ಮಹಾಭಾರತದ ಯುದ್ಧ ನಡೆದಿದ್ದು ಧರ್ಮದ ಉಳಿವಿಗಾಗಿ ಮತ್ತು ಅಧರ್ಮದ ನಾಶಕ್ಕಾಗಿ ಅನ್ನುವುದು ಎಲ್ಲರಿಗೂ ಗೊತ್ತು, ಧರ್ಮ ಉಳಿಯಬೇಕು ಅನ್ನುವ ಸಲುವಾಗಿ ಹಲವು ಭಾರಿ ಶ್ರೀ ಕೃಷ್ಣನು ಅರ್ಜುನನ್ನ ಕರ್ಣನಿಂದ ಕಾಪಾಡುತ್ತಾನೆ. ಪರಶುರಾಮ ಮತ್ತು ಭೂದೇವಿಯ ಶಾಪದ ಸಲುವಾಗಿ ತನ್ನ ಎಲ್ಲಾ ವಿದ್ಯೆಗಳನ್ನ ಮರೆತು ನಿಶಾಸ್ತ್ರನಾಗಿ ಕರ್ಣ ನಿಂತ ಸಮಯದಲ್ಲಿ ಅರ್ಜುನ ಕರ್ಣನ ಮೇಲೆ ದಾಳಿಯನ್ನ ಮಾಡಿ ಕರ್ಣನನ್ನ ಕೊಲ್ಲುತ್ತಾನೆ. ಇನ್ನು ಸಾಯುತ್ತಿದ್ದ ಕರ್ಣನನ್ನ ಕಂಡು ಅರ್ಜುನ ತುಂಬಾ ಸಂತೋಷ ಪಡುತ್ತಾನೆ, ಹೌದು ಕರ್ಣ ಅರ್ಜುನನ ದೊಡ್ಡ ಶತ್ರು ಆದಕಾರಣ ಕರ್ಣ ಸಾಯುತ್ತಿರುವಾಗ ಅರ್ಜುನ ಖುಷಿಪಡುತ್ತಾನೆ. ಇನ್ನು ಬಿಲ್ಲು ವಿದ್ಯೆಯಲ್ಲಿ ಅರ್ಜುನನಿಗೆ ಕರ್ಣ ಮಾತ್ರ ಪ್ರತಿಸ್ಪರ್ಧಿ ಆಗಿದ್ದ, ಈ ಎಲ್ಲಾ ಕಾರಣಕ್ಕೆ ಅರ್ಜುನ ಕರ್ಣ ಸಾಯುವುದನ್ನ ಕಂಡು ತುಂಬಾ ಖುಷಿ ಪಡುತ್ತಾನೆ ಮತ್ತು ಶ್ರೀ ಕೃಷ್ಣನ ಬಳಿಬಂದು ದಾನ ಶೂರ ಕರ್ಣ ಸತ್ತಾಯ್ತು ನೀವು ಈಗ ಯಾರನ್ನ ದಾನ ಶೂರ ಕರ್ಣ ಎಂದು ಕರೆಯುತ್ತೀರಿ ಎಂದು ಶ್ರೀ ಕೃಷ್ಣನಲ್ಲಿ ಬಂದು ಕೊಂಕು ಮಾತನಾ ಕೂಡ ಆಡುತ್ತಾನೆ ಅರ್ಜುನ.

ಇನ್ನು ಈ ಸಮಯದಲ್ಲಿ ಅರ್ಜುನನ ಮಾತಿನಲ್ಲಿ ಶ್ರೀ ಕೃಷ್ಣ ಅಹಂಕಾರವನ್ನ ಕಾಣುತ್ತಾನೆ ಮತ್ತು ಈ ಅಹಂಕಾರವನ್ನ ತೊಡೆದು ಹಾಕಲು ಶ್ರೀ ಕೃಷ್ಣ ಒಂದು ಉಪಾಯವನ್ನ ಮಾಡುತ್ತಾನೆ, ಹಾಗಾದರೆ ಶ್ರೀ ಕೃಷ್ಣ ಮಾಡಿದ ಉಪಾಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಅರ್ಜುನ ಹೀಗೆ ಹೇಳಿದ್ದನ್ನ ಕೇಳಿ ಶ್ರೀ ಕೃಷ್ಣನ ಅದಕ್ಕೆ ಉತ್ತರ ಕೊಡುತ್ತಾನೆ, ಹೇ ಅರ್ಜುನ ಕರ್ಣ ದಾನಿ ಅಲ್ಲ ಅವನೊಬ್ಬ ಮಹಾದಾನಿ, ಕರ್ಣನಷ್ಟು ದಾನ ಮಾಡುವವರು ಯಾರು ಇಲ್ಲ ಮತ್ತು ಅವನ ದಾನ ಮುಂದೆ ಇತಿಹಾಸವನ್ನೇ ಸೃಷ್ಟಿ ಮಾಡುತ್ತದೆ ನೋಡು ಎಂದು ಅರ್ಜುನನ ಕೊಂಕು ಮಾತಿಗೆ ಶ್ರೀ ಕೃಷ್ಣ ಉತ್ತರವನ್ನ ಕೊಡುತ್ತಾನೆ.

Karna and Krishna

ಇನ್ನು ಇದರಿಂದ ಕೋಪ ಮಾಡಿಕೊಂಡ ಶ್ರೀ ಕೃಷ್ಣನ ಬಳಿ ನೀವು ಕರ್ಣ ಮಹಾದಾನಿ ಅನ್ನುವುದನ್ನ ಹೇಗೆ ಸಾಭೀತು ಪಡಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಾನೆ, ಇನ್ನು ಇದಕ್ಕೆ ಉತ್ತರಿಸಿದ ಶ್ರೀ ಕೃಷ್ಣ ಸಾವಿನ ಅಂಚಿನಲ್ಲಿ ಇರುವ ಕರ್ಣ ಈಗಲೂ ಕೂಡ ತಾನೊಬ್ಬ ದಾನಿ ಅನ್ನುವುದನ್ನ ಸಾಭೀತು ಮಾಡುತ್ತಾನೆ ಎಂದು ಹೇಳುತ್ತಾನೆ ಶ್ರೀ ಕೃಷ್ಣ, ಇನ್ನು ಇದಕ್ಕೆ ಎದುರು ಮಾತನಾಡಿದ ಅರ್ಜುನ ಸರಿ ನೀವು ಸಾಭೀತು ಮಾಡಿ ಅವಾಗ ನಾನು ಕೂಡ ಆತನನ್ನ ಮಹಾದಾನಿ ಎಂದು ಕರೆಯುತ್ತಾನೆ ಎಂದು ಹೇಳುತ್ತಾನೆ. ಕರ್ಣ ದಾನಿ ಅನ್ನುವುದನ್ನ ಸಾಭೀತು ಮಾಡುವ ಸಲುವಾಗಿ ಕೃಷ್ಣ ಮತ್ತು ಅರ್ಜುನ ಬ್ರಾಹ್ಮಣರ ವೇಷವನ್ನ ಧರಿಸಿ ಕರ್ಣ ಇದ್ದ ಜಾಗಕ್ಕೆ ಬರುತ್ತಾರೆ, ಕರ್ಣನ ಬಳಿ ಬಂದು ಮಾತನಾಡಿದ ಕೃಷ್ಣ ಹೇ ಕರ್ಣ ನಿನ್ನ ಈ ಪರಿಸ್ಥಿತಿಯಲ್ಲಿ ನಮಗೆ ದಾನವನ್ನ ಕೇಳಲು ಮನಸ್ಸಾಗುತ್ತಿಲ್ಲ ನಾನು ಹಿಂತಿರುಗಿ ಹೋಗುತ್ತೇನೆ ಎಂದು ಹೇಳುತ್ತಾನೆ ಕೃಷ್ಣ.

ಇನ್ನು ಆ ಸಮಯದಲ್ಲಿ ಆ ಬ್ರಾಹ್ಮಣರನ್ನ ತಡೆದ ಕರ್ಣ ಅವರ ಬಳಿ ನಾನು ಬದುಕಿರುವ ತನಕ ನನ್ನ ಬಳಿ ದಾನವನ್ನ ಕೇಳಿಕೊಂಡು ಬಂದವರು ಯಾವುದೇ ಕಾರಣಕ್ಕೂ ಖಾಲಿ ಕೈಯಲ್ಲಿ ಹೋಗಬಾರದು ಮತ್ತು ತನ್ನ ಬಾಯಲ್ಲಿ ಎರಡು ಚಿನ್ನದ ಹಲ್ಲುಗಳಿವೆ ಅದನ್ನ ಕಿತ್ತುಕೊಳ್ಳಿ ಎಂದು ಆ ಬ್ರಾಹ್ಮಣರ ಬಳಿ ಹೇಳುತ್ತಾನೆ ಕರ್ಣ. ಇನ್ನು ಈ ಸಮಯದಲ್ಲಿ ಮಾತನಾಡಿದ ಕೃಷ್ಣ ಹಲ್ಲು ಕೀಟ ಪಾಪ ನನಗೆ ಬೇಡ ಬೇಕಾದರೆ ನೀನೇ ತೆಗೆದುಕೊಡು ಎಂದು ಕರ್ಣನಿಗೆ ಹೇಳುತ್ತಾನೆ ಶ್ರೀ ಕೃಷ್ಣ, ಆಗ ಕರ್ಣ ಪಕ್ಕದಲ್ಲಿ ಬಿದ್ದಿದ್ದ ಒಂದು ಕಲ್ಲನ್ನ ತೆಗೆದುಕೊಂಡು ಅದರ ಮೂಲಕ ತನ್ನ ಚಿನ್ನದ ಹಲ್ಲನ್ನ ತೆಗೆದು ಕೊಡುತ್ತಾನೆ, ಇನ್ನು ಇದನ್ನ ನೋಡಿದ ಅರ್ಜುನ ನಾಚಿಕೆಯಿಂದ ತಲೆಯನ್ನ ತಗ್ಗಿಸುತ್ತಾನೆ, ಸ್ನೇಹಿತರೆ ಎಂತಹ ದಾನಿ ಅಲ್ಲವೇ ಕರ್ಣ.

Karna and Krishna

Please follow and like us:
error0
http://karnatakatoday.in/wp-content/uploads/2019/11/Karna-and-Krishna-1024x576.jpghttp://karnatakatoday.in/wp-content/uploads/2019/11/Karna-and-Krishna-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಮಹಾಭಾರತದ ಯುದ್ಧ ನಡೆದಿದ್ದು ಧರ್ಮದ ಉಳಿವಿಗಾಗಿ ಮತ್ತು ಅಧರ್ಮದ ನಾಶಕ್ಕಾಗಿ ಅನ್ನುವುದು ಎಲ್ಲರಿಗೂ ಗೊತ್ತು, ಧರ್ಮ ಉಳಿಯಬೇಕು ಅನ್ನುವ ಸಲುವಾಗಿ ಹಲವು ಭಾರಿ ಶ್ರೀ ಕೃಷ್ಣನು ಅರ್ಜುನನ್ನ ಕರ್ಣನಿಂದ ಕಾಪಾಡುತ್ತಾನೆ. ಪರಶುರಾಮ ಮತ್ತು ಭೂದೇವಿಯ ಶಾಪದ ಸಲುವಾಗಿ ತನ್ನ ಎಲ್ಲಾ ವಿದ್ಯೆಗಳನ್ನ ಮರೆತು ನಿಶಾಸ್ತ್ರನಾಗಿ ಕರ್ಣ ನಿಂತ ಸಮಯದಲ್ಲಿ ಅರ್ಜುನ ಕರ್ಣನ ಮೇಲೆ ದಾಳಿಯನ್ನ ಮಾಡಿ ಕರ್ಣನನ್ನ ಕೊಲ್ಲುತ್ತಾನೆ. ಇನ್ನು ಸಾಯುತ್ತಿದ್ದ ಕರ್ಣನನ್ನ ಕಂಡು ಅರ್ಜುನ ತುಂಬಾ ಸಂತೋಷ...Film | Devotional | Cricket | Health | India