k m vishnuvardhan

ಯಾವುದೇ ಚಿತ್ರರಂಗದಲ್ಲಿ ತೆರೆಮುಂದೆ ಕಾಣುವ ಸ್ಟಾರ್ ನಟರಿಗಿರುವ ಬೆಲೆ ತೆರೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರಿಗೆ ಇಲ್ಲ, ಸ್ಟಾರ್ ನಟರು ತೆರೆ ಮೇಲೆ ಅಂದವಾಗಿ ಕಾಣಲು ಕಾರಣರಾಗಿದ್ದ ಕನ್ನಡದ ಖ್ಯಾತ ಛಾಯಾಗ್ರಾಹಕರೊಬ್ಬರು ನಿಧನರಾಗಿದ್ದಾರೆ.

ಹೌದು ಕನ್ನಡ ಚಿತ್ರರಂಗದ ಬ್ಯಾಡ ಟೈಮ್ ಮುಂದುವರೆದಿದೆ, ಕನ್ನಡ ಚಿತ್ರರಂಗದ ಖ್ಯಾತ ಛಾಯಾ ಚಿತ್ರ ಗ್ರಹಣ ಕೆ ಎಂ ವಿಷ್ಣುವರ್ಧನ್ ಅವರು ವಿಧಿವಶರಾಗಿದ್ದಾರೆ.

ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಿ ಕ್ಯಾಮೆರಾ ನಿರ್ದೇಶಕ ಇನ್ನಿಲ್ಲ ಎನ್ನುವ ಸುದ್ದಿ ಕನ್ನಡ ಚಿತ್ರರಂಗಕ್ಕೆ ಆಘಾತವನ್ನ ಉಂಟುಮಾಡಿದೆ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಛಾಯಾ ಚಿತ್ರ ಗ್ರಾಹಕ ಕೆ ಎಂ ವಿಷ್ಣುವರ್ಧನ್ ಅವರು ನಿನ್ನೆ ಎಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ, ಇವರ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪವನ್ನ ಸೂಚಿಸಿದೆ.

k m vishnuvardhan

ಇನ್ನೇ ಚಂದನವನಕ್ಕೆ ಕರಾಳ ದಿನ ಅಂತ ಹೇಳಿದರು ತಪ್ಪಾಗಲ್ಲ ಯಾಕೆ ಅಂದರೆ ಛಾಯಾ ಗ್ರಾಹಕ ಕೆಮ್ ಎಂ ವಿಷ್ಣುವರ್ಧನ್ ಅವರು ನಿಧನವನ್ನ ಅರಗಿಸಿಕೊಳ್ಳುವುದರಲ್ಲಿ ಮತ್ತೊಬ್ಬ ಛಾಯಾ ಗ್ರಾಹಕ ಹಾಗು ಪ್ರೊಡಕ್ಷನ್ ಮ್ಯಾನೇಜರ್ ನಿಧನರಾಗಿದ್ದಾರೆ.

ಸಾಕಷ್ಟು ಕನ್ನಡ ಚಿತ್ರಗಳಿಗೆ ಛಾಯಾ ಗ್ರಾಹಕರಾಗಿದ್ದ ಹಿರಿಯ ಛಾಯಾ ಗ್ರಾಹಕ ಕುಮಾರ್ ಚಕ್ರವರ್ತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ, ಇಷ್ಟೇ ಅಲ್ಲದೆ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಪಾಪಣ್ಣ ಅವರು ಕೂಡ ನಿಧನರಾಗಿದ್ದಾರೆ.

k m vishnuvardhan

ಕೆ ಎಂ ವಿಷುವರ್ಶನ್ ಅವರು ಸುದೀಪ್ ಅವರ ಹುಬ್ಬಳಿ, ದರ್ಶನ ಅವರ ಯೋಧ ಮತ್ತು ಯಶ್ ಅಭಿನಯದ ರಾಜ ಹುಲಿ ಸೇರಿದಂತೆ ಕನ್ನಡದ ಕಿರಣ್ ಬೇಡಿ ಸ್ನೇಹಾಂಜಲಿ, ನೀನ್ಯಾರೆ, ನಾರಿಯ ಸೀರೆ ಕದ್ದ, ಗನ್, ಪಂಗನಾಮ, ಹರ ನಂತಹ ಚಿತ್ರಗಳಲ್ಲಿ ಛಾಯಾ ಗ್ರಾಹಕರಾಗಿ ಕೆಲಸ ಮಾಡಿದ್ದರು.

ತುಮಕೂರಿನ ಕೆ ಎಂ ವಿಷ್ಣುವರ್ಧನ್ ಅವರು ಬೆಂಗಳೂರಿನ ತಮ್ಮ ಸ್ವಂತ ಮನೆಯಲ್ಲಿ ಕೊನೆಯುಸಿರನ್ನ ಎಳೆದಿದ್ದಾರೆ, ಏನೇ ಆಗಲಿ ನಮ್ಮ ನಟರನ್ನ ತೆರೆಯ ಮುಂದೆ ಚನ್ನಾಗಿ ಕಾಣುವಲ್ಲಿ ಉತ್ತಮ ಪಾತ್ರ ವಹಿಸಿದ್ದ ಇವರ ಆತ್ಮಕೆ ಶಾಂತಿ ಸಿಗಲಿ ಎಂದು ನಾವು ಆಶಿಸೋಣ.

k m vishnuvardhan

Please follow and like us:
0
http://karnatakatoday.in/wp-content/uploads/2018/10/KANNADA-ACTORS-1024x576.jpghttp://karnatakatoday.in/wp-content/uploads/2018/10/KANNADA-ACTORS-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾವುದೇ ಚಿತ್ರರಂಗದಲ್ಲಿ ತೆರೆಮುಂದೆ ಕಾಣುವ ಸ್ಟಾರ್ ನಟರಿಗಿರುವ ಬೆಲೆ ತೆರೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರಿಗೆ ಇಲ್ಲ, ಸ್ಟಾರ್ ನಟರು ತೆರೆ ಮೇಲೆ ಅಂದವಾಗಿ ಕಾಣಲು ಕಾರಣರಾಗಿದ್ದ ಕನ್ನಡದ ಖ್ಯಾತ ಛಾಯಾಗ್ರಾಹಕರೊಬ್ಬರು ನಿಧನರಾಗಿದ್ದಾರೆ. ಹೌದು ಕನ್ನಡ ಚಿತ್ರರಂಗದ ಬ್ಯಾಡ ಟೈಮ್ ಮುಂದುವರೆದಿದೆ, ಕನ್ನಡ ಚಿತ್ರರಂಗದ ಖ್ಯಾತ ಛಾಯಾ ಚಿತ್ರ ಗ್ರಹಣ ಕೆ ಎಂ ವಿಷ್ಣುವರ್ಧನ್ ಅವರು ವಿಧಿವಶರಾಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಿ ಕ್ಯಾಮೆರಾ ನಿರ್ದೇಶಕ ಇನ್ನಿಲ್ಲ...Kannada News