ಓಂ ನಮಃ ಶಿವಾಯ ನಾಳೆ ಆಗಸ್ಟ್ 11 ಶಿವ ಭಕ್ತರ ಪಾಲಿನ ಮಹತ್ವದ ದಿನ ಈ ದಿನವನ್ನು ಶ್ರಾವಣ ಮಾಸದ ಶಿವರಾತ್ರಿ ಎಂದೇ ಹೇಳಲಾಗುತ್ತದೆ. ಶ್ರಾವಣದ ದಿನಗಳಲ್ಲಿ ಶಿವನನ್ನು ಮೆಚ್ಚಿಸಿಕೊಂಡರೆ ಅದು ಬಹಳಷ್ಟು ಒಳ್ಳೆಯ ಫಲ ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಶಿವನ ಬಗ್ಗೆ ಹೇಳಬೇಕೆಂದರೆ ದೈವ ಸಂಕುಲದಲ್ಲೇ ಅತಿ ಬೇಗನೆ ಒಲಿಯುವ ದೇವರೆಂದರೆ ಅದು ಪರಮ ಶಿವ ಮಾತ್ರ , ಪುರಾಣಗಳಲ್ಲಿ ಶಿವನನ್ನು ಮೆಚ್ಚಿಸಿಕೊಳ್ಳಲು ಅದೆಷ್ಟೋ ಮುನಿಗಳು, ಅಸುರರು ತಪಸ್ಸನ್ನು ಮಾಡಿ ಆತನಿಂದ ವಾರ ಪಡೆದುಕೊಂಡದ್ದನ್ನು ನಾವು ಅರಿತಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದಿನ ಈ ಸೂರ್ಯಾಸ್ತ ಮುಗಿದ ಬಳಿಕ ಈ ಕೆಲ ರಾಶಿಗಳಿಗೆ ಪರಮಶಿವನ ಅನುಗ್ರಹ ವಾಗಲಿದೆ ಅಲ್ಲದೆ ಆತನನ್ನು ಒಲಿಸಿಕೊಳ್ಳಲು ನಾಳೆಯ ದಿನ ಉತ್ತಮವಾದದ್ದು. ಹಾಗಿದ್ದರೆ ಫಲಾಫಲ ಪಡೆಯುವ ಆ ರಾಶಿಗಳು ಯಾವುವು ನೋಡೋಣ ಬನ್ನಿ, ಮೊದಲಿಗೆ ಮೇಷ ರಾಶಿ, ಮೇಷ ರಾಶಿಯವರಿಗೆ ಭೋಲೇನಾಥನ ವಿಶೇಷ ಕ್ರಪೆ ಇರುತ್ತದೆ ಆದ್ದರಿಂದ ನಾಳೆಯ ದಿನ ಇವರು ಬೆಳಿಗ್ಗೆ ಸ್ನಾನದ ನಂತರ ಶಿವಸ್ಮರಣೆಯೊಂದಿಗೆ ಆರಂಭಿಸಿ ಮತ್ತು ಹತ್ತಿರದ ದೇಗುಲಕ್ಕೆ ಭೇಟಿ ನೀಡಿ.

ಈ ರಾಶಿಗಳಿಗೆ ಜೀವನದ ಎಲ್ಲ ಹಂತದಲ್ಲಿ ಶಿವನ ಆಸರೆ ಸಿಗಲಿದೆ. ವೃಷಭ ರಾಶಿಯವರಿಗೆ ನಾಳೆ ಯಾವುದೇ ಕಾರ್ಯಾರಂಭ ಮಾಡಲು ಸೂಕ್ತ ದಿನ ಮಾತ ಪಿತರ ಆಶೀರ್ವಾದ ನಿಮಗೆ ಸಿಗಲಿದೆ ಅಲ್ಲದೆ ನಿಂತ ಕಾರ್ಯಗಳು ಸಾಗಲಿವೆ. ನಾಳೆ ಶಿವನನ್ನು ನೆನೆದು ಪೂಜಿಸಿ. ಕರ್ಕ ರಾಶಿಯವರಿಗೆ ಕೆಲಸಗಳಲ್ಲಿ ಸಫಲತೆ ಸಿಗಲಿದೆ ನಿಮ್ಮ ಪ್ರತಿಯೊಂದು ಪ್ರಯತ್ನಕ್ಕೂ ಶಿವನ ದಿವ್ಯದ್ರಷ್ಠಿ ಇದ್ದೆ ಇರಲಿದೆ. ನೀವು ಯಾವುದೇ ವಾದ ವಿವಾದಗಳಿಂದ ದೂರವಿರಿ ಇದು ನಿಮಗೆ ಒಳೆಯದಲ್ಲ.

ಕನ್ಯಾ ರಾಶಿಯವರಿಗೆ ಪ್ರವಾಸದ ಭಾಗ್ಯವಿದೆ ಈ ಪ್ರವಾಸ ನಿಮಗೆ ಲಾಭ ತರಲಿದೆ, ಕೆಲಸದ ಪ್ರಸ್ತಾವನೆ ಕೂಡ ಬರಲಿದೆ. ಕುಂಭ ರಾಶಿಯವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲವಿದೆ, ನೀವು ನೀಡಿದ ಹಣ ವಾಪಸು ಬರಲಿದೆ, ಬಹಳಷ್ಟು ದಿನಗಳಿಂದ ನಿಂತಿದ್ದ ಕಾರ್ಯಗಳು ಪುನರ್ ಆರಂಭಗೊಳ್ಳಲಿದೆ. ಮನಸ್ಸಿನ ಇಚ್ಛೆಗಳು ನೆರವೇರುತ್ತದೆ. ಈ ಮೇಲೆ ತಿಳಿಸಿದ ರಾಶಿಗಳು ನಾಳೆ ವಿಶೇಷವಾಗಿ ಶಿವನ ಧ್ಯಾನ ಮಾಡಿ. ಇನ್ನು ಇಳಿದ ರಾಶಿಗಳು ಶಿವಾಲಯಕ್ಕೆ ತೆರಳಿ ಭಕ್ತಿಯಿಂದ ಭಜಿಸಿ. ಸಮಯವಿದ್ದರೆ ಓಂ ನಮ ಶಿವಾಯ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/karkataka-amavasya-1024x576.pnghttp://karnatakatoday.in/wp-content/uploads/2018/08/karkataka-amavasya-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಓಂ ನಮಃ ಶಿವಾಯ ನಾಳೆ ಆಗಸ್ಟ್ 11 ಶಿವ ಭಕ್ತರ ಪಾಲಿನ ಮಹತ್ವದ ದಿನ ಈ ದಿನವನ್ನು ಶ್ರಾವಣ ಮಾಸದ ಶಿವರಾತ್ರಿ ಎಂದೇ ಹೇಳಲಾಗುತ್ತದೆ. ಶ್ರಾವಣದ ದಿನಗಳಲ್ಲಿ ಶಿವನನ್ನು ಮೆಚ್ಚಿಸಿಕೊಂಡರೆ ಅದು ಬಹಳಷ್ಟು ಒಳ್ಳೆಯ ಫಲ ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಶಿವನ ಬಗ್ಗೆ ಹೇಳಬೇಕೆಂದರೆ ದೈವ ಸಂಕುಲದಲ್ಲೇ ಅತಿ ಬೇಗನೆ ಒಲಿಯುವ ದೇವರೆಂದರೆ ಅದು ಪರಮ ಶಿವ ಮಾತ್ರ , ಪುರಾಣಗಳಲ್ಲಿ ಶಿವನನ್ನು ಮೆಚ್ಚಿಸಿಕೊಳ್ಳಲು ಅದೆಷ್ಟೋ ಮುನಿಗಳು,...Kannada News