Jobs in KPTC

ಈಗಿನ ಕಾಲದಲ್ಲಿ ಉದ್ಯೋಫಾ ಸಿಗುವುದು ಎಷ್ಟು ಕಷ್ಟ ಎಂದು ನಿಮಗೆಲ್ಲ ಗೊತ್ತೇ ಇದೆ, ಈಗಿನ ಕಾಲದಲ್ಲಿ ಎಷ್ಟೇ ವಿದ್ಯಾಭ್ಯಾಸವನ್ನ ಮಾಡಿದರೆ ಕೆಲಸ ಸಿಗದೇ ಯುವಕರು ಅಲೆದಾಡುತ್ತಿರುವುದನ್ನ ನಾವು ದಿನಾಲೂ ನೋಡುತ್ತೇವೆ.

ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ಒಂದು ಒಳ್ಳೆಯ ಅವಕಾಶ ಇದಾಗಿದೆ, KPTC ಅಂದರೆ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಡಿಪ್ಲಮೋ SSLC, PUC ಆಗಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ನೀಡಿದೆ.

Jobs in KPTC

ಒಟ್ಟು 3548 ಹುದ್ದೆಗಳು ಖಾಲಿ ಇದೆ, ಇನ್ನು ಹುದ್ದೆಗಳಿಗೆ ವಿದ್ಯಾರ್ಹತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ. assistant executive ಇಂಜಿನಿಯರ್ ಎಲೆಕ್ಟ್ರಿಕಲ್ ವಿಬಾಗದಲ್ಲಿನ ಹುದ್ದೆಗಳಿಗೆ BE / BTECH ಅಥವಾ ಎಲೆಕ್ಟ್ರಿಕ್ಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಮುಗಿಸಿರಬೇಕು.

ನಂತರ ಅಸಿಸ್ಟೆಂಟ್ ಇಂಜಿನಿಯರ್ ವಿಭಾಗಕ್ಕೆ BE ಅಥವಾ BTECH ಪಾಸ್ ಆಗಿರಬೇಕು ಅಥವಾ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರೀನಿಕ್ಸ್ ಇಂಜೀನಿಯರ್ ಪಾಸ್ ಆಗಿರಬೇಕು, ನಂತರ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಡಿಪ್ಲಮೊ ಮುಗಿಸಿರಬೇಕು ಹಾಗೆ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ SSLC ಅಥವಾ PUC ಪಾಸ್ ಆಗಿರಬೇಕು.

Jobs in KPTC

ಇನ್ನು ನೀವು ಕರ್ನಾಟಕದಲ್ಲೆ ವಿದ್ಯಾಬ್ಯಾಸ ಮುಗಿಸಿರಬೇಕು, ಇನ್ನು ಜೂನಿಯರ್ ಅಸ್ಸಿಸ್ಟಂಟ್ಟ್ ಹುದ್ದೆಗಳಿಗೆ PUC ಪಾಸ್ ಆಗಿದ್ದರೆ ಸಾಕು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಜೆನರಲ್ ಮೆರಿಟ್ ಅಭ್ಯರ್ಥಿಗಳು 60 % ಆಗಿರಬೇಕು ಹಾಗೆ 2A, 2B, 3A, 3B ಅಭ್ಯರ್ಥಿಗಳಿಗೆ 50% ಅಂಕ ಶೇಕಡಾ ಕಡ್ಡಾಯ.

ಇನ್ನು SC / ST ಅಭ್ಯರ್ಥಿಗಳು ಜಸ್ಟ್ ಪಾಸ್ ಆದರೆ ಸಾಕು, ಇನ್ನು ವಯೋಮಿತಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೆ ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ 30 ಹಾಗೆ 2A 2B ಇತರೆ ಅಭ್ಯರ್ಥಿಗಳಿಗೆ 38 ವರ್ಷಗಳು ಹಾಗೆ SC / ST ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ಆಗಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮಾರ್ಚ್ 5 2019 ಹಾಗೆ ಕೊನೆಯ ದಿನಾಂಕ ಏಪ್ರಿಲ್ 4, 2019, ಹಾಗೆ ಹೆಚ್ಚಿನ ಮಾಹಿತಿಗೆ www.kptcl.com ಗೆ ಸಂಪರ್ಕಿಸಿ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರಿಗೂ ತಲುಪಿಸಿ.

Jobs in KPTC

Please follow and like us:
0
http://karnatakatoday.in/wp-content/uploads/2019/03/Jobs-in-KPTC-1-1024x576.jpghttp://karnatakatoday.in/wp-content/uploads/2019/03/Jobs-in-KPTC-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಈಗಿನ ಕಾಲದಲ್ಲಿ ಉದ್ಯೋಫಾ ಸಿಗುವುದು ಎಷ್ಟು ಕಷ್ಟ ಎಂದು ನಿಮಗೆಲ್ಲ ಗೊತ್ತೇ ಇದೆ, ಈಗಿನ ಕಾಲದಲ್ಲಿ ಎಷ್ಟೇ ವಿದ್ಯಾಭ್ಯಾಸವನ್ನ ಮಾಡಿದರೆ ಕೆಲಸ ಸಿಗದೇ ಯುವಕರು ಅಲೆದಾಡುತ್ತಿರುವುದನ್ನ ನಾವು ದಿನಾಲೂ ನೋಡುತ್ತೇವೆ. ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ಒಂದು ಒಳ್ಳೆಯ ಅವಕಾಶ ಇದಾಗಿದೆ, KPTC ಅಂದರೆ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಡಿಪ್ಲಮೋ SSLC, PUC ಆಗಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ನೀಡಿದೆ. ಒಟ್ಟು 3548 ಹುದ್ದೆಗಳು ಖಾಲಿ ಇದೆ, ಇನ್ನು ಹುದ್ದೆಗಳಿಗೆ ವಿದ್ಯಾರ್ಹತೆ...Kannada News