ಸದ್ಯಕ್ಕೆ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಇದುವರೆಗೂ ತಾನು ಕೊಟ್ಟ ಆಫ಼ರ್ ಗಳಿಂದ ಭರ್ಜರಿ ಹೆಸರು ಮಾಡಿ ಮಾರುಕಟ್ಟೆಯಲ್ಲಿ ಜನರ ವಿಶ್ವಾಸ ಹಾಗು ನಂಬಿಕೆಯನ್ನು ಉಳಿಸಿಕೊಂಡಿತ್ತು. ವೇಗದ 4G ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಅತಿ ಕಡಿಮೆ ದರ ವಿಧಿಸಿತ್ತು, ಅಷ್ಟೇ ಅಲ್ಲದೆ ಯಾವುದೇ ಕರೆ ಹಾಗೂ ಯಾವುದೇ ನೆಟ್ವರ್ಕ್ ಗಳಿಗೆ ಕಾಲ್ ಮಾಡಿದರೂ ಕೂಡ ಉಚಿತ ಸೇವೆ ಒದಗಿಸಿತ್ತು. ಇನ್ನು ಈ ಆಫ಼ರ್ ನೀಡಿದ ಕೆಲ ದಿನಗಳಲ್ಲೇ ಜಿಯೋ ಹೆಮ್ಮರವಾಗಿ ಬೆಳೆದು ಭಾರತೀಯ ಟೆಲಿಕಾಂ ಕ್ಷೆತ್ರದಲ್ಲಿ ಇತಿಹಾಸ ಸ್ರಷ್ಟಿ ಮಾಡಿತ್ತು. ಎಲ್ಲರ ಬಾಯಲ್ಲೂ ಜಿಯೋ ಎಂದರೆ ವೇಗದ ನೆಟ್ವರ್ಕ್ ಅನ್ನುವಂತೆ ಟ್ರೆಂಡ್ ಸೆಟ್ ಮಾಡಿತ್ತು. ಅರಂಭದಲ್ಲಿ ಉಚಿತ ಡೇಟಾ ಸೇವೆ ಒದಗಿಸಿ ನಂತರ ಕಡಿಮೆ ದರದಲ್ಲಿ ಇಂಟರ್ನೆಟ್ ಕೊಟ್ಟ ಜಿಯೋ ಗ್ರಾಹಕರ ಗಮನ ಸೆಳೆದಿತ್ತು.

ಜಿಯೋ ಮಾಡಿದ ಈ ಕೆಲಸದಿಂದ ದಶಕಗಳಿಂದ ಭಾರತದಲ್ಲಿ ನೆಲೆಯೂರಿದ್ದ ಅದೆಷ್ಟೋ ಟೆಲಿಕಾಂ ಕಂಪನಿಗಳು ರಾತ್ರೋ ರಾತ್ರಿ ಭಾರಿ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು. ಜಿಓಯೋ ನೀಡುತ್ತಿದ್ದ ಆಫರ ಗಳಿಗೆ ಜನರು ಫಿದಾ ಆಗಿಬಿಟ್ಟಿದ್ದರು. ಎರಡು ಸಿಮ್ ಆದರೂ ಪರವಾಗಿಲ್ಲ ಜಿಯೋ ಇಂಟರ್ನೆಟ್ ಬೇಕೇ ಬೇಕು ಎಂದು ಹಠ ಹಿಡಿದು ಉಚಿತ ಟಿವಿ, ಮ್ಯೂಸಿಕ್, ಹಲೋ ಟ್ಯೂನ್ ಹೀಗೆ ಮುಂತಾದ ಸೇವೆಗಳನ್ನು ತನ್ನದಾಗಿಸಿಕೊಳ್ಳಲು ಮುಗಿಬಿದ್ದರು. ಸದ್ಯಕ್ಕೆ ಜಿಯೋ ಫ್ರೀ ಫ್ರೀ ಎನ್ನುತ್ತಿದ ಗ್ರಾಹಕರಿಗೆ ಇದೀಗ ದೊಡ್ಡ ಸಮಸ್ಯೆ ಎದುರಾಗಿದೆ. ಜಿಯೋ ಕರೆಗಳು ಉಚಿತ ಎಂದುಕೊಂಡವರಿಗೆ ಇನ್ನು ಮುಂದೆ ಈ ಹೇಳಿಕೆ ನಿಡದಂತಾಗಿದೆ.

ಹೌದು ಟ್ರಾಯ್ ನಿರ್ದೇಶನದ ಪ್ರಕಾರ ಎಲ್ಲ ಟೆಲಿಕಾಂ ಕಂಪನಿಗಳು ಇದೀಗ ಈ ಒಡಂಬಡಿಕೆ ಮಾಡಿಕೊಳ್ಳಲೇಬೇಕಾಗಿದೆ. ಹೀಗಾಗಿ ಇಷ್ಟು ದಿನ ಉಚಿತ ಕರೆ ನೀಡಿದ್ದ ಜಿಯೋ ಇನ್ನು ಮುಂದೆ ಬೇರೆ ನೆಟ್ವರ್ಕ್ ಗೆ ಜಿಯೋ ಮುಖಾಂತರ ಕರೆ ಮಾಡಬೇಕಾದರೆ ನಿಮಗೆ ಶುಲ್ಕ ಬೀಳಲಿದೆ. ಹೌದು ಕಹಿಯಾದರೂ ಇದು ಸತ್ಯಸಂಗತಿ. ಈ ಬಗ್ಗೆ ನೋಟಿಫಿಕೇಶನ್ ನೀಡಿರುವ ಜಿಯೋ ತನ್ನ ಎಲ್ಲ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ತಿಳಿಸಿದೆ, ಹಾಗಿದ್ದರೆ ಏನಿದು ನಿಯಮ ತಿಳಿದುಕೊಳ್ಳೋಣ ಬನ್ನಿ.

ಇನ್ನು ಮುಂದೆ ನೀವು ರಿಲಯನ್ಸ್ ಜಿಯೋ ಹೊರತುಪಡಿಸಿ, ಇತರ ನೆಟ್‌ವರ್ಕ್‌ಗಳಾದ ಬಿಎಸ್‌ಎನ್‌ಎಲ್‌, ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ನಂಬರ್‌ಗಳಿಗೆ ಕರೆ ಮಾಡಿದರೆ, ಗ್ರಾಹಕರು ಅದಕ್ಕೆ ಶುಲ್ಕ ಪಾವತಿಸಬೇಕಿದೆ.ರಿಲಯನ್ಸ್‌ ಜಿಯೋ ಗ್ರಾಹಕರು ಇತರೆ ಕಂಪನಿಯ ಫೋನ್‌ ನೆಟ್‌ವರ್ಕ್‌ನ ನಂಬರ್‌ಗೆ ವಾಯ್ಸ್‌ ಕರೆ ಮಾಡಿದರೆ ಅದಕ್ಕೆ ಪ್ರತಿ ನಿಮಿಷಕ್ಕೆ 6 ಪೈಸೆ ತೆರಬೇಕಾಗುತ್ತದೆ. ಆದರೆ, ಅಷ್ಟೇ ಮೊತ್ತದ ಉಚಿತ ಡೇಟಾವನ್ನು ಗ್ರಾಹಕರಿಗೆ ನೀಡುವುದಾಗಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ಘೋಷಿಸಿದೆ. ಅಂದರೆ ಗ್ರಾಹಕರು ವಾಯ್ಸ್ ಕರೆಗಾಗಿ 10 ರೂ ವ್ಯಯಸಿದರೆ, ಅದಕ್ಕೆ ಪ್ರತಿಯಾಗಿ 1 GB ಡೇಟಾ ಉಚಿತವಾಗಿ ದೊರೆಯಲಿದೆ.


ದೇಶದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ನೂತನ ನಿಯಮದನ್ವಯ ಇಂಟರ್‌ಕನೆಕ್ಟ್ ಬಳಕೆಯ ಶುಲ್ಕಗಳನ್ನು(ಐಯುಸಿ) ಜಿಯೋ ದೇಶದಲ್ಲಿ ಜಾರಿಗೊಳಿಸುತ್ತಿದೆ. ಹೀಗಾಗಿ ಜಿಯೋ ಬಳಕೆದಾರರ ನಡುವಿನ ಕರೆಗಳಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ. ಅಲ್ಲದೇ ಲ್ಯಾಂಡ್‌ಲೈನ್‌ ಮತ್ತು ವಾಟ್ಸ್‌ಆ್ಯಪ್‌, ಫೇಸ್‌ಟೈಮ್‌ ಮತ್ತು ಇತರೆ ಮಾದರಿಯ ಇಂಟರ್‌ನೆಟ್ ಕರೆಗಳಿಗೂ ಈ ದರ ನಿಯಮ ಅನ್ವಯವಾಗುವುದಿಲ್ಲ. ಅದರ ಬದಲು, ವಾಯ್ಸ್ ಕರೆಯನ್ನು ಇತರೆ ನೆಟ್‌ವರ್ಕ್‌ನ ನಂಬರ್‌ಗೆ ಮಾಡಿದರೆ, ಅದಕ್ಕೆ ಶುಲ್ಕ ತೆರಬೇಕಾಗುತ್ತದೆ. ಆದರೆ ನೀವು ಜಿಯೋದಿಂದ ಜಿಯೋಗೆ ಎಷ್ಟು ಬೇಕಾದರೂ ಕರೆ ಮಾಡಿ ಮಾತಾಡಬಹುದು ಯಾವುದೇ ಸಮಸ್ಯೆ ಇಲ್ಲ.

Please follow and like us:
error0
http://karnatakatoday.in/wp-content/uploads/2019/10/JIO-CHARGING-CALLS-1024x576.pnghttp://karnatakatoday.in/wp-content/uploads/2019/10/JIO-CHARGING-CALLS-150x104.pngKarnataka Trendingಅಂಕಣಸದ್ಯಕ್ಕೆ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಇದುವರೆಗೂ ತಾನು ಕೊಟ್ಟ ಆಫ಼ರ್ ಗಳಿಂದ ಭರ್ಜರಿ ಹೆಸರು ಮಾಡಿ ಮಾರುಕಟ್ಟೆಯಲ್ಲಿ ಜನರ ವಿಶ್ವಾಸ ಹಾಗು ನಂಬಿಕೆಯನ್ನು ಉಳಿಸಿಕೊಂಡಿತ್ತು. ವೇಗದ 4G ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಅತಿ ಕಡಿಮೆ ದರ ವಿಧಿಸಿತ್ತು, ಅಷ್ಟೇ ಅಲ್ಲದೆ ಯಾವುದೇ ಕರೆ ಹಾಗೂ ಯಾವುದೇ ನೆಟ್ವರ್ಕ್ ಗಳಿಗೆ ಕಾಲ್ ಮಾಡಿದರೂ ಕೂಡ ಉಚಿತ ಸೇವೆ ಒದಗಿಸಿತ್ತು. ಇನ್ನು ಈ ಆಫ಼ರ್ ನೀಡಿದ ಕೆಲ...Film | Devotional | Cricket | Health | India