೈಲ್ ಸೇವಾ ಸಂಸ್ಥೆ ಇದೀಗ ಶುಲ್ಕ ಹೆಚ್ಚಳದ ಮಾತುಗಳನ್ನು ಸಹ ಆಡಿದೆ.

ಆದಾಗ್ಯೂ, ಹೊಸ ಯೋಜನೆಗಳ ಅಡಿಯಲ್ಲಿ ಗ್ರಾಹಕರು ಶೇಕಡಾ 300 ರಷ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಇತರ ಟೆಲಿಕಾಂ ಆಪರೇಟರ್‌ಗಳ ನೆಟ್‌ವರ್ಕ್‌ ಗಳಿಗೆ ಮಾಡುವ ಕರೆಗಳಿಗೆ ಇದು ನ್ಯಾಯಯುತ ಬಳಕೆಯ ನೀತಿಯನ್ನು ಅನುಸರಿಸಲಿದೆ ಎಂದು ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ಹೇಳಿದೆ.

ಇಷ್ಟುದಿನ ಅಗ್ಗದ ಇಂಟರ್ನೆಟ್ ಬಳಕೆ ಮಾಡುತ್ತಿದ್ದ ಭಾರತೀಯರಿಗೆ ಇನ್ನು ಮೇಲೆ ಜಿಯೋ ಕೂಡ ದುಬಾರಿ ಆಗಿರುವುದು ಸಾಕಷ್ಟು ತಲೆ ನೋವು ನೀಡಿದೆ. ಇದರ ಜೊತೆಗೆ ಏರ್ಟೆಲ್ ಕೂಡ ಇಂದಿನಿಂದ ದರ ಪರಿಷ್ಕರಣೆ ಮಾಡುತ್ತಿದೆ.”ಜಿಯೋ ಅನಿಯಮಿತ ಧ್ವನಿ ಮತ್ತು ಡೇಟಾದೊಂದಿಗೆ ಹೊಸ ಆಲ್ ಇನ್ ಒನ್ ಯೋಜನೆಗಳನ್ನು ಪರಿಚಯಿಸಲಿದೆ. ಈ ಯೋಜನೆಗಳು ಇತರ ಮೊಬೈಲ್ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು ನ್ಯಾಯಯುತ ಬಳಕೆಯ ನೀತಿಯನ್ನು ಹೊಂದಿರುತ್ತದೆ. ಹೊಸ ಯೋಜನೆಗಳು 2019 ರ ಡಿಸೆಂಬರ್ 6 ರಿಂದ ಜಾರಿಗೆ ಬರಲಿವೆ ಎಂದು ಅಂಬಾನಿ ತಿಳಿಸಿದ್ದಾರೆ.

ಟೆಲಿಕಾಂ ಸುಂಕಗಳ ಪರಿಷ್ಕರಣೆಗಾಗಿ ಸಮಾಲೋಚನೆ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಲು ಮುಂದಾಗಿರುವ ಜಿಯೋ ಇತರ ಎಲ್ಲ ಮಧ್ಯಸ್ಥಗಾರರ ಭಾಗವಹಿಸುವಿಕೆಯನ್ನು ಕಾಯುತ್ತಿದೆ ಎಂದು ಅವರು ತಿಳಿಸಿದರು. ಇನ್ನು ಅತಿಹೆಚ್ಚು ಇಂಟರ್ನೆಟ್ ಬಳಕೆ ಮಾಡುತ್ತಿರುವ ನಮ್ಮ ದೇಶದಲ್ಲಿ ಸದ್ಯಕ್ಕೆ ಡೇಟಾ ಬೆಲೆ ಏರಿಕೆ ಯಾವ ರೀತಿಯಲ್ಲಿ ಪರಿಣಾಮ ಬೀಳಲಿದೆ ಎನ್ನುವುದು ದೊಡ್ಡ ಚರ್ಚೆಯಾಗಿದೆ. ಇದೆಲ್ಲದರ ನಡುವೆ ಸರ್ಕಾರ ಕೂಡ ಇಂಟರ್ನೆಟ್ ಬಳಕೆ ಮೇಲೆ ತೀವ್ರ ನಿಗಾ ಇಟ್ಟಿದೆ.

Please follow and like us:
error0
http://karnatakatoday.in/wp-content/uploads/2019/12/jio-december-1024x576.jpghttp://karnatakatoday.in/wp-content/uploads/2019/12/jio-december-150x104.jpgKarnataka Trendingಅಂಕಣಭಾರತದಲ್ಲಿ ಜಿಯೋ ಕಂಪನಿಯು ಸೆಪ್ಟೆಂಬರ್ 5, 2016ರಂದು ಉಚಿತವಾಗಿ 4ಜಿ ಸೇವೆಯನ್ನು ವಾಣಿಜ್ಯಿಕ ಬಿಡುಗಡೆಗೊಳಿಸಿತ್ತು ಮತ್ತು ಪ್ರತಿದಿನಕ್ಕೆ ಸರಾಸರಿ 6 ಲಕ್ಷ ಚಂದಾದಾರರ ದರದಲ್ಲಿ ಕೇವಲ 83 ದಿನಗಳಲ್ಲಿ 5 ಕೋಟಿ, ಮತ್ತು 170 ದಿನಗಳಲ್ಲಿ 10 ಕೋಟಿ ಚಂದಾದಾರರ ಸಂಖ್ಯೆಯನ್ನು ದಾಟಿತ್ತು. ಸದ್ಯಕ್ಕೆ ಜಿಯೋ ಭಾರತದಲ್ಲಿ ಅತಿ ಲಾಭದಾಯಕ ಹಾಗು ಎಲ್ಲರ ನೆಚ್ಚಿನ ಬಳಕೆಯ ಇಂಟರ್ನೆಟ್ ಆಗಿದೆ. ಆದರೆ ಭಾರತದಲ್ಲಿ ಇತರೆ ಟೆಲಿಕಾಂ ಕಂಪನಿಗಳು ಸದ್ಯಕ್ಕೆ ನಷ್ಟದ...Film | Devotional | Cricket | Health | India