ದೇಶಾದ್ಯಂತ ಈಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ತರದ ಬದಲಾವಣೆ ಮಾಡಲು ಮುಂದಾಗುತ್ತಿದೆ. ದೇಶದ ಡ್ರೈವಿಂಗ್ ಲೈಸನ್ಸ್ ಇನ್ನು ಕೂಡ ಹಳೆಯ ವಿನ್ಯಾಸ ಹೊಂದಿದ್ದು ಇದನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಕೇಂದ್ರ ಸರ್ಕಾರ ಇದೀಗ ಸಜ್ಜಾಗಿದೆ. ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲೂ ಕೂಡ ನೀವು ಒಂದೇ ರೀತಿಯ ಲೈಸನ್ಸ್ ನೋಡಬಹುದಾಗಿದೆ. ಅಂತಹ ಒಂದು ಕಾರ್ಯಕ್ಕೆ ಮುಂದಾಗಿದೆ ಸಾರಿಗೆ ಇಲಾಖೆ.  ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಈ ಪ್ರಮಾಣಪತ್ರಗಳ ನೋಟ, ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

ಸ್ಮಾರ್ಟ್‌ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್‌ ಕೋಡ್‌ಗಳನ್ನೂ ಹೊಂದಿರುತ್ತವೆ. ಅವುಗಳಲ್ಲಿ ಎನ್‌ಎಫ್‌ಸಿ (ನಿಯರ್ ಫೀಲ್ಡ್‌ ಕಮ್ಯುನಿಕೇಶನ್‌) ವೈಶಿಷ್ಟ್ಯವನ್ನೂ ಅಳವಡಿಸಲಾಗುತ್ತಿದ್ದು ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಟ್ರಾಫಿಕ್‌ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್‌ಹೆಲ್ಡ್‌ ಡಿವೈಸಸ್‌) ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದಾಗಿದೆ.

ನೂತನ ಡಿಎಲ್‌ನಲ್ಲಿ ಅಂಗಾಂಗ ದಾನ ಕುರಿತ ಚಾಲಕನ ಘೋಷಣೆ ಮತ್ತು ದೈಹಿಕ ವಿಕಲಚೇತನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ಉಲ್ಲೇಖಗಳು ಇರಲಿವೆ. ಮಾಲಿನ್ಯದ ಪ್ರಮಾಣ ಮತ್ತು ಇತರ ನಿಯಮಗಳನ್ನು ಆರ್‌ಸಿಯಲ್ಲಿ ಅಳವಡಿಸಲಾಗಿರುತ್ತದೆ.

ಇದರಿಂದ ಮಾಲಿನ್ಯ ಪರೀಕ್ಷೆಯ ವೇಳೆ ಅನುಕೂಲವಾಗುತ್ತದೆ. ಪ್ರಸ್ತುತ ಈ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ವಾಹನದ ಮಾಲೀಕರು ಮತ್ತು ಇತರ ವಿವರಗಳ ಬಗ್ಗೆ ಪ್ರಶ್ನಿಸಲಾಗುತ್ತದೆ’ ಎಂದು ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಸದ್ಯಕ್ಕೆ ಈಗ ಇರುವ ಲೈಸನ್ಸ್ ಮುಂದುವರಿಯಲಿದೆ ಇನ್ನು ಮುಂದೆ ಲೈಸನ್ಸ್ ಮಾಡುವವರಿಗೆ ಹೊಸ ರೀತಿಯ ಡಿಜಿಟಲ್ ಕಾರ್ಡ್ ಅನ್ವಯವಾಗಲಿದೆ. ಆದಷ್ಟು ಜನರಿಗೆ ಈ ಮಾಹಿತಿ ತಲುಪಿಸಿ.

 

Please follow and like us:
error0
http://karnatakatoday.in/wp-content/uploads/2019/01/driving-license-july-1024x576.jpghttp://karnatakatoday.in/wp-content/uploads/2019/01/driving-license-july-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುದೇಶಾದ್ಯಂತ ಈಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ತರದ ಬದಲಾವಣೆ ಮಾಡಲು ಮುಂದಾಗುತ್ತಿದೆ. ದೇಶದ ಡ್ರೈವಿಂಗ್ ಲೈಸನ್ಸ್ ಇನ್ನು ಕೂಡ ಹಳೆಯ ವಿನ್ಯಾಸ ಹೊಂದಿದ್ದು ಇದನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಕೇಂದ್ರ ಸರ್ಕಾರ ಇದೀಗ ಸಜ್ಜಾಗಿದೆ. ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲೂ ಕೂಡ ನೀವು ಒಂದೇ ರೀತಿಯ ಲೈಸನ್ಸ್ ನೋಡಬಹುದಾಗಿದೆ. ಅಂತಹ ಒಂದು ಕಾರ್ಯಕ್ಕೆ ಮುಂದಾಗಿದೆ ಸಾರಿಗೆ ಇಲಾಖೆ.  ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು...Film | Devotional | Cricket | Health | India