ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ಮೊಹಮ್ಮದ್‌ ಕೈಫ್‌ ಅವರು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಮೊಹಮ್ಮದ್ ಕೈಫ್ ಅವರು​ ಭಾರತ ತಂಡಕ್ಕಾಗಿ ಆಡಿ 12 ವರ್ಷಗಳಾಗಿದ್ದು, ಈಗ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್‌ ಬೈ ಹೇಳಿದ್ದಾರೆ. ಮೊಹಮ್ಮದ್ ಕೈಫ್‌ ಅವರು ಇದುವರೆಗೆ 13 ಟೆಸ್ಟ್‌ ಮತ್ತು 125 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2002 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ನಾಟ್ ವೆಸ್ಟ್‌ ಟ್ರೋಫಿಯ ಅಂತಾರಾಷ್ಟ್ರೀಯ ಏಕದಿನ ಫೈನಲ್‌ ಪಂದ್ಯದಲ್ಲಿ 87 ರನ್ ಗಳನ್ನು ಸಿಡಿಸುವ ಮೂಲಕ ಕೈಫ್ ಟೀಂ ಇಂಡಿಯಾಗೆ ಗೆಲುವು ತಂದು ಕೊಟ್ಟಿದ್ದರು.

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ನ್ಯಾಟ್‍ವೆಸ್ಟ್ ಕ್ರಿಕೆಟ್ ಸರಣಿ ಜಯಸಿದ 12 ವರ್ಷಗಳ ಬಳಿಕ ಮಹಮ್ಮದ್ ಕೈಫ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. 37 ವರ್ಷದ ಕೈಫ್ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನು ಆಡಿದ್ದು, ಲಾರ್ಡ್ಸ ಅಂಗಳದಲ್ಲಿ 2002 ಜುಲೈ 13 ರಂದು ನಡೆದಿದ್ದ ನ್ಯಾಟ್‍ವೆಸ್ಟ್ ಫೈನಲ್ ಪಂದ್ಯದಲ್ಲಿ ಅಜೇಯ 87 ರನ್ ಸಿಡಿಸಿ ಟೀಂ ಇಂಡಿಯಾ ಐತಿಹಾಸಿಕ ಜಯಗಳಿಸಲು ಕಾರಣರಾಗಿದ್ದರು.

 

 

ಟೀಂ ಇಂಡಿಯಾ ಕಂಡ ಅತ್ಯುತ್ತಮ ಫೀಲ್ಡರ್ ಮಹಮ್ಮದ್ ಕೈಫ್ ಆಗಿದ್ದು, 5 ವರ್ಷಗಳ ಕಾಲ ನಿರಂತರವಾಗಿ ಟೀಂ ಇಂಡಿಯಾ ಭಾಗವಾಗಿದ್ದ ಕೈಫ್ ಮೈದಾನದ 30 ಯಾರ್ಡ್ ಸರ್ಕಲ್ ನಲ್ಲಿ ಆಟಗಾರರು ರನ್ ಕದಿಯಲು ಭಯಪಡುವಂತೆ ಕ್ಷೇತ್ರ ರಕ್ಷಣೆ ಮಾಡುತ್ತಿದ್ದರು. 2006 ರಲ್ಲಿ ಕೈಫ್ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

‘ಇಂದು ನಾನು ಎಲ್ಲಾ ಮಾದರಿಯ ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಕೈಫ್ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ ಮತ್ತು ಕಾರ್ಯದರ್ಶಿ ಅಮಿತಾಬ್‌ ಚೌದರಿ ಅವರಿಗೆ ಇಮೇಲ್‌ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ ಪಂದ್ಯದ ಫೈನಲ್ ವರೆಗೂ ಪ್ರವೇಶಿಸಿದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿ ಯುವರಾಜ್‌ ಸಿಂಗ್‌ ಅವರೊಂದಿಗೆ ಮೊಹಮ್ಮದ್‌ ಕೈಫ್‌ ಗುರುತಿಸಿಕೊಂಡಿದ್ದರು. 2000ರ ಅಂಡರ್-19 ತ೦ಡದ ನಾಯಕನಾಗಿ ವಿಶ್ವ ಕಪ್‌ನಲ್ಲಿ ಗೆಲುವು ಸಾಧಿಸಿದ ನಂತರ ಕೈಫ್‌ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.

Please follow and like us:
0
http://karnatakatoday.in/wp-content/uploads/2018/07/criket-kaif-1024x576.pnghttp://karnatakatoday.in/wp-content/uploads/2018/07/criket-kaif-150x150.pngKarnataka Today's Newsಅಂಕಣಎನ್‌ಆರ್‌ಐಕ್ರಿಕೆಟ್ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ಮೊಹಮ್ಮದ್‌ ಕೈಫ್‌ ಅವರು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಮೊಹಮ್ಮದ್ ಕೈಫ್ ಅವರು​ ಭಾರತ ತಂಡಕ್ಕಾಗಿ ಆಡಿ 12 ವರ್ಷಗಳಾಗಿದ್ದು, ಈಗ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್‌ ಬೈ ಹೇಳಿದ್ದಾರೆ. ಮೊಹಮ್ಮದ್ ಕೈಫ್‌ ಅವರು ಇದುವರೆಗೆ 13 ಟೆಸ್ಟ್‌ ಮತ್ತು 125 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2002 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ನಾಟ್...Kannada News