Kannada Ranam movie

ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ನಟ ಚೇತನ್ ಅಭಿನಯ ಮಾಡುತ್ತಿರುವ ‘ರಣಂ’ ಚಿತ್ರೀಕರಣದ ಶೂಟಿಂಗ್ ಸಮಯದಲ್ಲಿ ದೊಡ್ಡ ಧುರಂತವೊಂದು ನಡೆದು ಹೋಗಿದೆ ಮತ್ತು ಈ ದುರಂತದಲ್ಲಿ ಇಬ್ಬರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ.

ಹಾಗಾದರೆ ನಡೆದ ದುರಂತ ಏನು ಮತ್ತು ಈ ದುರಂತ ನಡೆಯಲು ಕಾರಣ ಏನು ಏನು ಮತ್ತು ಸಾವನ್ನಪ್ಪಿದ ಇಬ್ಬರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kannada Ranam movie

ಇನ್ನು ಇಬ್ಬರು ಕನ್ನಡ ಖ್ಯಾತ ನಟರು ಆಗಿರುವ ಚಿರಂಜೀವಿ ಸರ್ಜಾ ಮತ್ತು ಚೇತನ್ ಅವರ ರಣಂ ಚಿತ್ರದ ಶೂಟಿಂಗ್ ಬೆಂಗಳೂರಿನ ಬಾಗಲೂರು ನಿರ್ಜನ ಪ್ರದೇಶದಲ್ಲಿ ನಡೆಯುತ್ತಿತ್ತು.

ಸಾಹಸದ ದೃಶ್ಯಗಳನ್ನ ಶೂಟ್ ಮಾಡುತ್ತಿದ್ದ ಕಾರಣ ಬೆಂಕಿಯ ದೃಶ್ಯಕ್ಕೆ ಗ್ಯಾಸ್ ಸಿಲಿಂಡರ್ ನ್ನ ಬಳಕೆ ಮಾಡಲಾಗಿತ್ತು, ಇನ್ನು ಈ ಸಾಹಸ ದೃಶ್ಯವನ್ನ ನೋಡಲು ಆ ಪ್ರದೇಶದ ಸ್ಥಳೀಯ ಜನರು ಕೂಡ ಬಂದಿದ್ದರು.

ಇನ್ನು ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಒಬ್ಬ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಕಾರ್ ನಲ್ಲಿ ಅದೇ ದಾರಿಯಲ್ಲಿ ಸಾಗಿ ಹೋಗುತ್ತಿದ್ದರು, ಇನ್ನು ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿದ ಅವರು ಕಾರ್ ನಿಲ್ಲಿಸಿ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದಾರೆ.

Kannada Ranam movie

ಗಂಡ ಕಾರ್ ಪಾರ್ಕ್ ಮಾಡಿ ಬರುತ್ತೇನೆ ಎಂದು ಹೇಳಿದ ಕಾರಣ ಹೆಂಡತಿ ತನ್ನ ಇಬ್ಬರು ಮಕ್ಕಳ ಜೊತೆ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದಾಳೆ, ಈ ಸಮಯದಲ್ಲಿ ಚಿತ್ರೀಕರಣಕ್ಕೆ ಬಳಸಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಹಿಳೆ ಹಾಗು ಆಕೆಯ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಪೋಟದ ತೀವ್ರತೆಗೆ ಮಹಿಳೆ ಮತ್ತು ಆಕೆಯ ಒಂದು ಮಗಳ ದೇಹಗಳು ಛಿದ್ರ ಛಿದ್ರ ಆಗಿದೆ ಮತ್ತು ಇನ್ನೊಂದು ಮಗಳಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶೂಟಿಂಗ್ ನೋಡಬೇಕು ಅನ್ನುವ ಆಸೆ ಮಹಿಳೆ ಮತ್ತು ಆಕೆಯ ಮಗಳ ಪ್ರಣವನ್ನ ಬಲಿ ತೆಗೆದುಕೊಂಡಿದೆ, ಸಾವು ಹೇಗೆ ಬರುತ್ತದೆ ಎಂದು ಯಾರು ಬಲ್ಲರು ಹೇಳಿ, ಮಹಿಳೆ ಮತ್ತು ಆಕೆಯ ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Kannada Ranam movie

Please follow and like us:
error0
http://karnatakatoday.in/wp-content/uploads/2019/03/Kannada-Ranam-movie-1-1024x576.jpghttp://karnatakatoday.in/wp-content/uploads/2019/03/Kannada-Ranam-movie-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಚಿರಂಜೀವಿ ಸರ್ಜಾ ಮತ್ತು ಆ ದಿನಗಳು ನಟ ಚೇತನ್ ಅಭಿನಯ ಮಾಡುತ್ತಿರುವ 'ರಣಂ' ಚಿತ್ರೀಕರಣದ ಶೂಟಿಂಗ್ ಸಮಯದಲ್ಲಿ ದೊಡ್ಡ ಧುರಂತವೊಂದು ನಡೆದು ಹೋಗಿದೆ ಮತ್ತು ಈ ದುರಂತದಲ್ಲಿ ಇಬ್ಬರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಹಾಗಾದರೆ ನಡೆದ ದುರಂತ ಏನು ಮತ್ತು ಈ ದುರಂತ ನಡೆಯಲು ಕಾರಣ ಏನು ಏನು ಮತ್ತು ಸಾವನ್ನಪ್ಪಿದ ಇಬ್ಬರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು...Film | Devotional | Cricket | Health | India