ಪ್ರಸ್ತುತ ಭಾರತದಲ್ಲಿ ಟೆಲಿಕಾಂ ಕ್ಷೇತ್ರವನ್ನು ಆ ಳುತ್ತಿರುವ ದಿಗ್ಗಜ ಕಂಪನಿ ಜಿಯೋ ಇದೀಗ ಜನರನ್ನು ತನ್ನತ್ತ ಸೆಳೆಯಲು ಮತ್ತೊಂದಿಷ್ಟು ಪ್ರಯತ್ನ ಮಾಡುತ್ತಿದೆ. ಜಿಯೋ ದೇಶಕ್ಕೆ ಪರಿಚಯಿಸಿದ ಬಳಿಕ ಅಂಬಾನಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತಿದೆ, ನೋಡ ನೋಡುತ್ತಿದ್ದಂತೆ ಜಿಯೋ ಇಡೀ ಭಾರತೀಯರ ಮನದಲ್ಲಿ ನೆಲೆಸಿ ಬಿಟ್ಟಿತ್ತು. ಅಂತರ್ಜಾಲ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಯಾರು ಮಾಡದ ದಾಖಲೆಯನ್ನೇ ನಿರ್ಮಿಸಿತ್ತು ಜಿಯೋ, ಅತ್ಯಂತ ಕಡಿಮೆ ಸಮಯದಲ್ಲಿ 100 ಮಿಲಿಯನ್ ಗ್ರಾಹಕರನ್ನು ಹೊಂದಿದ ಹೆಗ್ಗಳಿಕೆ ಕೂಡ ಜಿಯೋ ಗೆ ಬಂದಿತ್ತು. ಇದಾದ ಬಳಿಕ ಅಂಬಾನಿ ಕಡಿಮೆ ದರದಲ್ಲಿ ಇಂಟರ್ನೆಟ್ ನೀಡುವ ಯೋಚನೆಯನ್ನು ಮತ್ತೆ ಮುಂದುವರಿಸಿದರು ಜನರಿಗೆ ಕೈಗೆಟುಕುವ ದರದಲ್ಲಿ ಡಾಟಾ ಸೇವೆ ಒದಗಿಸಿದರು.

ಇದಷ್ಟೇ ಅಲ್ಲದೆ ಕೇವಲ ಇಂಟರ್ನೆಟ್ ಮಾತ್ರವಲ್ಲದೆ ಜಿಯೋ ಫೋನುಗಳನ್ನು ಪರಿಚಯಿಸುವ ಮೂಲಕ ಮೊಬೈಲ್ ಮಾರಾಟದಲ್ಲೂ ಹೆಸರು ಮಾಡಿದರು. ಸದ್ಯಕ್ಕೆ ದೇಶದಲ್ಲಿ ಜಿಯೋ ಪರಿಚಯಿಸಿರುವ ಕಡಿಮೆ ಬೆಲೆಯ 4G ಫೋನ್ ಎಲ್ಲರ ಕೈಯಲ್ಲೂ ಓಡಾಡುತ್ತಿದೆ, ಅಂಬಾನಿ ಈ ಫೋನ್ ಬಿಡುಗಡೆಯ ಸಂದರಾಬಾದಲ್ಲಿ ಭಾರತೀಯರಿಗೆ ನಾನು ಉಚಿತವಾಗಿ ನೀಡಬೇಕೆಂದಿದ್ದೆ ಆದರೆ ಉಚಿತವಾದರೆ ಅದು ಕೆಡುಕಾಗುತ್ತದೆ ಹೀಗಾಗಿ 1500 ರೂಗೆ ಫೋನ್ ಖರೀದಿ ಮಾಡಿ ಮೂರು ವರ್ಷದ ನಂತರ ಹಿಂತಿರುಗಿಸಿದರೆ ಹಣ ವಾಪಸು ಮಾಡಲಾಗುವುದು ಎಂದಿದ್ದರು.

ಅದರಂತೆಯೇ ಈಗ ದೇಶದಲ್ಲಿ ದೀಪಾವಳಿ ಆಗಮನದ ನಿರೀಕ್ಷೆಯಲ್ಲಿದೆ, ಇದರ ನಡುವೆಯೇ ಅಂಬಾನಿ ದೇಶದ ಜನತೆಗೆ ಜಿಯೋ ಬಜೆಟ್ 4G ಫೋನ್ ವಿಚಾರವಾಗಿ ಯಾರು ಊಹಿಸಿದ ಆಫ಼ರ್ ನೀಡಿದ್ದಾರೆ. ಹೌದು 1500 ರೂಗೆ ಸಿಗುತ್ತಿದ್ದ ಫೋನಿನ ಬೆಳೆಯನ್ನು ದೀಪಾವಳಿಯ ವೇಳೆಯಲ್ಲಿ 50 ಪರ್ಸೆಂಟ್ ರಿಯಾಯಿತಿ ದರದಲ್ಲಿ ನೀಡಲಿದ್ದಾರೆ ಅಂಬಾನಿ. ಹೌದು ಇದು ಯಾವುದೇ ಗಾಸಿಪ್ ಅಲ್ಲ ಬದಲಿಗೆ ನಿಜವಾದ ಹೇಳಿಕೆ, ಸ್ವತಃ ರಿಲಯನ್ಸ್ ಇಂಡಸ್ಟ್ರೀಸ್ ಈ ಬಗ್ಗೆ ಹೇಳಿಕೊಂಡಿದೆ. ಎಲ್ಲ ಭಾರತೀಯರ ಸಂಪೂರ್ಣ ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇಂದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿದೆ.

ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ 699 ರೂ. ವಿಶೇಷ ಬೆಲೆಯಲ್ಲಿ ದೊರಕಲಿದೆ. 1,500 ರೂ ಸಾಮಾನ್ಯ ಬೆಲೆಯ ಹೋಲಿಕೆಯಲ್ಲಿ ಇದು ರೂ 800ರ ಸ್ಪಷ್ಟ ಉಳಿತಾಯವಾಗಿದ್ದು, ಇದಕ್ಕೆ ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕು ಎನ್ನುವಂತಹ ಯಾವ ವಿಶೇಷ ನಿಬಂಧನೆಯೂ ಇರುವುದಿಲ್ಲ. ಈ ಬೆಲೆ ಸದ್ಯ ಮಾರುಕಟ್ಟೆಯಲ್ಲಿರುವ ಅನೇಕ 2ಜಿ ಫೀಚರ್ ಫೋನುಗಳ ಬೆಲೆಗಿಂತ ಬಹಳ ಕಡಿಮೆಯಿದೆ. ಹೀಗಾಗಿ, 4ಜಿ ಸೇವೆಗಳಿಗೆ ಉನ್ನತೀಕರಿಸಿಕೊಳ್ಳಲು ಫೀಚರ್ ಫೋನ್ ಬಳಕೆದಾರರಿಗಿದ್ದ ಕೊನೆಯ ಅಡಚಣೆಯೂ ಇದೀಗ ನಿವಾರಣೆಯಾದಂತಾಗಿದೆ.

ಈ ದೀಪಾವಳಿಯಲ್ಲಿ ಹಲವು ಮೊಬೈಲ್ ಕಂಪನಿಗಳು ವಿಶೇಷ ಆಫ಼ರ್ ನೀಡಬೇಕೆಂದು ಕಾತುರದಲ್ಲಿದ್ದರು, ಇದೆ ಸಂದರ್ಭದಲ್ಲಿ ಮುಕೇಶ್ ಅಂಬಾನಿ ದೊಡ್ಡ ಆಫ಼ರ್ ದೇಶದ ಜನತೆಗೆ ನೀಡಿದ್ದಾರೆ. ಭಾರತೀಯರು ಇಂಟರ್ನೆಟ್ ಕ್ಷೇತ್ರದಲ್ಲಿ ಸಿಗುವ ಯಾವುದೇ ಸೇವೆಗಳನ್ನು ಅವರು ವಂಚಿತರಾಗದಂತೆ ನೋಡಿಕೊಳ್ಳುವುದು ಜಿಯೋ ಕರ್ತವ್ಯ ಎಂದಿದ್ದಾರೆ. ಡಿಜಿಟಲ್ ಇಂಡಿಯಾದ ಕನಸನ್ನು ಹೊತ್ತಿರುವ ಪ್ರತಿಯೊಬ್ಬ ಭಾರತೀಯನಿಗೂ ಇದು ಸಹಕಾರಿಯಾಗಲಿದೆ, ಈ ಫೀಚರ್ ಫೋನಿನಲ್ಲಿ ಲೈವ್ ಟಿವಿ, ಉಚಿತ ಮ್ಯೂಸಿಕ್, ಹಾಗು ರೇಡಿಯೋ , ಇತ್ಯಾದಿ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿ ಸಿಗಲಿದೆ. ಇಷ್ಟೇ ಅಲ್ಲದೆ ಜಿಯೋ ಬಜೆಟ್ ಫೋನ್ ಗೆ ನೀವು ಮಾಡುವ ರಿಚಾರ್ಜ್ ಮೇಲೂ ಕೂಡ ಅಂಬಾನಿ ವಿಶೇಷ ಆಫ಼ರ್ ಘೋಷಣೆ ಮಾಡಿದ್ದಾರೆ

Please follow and like us:
error0
http://karnatakatoday.in/wp-content/uploads/2019/10/JIO-NEW-OFFERS-1024x576.jpghttp://karnatakatoday.in/wp-content/uploads/2019/10/JIO-NEW-OFFERS-150x104.jpgKarnataka Trendingಗ್ಯಾಡ್ಜೆಟ್ಸ್ಪ್ರಸ್ತುತ ಭಾರತದಲ್ಲಿ ಟೆಲಿಕಾಂ ಕ್ಷೇತ್ರವನ್ನು ಆ ಳುತ್ತಿರುವ ದಿಗ್ಗಜ ಕಂಪನಿ ಜಿಯೋ ಇದೀಗ ಜನರನ್ನು ತನ್ನತ್ತ ಸೆಳೆಯಲು ಮತ್ತೊಂದಿಷ್ಟು ಪ್ರಯತ್ನ ಮಾಡುತ್ತಿದೆ. ಜಿಯೋ ದೇಶಕ್ಕೆ ಪರಿಚಯಿಸಿದ ಬಳಿಕ ಅಂಬಾನಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತಿದೆ, ನೋಡ ನೋಡುತ್ತಿದ್ದಂತೆ ಜಿಯೋ ಇಡೀ ಭಾರತೀಯರ ಮನದಲ್ಲಿ ನೆಲೆಸಿ ಬಿಟ್ಟಿತ್ತು. ಅಂತರ್ಜಾಲ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಯಾರು ಮಾಡದ ದಾಖಲೆಯನ್ನೇ ನಿರ್ಮಿಸಿತ್ತು ಜಿಯೋ, ಅತ್ಯಂತ ಕಡಿಮೆ ಸಮಯದಲ್ಲಿ 100 ಮಿಲಿಯನ್ ಗ್ರಾಹಕರನ್ನು ಹೊಂದಿದ ಹೆಗ್ಗಳಿಕೆ...Film | Devotional | Cricket | Health | India