ಹಿಂದಿಯ ಸ್ಟ್ಯಾಂಡಪ್ ಕಾಮಿಡಿಯನ್ ಹಾಗು ನಟ ನಟ ಶರ್ಮಾ ನಡೆಸಿಕೊಡುವ ಟಿವಿ ಷೋ  ಕಾಮಿಡಿ ನೈಟ್ಸ್ ವಿಥ್ ಕಪಿಲ್ ಅಥವಾ ಈ ಕಪಿಲ್ ಶರ್ಮಾ ಷೋ ಕಿರುತರೆಯ್ತಲ್ಲೇ ಅತಿ ಪ್ರಸಿದ್ದಿ ಪಡೆದ ಅತಿದೊಡ್ಡ ಹಾಸ್ಯ ಕಾರ್ಯಕ್ರಮವಾಗಿದ್ದು, ಇದರಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಹೋಗಲು ಬಯಸುತ್ತಾರೆ. ಹೆಚ್ಚಿನ ಜನರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಈ ಷೋ ನಲ್ಲಿ ಬಂದು ಅಭಿಮಾನಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ, ಈ ಕಾರ್ಯಕ್ರಮದಲ್ಲಿ ಮೋಜು, ಮಸ್ತಿ ಹರಟೆ ಎಲ್ಲವು ಇರುತ್ತದೆ ಹಾಗೆಯೆ ನಟರು ತಮ್ಮ ಜೀವನದ ಹಾಸ್ಯ ಸನ್ನಿವೇಶ ಹಾಗು ತಮ್ಮ ಮುಂದಿನ ಚಿತ್ರ ಹಾಗೆ ಇತರ ಅನುಭವವನ್ನು ಹಂಚಿಕೊಳ್ಳುತ್ತಾರೆ. ಸಿನಿಮಾ  ನಟರು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಡಿದ ವ್ಯಕ್ತಿಗಳು ಕೂಡ ಬರುತ್ತಾರೆ, ಒಟ್ಟಾರೆ ಭರಪೂರ ಮನರಂಜನೆಯ ಷೋ ಇದಾಗಿದೆ.

ಈಗಾಗಲೇ ಭಾರತೀಯ ಚಲನಚಿತ್ರದ ಅದೆಷ್ಟೋ ಅದ್ಬುತ ನಟರು ಕೂಡ ಈ ಷೋ ನಲ್ಲಿ ಕಾಣಿಸಿಕೊಂಡಿದ್ದಾರೆ, ಕನ್ನಡದ ಖ್ಯಾತ ನಟ ಸುದೀಪ್ ಕೂಡ ಈ ಶೋನಲ್ಲಿ ಕಾಣಿಸಿಕೊಂಡಿದ್ದರು, ಆದರೆ ಕಾರ್ಯಕ್ರಮಕ್ಕೆ ಹೋಗಲು ಕಪಿಲ್ ಅವರ ಆಹ್ವಾನವನ್ನು ತಿರಸ್ಕರಿಸಿದ ಅನೇಕ ಪ್ರಸಿದ್ಧ ವ್ಯಕ್ತಿಗಳು ಇದ್ದಾರೆ ಮತ್ತು ಈ ಸೆಲೆಬ್ರಿಟಿಗಳು ಈ ಷೋ ಗೆ ಒಮ್ಮೆಯಾದರೂ ಬರಬೇಕೆಂದು ವೀಕ್ಷಕರು ಬಯಸುತ್ತಾರೆ. ಇಂದು ನಾವು ಅವರ ಬಗ್ಗೆ ತಿಳಿಸಲಿದ್ದೇವೆ ಕ್ರಿಕೆಟ್ ಜಗತ್ತಿನ ಗ್ರೇಟ್ ಫಿನಿಶರ್, ಭಾರತ ತಂಡ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಇದುವರೆಗೂ ಕಪಿಲ್ ಶರ್ಮಾ ಷೋ ನಲ್ಲಿ ಕಾಣಿಸಿಕೊಂಡಿಲ್ಲ. ಈ ಪ್ರದರ್ಶನಕ್ಕೆ ಬರಲು ಅವರನ್ನು ಹಲವು ಬಾರಿ ಆಹ್ವಾನಿಸಲಾಗಿದೆ ಆದರೆ ಅವರು ಪ್ರತಿ ಬಾರಿಯೂ ನಿರಾಕರಿಸಿದರು ಎನ್ನಲಾಗಿದೆ ಇದಕ್ಕೆ ಕರಣ ಮಾತ್ರ ತಿಳಿದಿಲ್ಲ.

Kapil show

ಧೋನಿ ಆ ಸಂದರ್ಭದಲ್ಲಿ ಕ್ರಿಕೆಟ್ ಹಾಗು ಆರ್ಮಿ ಹೀಗೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ತಮ್ಮ ಬಿಡುವಿನ ಸಮಯ ಕಳೆಯುತ್ತಾರೆ ಹೀಗಾಗಿ ಅವರು ಭಾಗವಹಿಸಿಲ್ಲ ಎನ್ನಬಹುದು, ಹೀಗಾಗಿ ಈ ಷೋ ನಲ್ಲಿ ಅವರನ್ನು ಕಾಣುವುದು ಹಲವರ ಕನಸು. ದಕ್ಷಿಣ ಚಲನಚಿತ್ರೋದ್ಯಮದಲ್ಲಿ ದೇವರಂತೆ ಪರಿಗಣಿಸಲ್ಪಟ್ಟ ರಜನಿಕಾಂತ್ ಅವರನ್ನು ಈ ಪ್ರದರ್ಶನಕ್ಕೆ ಹಲವಾರು ಬಾರಿ ಆಹ್ವಾನಿಸಲಾಯಿತು ಆದರೆ ಅವರು ಪ್ರತಿ ಬಾರಿಯೂ ಸಮಯ ಕೊಡಲು ಸಾಧ್ಯವಾಗಲಿಲ್ಲ . ಭಾರತದ ಬಹುಕೋಟಿ ಜನರು ಅವರನ್ನು ಒಮ್ಮೆ ಈ ಪ್ರದರ್ಶನದಲ್ಲಿ ನೋಡಲು ಬಯಸುತ್ತಾರೆ, ಇದರಿಂದ ಅವರು ಅವರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು.

ಕಪಿಲ್ ಶರ್ಮಾ ಅವರು ಭಾರತದ ಅತ್ಯಂತ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಈ ಕಾರ್ಯಕ್ರಮಕ್ಕೆ ಬರಲು ಹಲವಾರು ಬಾರಿ ಆಹ್ವಾನಿಸಿದ್ದರು, ಇವರು ಕೂಡ ಷೋ ನಲ್ಲಿ ಕಾಣಿಸಿಕೊಂಡಿಲ್ಲ ಇನ್ನು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಎಂದಿಗೂ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡುವುದಿಲ್ಲ, ಈ ಕಾರ್ಯಕ್ರಮಕ್ಕೆ ಬರಲು ಅವರಿಗೆ ಅನೇಕ ಆಹ್ವಾನಗಳು ಬಂದವು ಆದರೆ ಎಂದೂ ಕೂಡ ಅವರು ಪಾಲ್ಗೊಂಡಿಲ್ಲ. ಈ ಶೋನಲ್ಲಿ ಕ್ರಿಕೆಟ್ ನ ದಂತಕತೆ, ಗಾಡ್ ಆಫ್ ಕ್ರಿಕೆಟ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರನ್ನು ನೋಡಲು ಎಲ್ಲರೂ ಬಯಸುತ್ತಾರೆ, ಆದರೆ ಇಲ್ಲಿಗೆ ಬರುವ ಆಹ್ವಾನವನ್ನು ಅವರು ಎಂದಿಗೂ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಸೆಲೆಬ್ರಿಟಿಗಳನ್ನು ಒಂದಲ್ಲ ಒಂದು ದಿನ ಈ ಪ್ರಸಿದ್ಧ ಷೋ ನಲ್ಲಿ ನೋಡಲು ಎಲ್ಲರು ಕಾತುರದಿಂದ ಕಾಯುತ್ತಿವುದು ಅಕ್ಷರಶಃ ಸತ್ಯವಾಗಿದೆ.

Kapil show

 

 

Please follow and like us:
error0
http://karnatakatoday.in/wp-content/uploads/2020/01/kapil-sharma-show-1024x576.jpghttp://karnatakatoday.in/wp-content/uploads/2020/01/kapil-sharma-show-150x104.jpgKarnataka Trendingಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಹಿಂದಿಯ ಸ್ಟ್ಯಾಂಡಪ್ ಕಾಮಿಡಿಯನ್ ಹಾಗು ನಟ ನಟ ಶರ್ಮಾ ನಡೆಸಿಕೊಡುವ ಟಿವಿ ಷೋ  ಕಾಮಿಡಿ ನೈಟ್ಸ್ ವಿಥ್ ಕಪಿಲ್ ಅಥವಾ ಈ ಕಪಿಲ್ ಶರ್ಮಾ ಷೋ ಕಿರುತರೆಯ್ತಲ್ಲೇ ಅತಿ ಪ್ರಸಿದ್ದಿ ಪಡೆದ ಅತಿದೊಡ್ಡ ಹಾಸ್ಯ ಕಾರ್ಯಕ್ರಮವಾಗಿದ್ದು, ಇದರಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಹೋಗಲು ಬಯಸುತ್ತಾರೆ. ಹೆಚ್ಚಿನ ಜನರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಈ ಷೋ ನಲ್ಲಿ ಬಂದು ಅಭಿಮಾನಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ, ಈ ಕಾರ್ಯಕ್ರಮದಲ್ಲಿ ಮೋಜು, ಮಸ್ತಿ ಹರಟೆ ಎಲ್ಲವು ಇರುತ್ತದೆ...Film | Devotional | Cricket | Health | India