ಕನ್ನಡ ಕಿರುತೆರೆಯ ಲೋಕದಲ್ಲಿ ಹೊಸ ಮೈಲುಗಲ್ಲನ್ನೇ ಸೃಷ್ಟಿ ಮಾಡಿ ಸೀರಿಯಲ್ ಲೋಕದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ ಧಾರಾವಾಹಿ ಅಂದರೆ ಅದೂ ಜೊತೆ ಜೊತೆಯಲ್ಲಿ. ರಾತ್ರಿ ಆಯಿತು ಅಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಈ ಧಾರಾವಾಹಿಯನ್ನ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ, ಇನ್ನು ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ಕರ್ನಾಟಕದ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಯಾರು ಮಾಡದ ಸಾಧನೆಯನ್ನ ಮಾಡಿ ದೊಡ್ಡ ರೆಕಾರ್ಡ್ ಮಾಡಿದೆ ಈ ಜೊತೆ ಜೊತೆಯಲ್ಲಿ ಸೀರಿಯಲ್, ಇನ್ನು TRP ವಿಷಯದಲ್ಲಿ ಕೂಡ ಈ ಧಾರಾವಾಹಿ ದೊಡ್ಡ ಸಾಧನೆಯನ್ನ ಮಾಡಿದೆ, ಹೌದು TRP ಟಾಪ್ 5 ಪಟ್ಟಿಯಲ್ಲಿ ಜೊತೆ ಜೊತೆಯಲ್ಲಿ ಧಾರಾವಾಹಿ ಕಾಯಂ ಸದಸ್ಯ ಸ್ಥಾನವನ್ನ ಪಡೆದುಕೊಂಡು ದೊಡ್ಡ ದಾಖಲೆಯನ್ನ ಮಾಡಿದೆ.

ಇನ್ನು ಕನ್ನಡ ಸೀರಿಯಲ್ ಲೋಕದಲ್ಲಿ ಇದುವರೆಗೂ ಕಂಡಿರದ TRP ಪಡೆದಿರುವ ಈ ಸೀರಿಯಲ್ ನಲ್ಲಿ ಪ್ರಮುಖ ಬದಲಾವಣೆಗಳನ್ನ ತರಲಾಗುತ್ತಿದೆ. ಹಾಗಾದರೆ ಏನದು ಬದಲಾವಣೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸ್ನೇಹಿತರೆ ಜೊತೆ ಜೊತೆಯಲ್ಲಿ ಧಾರಾವಾಹಿಯ ಬಗ್ಗೆ ಮತ್ತು ಅದರಲ್ಲಿ ಇರುವ ಪಾತ್ರಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಜೊತೆ ಜೊತೆಯಲ್ಲಿ ಧಾರಾವಾಹಿ ಈಗ ಬಹಳ ಕೂತುಹಲ ಘಟ್ಟಕ್ಕೆ ಬಂದು ತಲುಪಿದ್ದು ಆರ್ಯವರ್ಧನ್ ಮತ್ತು ಅನು ಮದುವೆಯನ್ನ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Jote Joteyali Kannada Serial

ಒಬ್ಬರ ಮೇಲೆ ಒಬ್ಬರಿಗೆ ಮನಸ್ಸಾಗಿದೆ ಮತ್ತು ಅದೂ ಇಬ್ಬರಿಗೂ ಗೊತ್ತಾಗಿದೆ, ಆದರೆ ಅದನ್ನ ಹೇಗೆ ಹೇಳಿಕೊಳ್ಳುತ್ತಾರೆ ಅನ್ನುವುದು ಮುಂದಿರುವ ದೊಡ್ಡ ಕುತೂಹಲವಾಗಿದೆ, ದಿನದಿಂದ ದಿನಕ್ಕೆ ಬಹಳ ಕುತೂಹಲ ಮೂಡಿಸುತ್ತಿರುವ ಮತ್ತು ವೀಕ್ಷಕರ ಮನವನ್ನ ಗೆದ್ದಿರುವ ಈ ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಯನ್ನ ತರುವ ಸಾಧ್ಯತೆ ಜಾಸ್ತಿ ಇದೆ. ಜೊತೆ ಜೊತೆಯಲ್ಲಿ ಧಾರಾವಾಹಿ ಕರ್ನಾಟಕದಲ್ಲಿ ದೊಡ್ಡ ಪ್ರೇಕ್ಷಕ ವರ್ಗದವರನ್ನ ಹೊಂದಿದೆ ಮತ್ತು ಈ ಧಾರಾವಾಹಿಯನ್ನ ಅರ್ಧ ಘಂಟೆಯ ಬದಲು ಒಂದು ಘಂಟೆ ಪ್ರಸಾರ ಮಾಡಬೇಕು ಅನ್ನುವುದು ಪ್ರೇಕ್ಷಕರ ಒತ್ತಾಯವಾಗಿದೆ. ಇನ್ನು ಇದರ ಜೊತೆಗೆ ಧಾರಾವಾಹಿಯನ್ನ ಶನಿವಾರ ಮತ್ತು ಭಾನುವಾರ ಕೂಡ ಪ್ರಸಾರ ಮಾಡುವಂತೆ ಧಾರಾವಾಹಿ ತಂಡವರಿಗೆ ಪ್ರೇಕ್ಷಕರು ಒತ್ತಾಯವನ್ನ ಮಾಡುತ್ತಿದ್ದಾರೆ.

ಇನ್ನು ಪ್ರೇಕ್ಷಕರ ಒತ್ತಾಯ ಹೆಚ್ಚಾಗುತ್ತಿದ್ದಂತೆ ಶನಿವಾರ ಭಾನುವಾರ ಮತ್ತು ಧಾರಾವಾಹಿಯನ್ನ ಒಂದು ಘಂಟೆ ಪ್ರಸಾರ ಮಾಡುವ ಬಗ್ಗೆ ಜಿ ಕನ್ನಡ ಚಾನೆಲ್ ಪ್ಲ್ಯಾನ್ ಮಾಡುತ್ತಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಶನಿವಾರ ಮತ್ತು ಭಾನುವಾರ ರಿಯಾಲಿಟಿ ಶೋ ಗಳು ಇರುವ ಕಾರಣ ಸೀರಿಯಲ್ ಪ್ರಸಾರ ಮಾಡುವುದು ಸ್ವಲ್ಪ ಕಷ್ಟ ಆಗಬಹುದು, ಆದರೆ ಧಾರಾವಾಹಿಯನ್ನ ಒಂದು ಘಂಟೆ ಪ್ರಸಾರ ಮಾಡುವ ಸಾಧ್ಯತೆ ಜಾಸ್ತಿ ಇದೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ಜೊತೆ ಜೊತೆಯಲ್ಲಿ ಧಾರಾವಾಹಿಯನ್ನ ಶನಿವಾರ ಭಾನುವಾರ ಮತ್ತು ಒಂದು ಘಂಟೆ ಪ್ರಸಾರ ಮಾಡಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಧಾರಾವಾಹಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Jote Joteyali Kannada Serial

Please follow and like us:
error0
http://karnatakatoday.in/wp-content/uploads/2019/11/Jote-Joteyali-Kannada-Serial-1-1024x576.jpghttp://karnatakatoday.in/wp-content/uploads/2019/11/Jote-Joteyali-Kannada-Serial-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಕನ್ನಡ ಕಿರುತೆರೆಯ ಲೋಕದಲ್ಲಿ ಹೊಸ ಮೈಲುಗಲ್ಲನ್ನೇ ಸೃಷ್ಟಿ ಮಾಡಿ ಸೀರಿಯಲ್ ಲೋಕದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ ಧಾರಾವಾಹಿ ಅಂದರೆ ಅದೂ ಜೊತೆ ಜೊತೆಯಲ್ಲಿ. ರಾತ್ರಿ ಆಯಿತು ಅಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಈ ಧಾರಾವಾಹಿಯನ್ನ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ, ಇನ್ನು ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ಕರ್ನಾಟಕದ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಯಾರು ಮಾಡದ...Film | Devotional | Cricket | Health | India