Karnataka Floods

ಉತ್ತರ ಕರ್ನಾಟಕದ ಬೆಳಗಾವಿಯಿಂದ ಶುರುವಾದ ಪ್ರವಾಹ ಮಲೆನಾಡು, ದಕ್ಷಿಣ ಕನ್ನಡ, ಮೈಸೂರು, ಹಾಸನ, ಚಿಕ್ಕಮಗಳೂರು ಹೀಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೊಡ್ಡ ಅವಾಂತರವನ್ನ ಸೃಷ್ಟಿ ಮಾಡಿದೆ. ಇನ್ನು ಭೀಕರ ಪ್ರವಾಹಕ್ಕೆ ಸಿಕ್ಕಿ ಮನೆ ಮತ್ತು ಆಸ್ತಿಗಳನ್ನ ಕಳೆದುಕೊಂಡು ನಿರಾಶ್ರೀತರಾದ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ ಇಡೀ ಕರ್ನಾಟಕದ ಜನತೆ.

ಇನ್ನು ರಾಜ್ಯದ ಎಲ್ಲಾ ಕಡೆಗಳಿಂದ ಸಮಸ್ಯೆಗೆ ಸಿಲುಕಿದವರಿಗೆ ಆಹಾರ ಪದಾರ್ಥಗಳು ಮತ್ತು ವಸತಿಯನ್ನ ಕಲ್ಪಿಸಲು ಸಲುವಾಗಿ ಹಲವು ವಸ್ತುಗಳನ್ನ ವಾಹನಗಳಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ, ಇನ್ನು ನೆರೆ ಪೀಡಿತ ಜನರಿಗೆ ದರ್ಶನ್ ಮತ್ತು ಸುದೀಪ್ ಕೊಟ್ಟಿದ್ದು ಏನು ಅನ್ನುವುದರ ಬಗ್ಗೆ ನಾವು ಈಗ ನಿಮಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಒಂದು ಕಡೆ ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳು ಜಲಪ್ರಳಯದಿಂದ ತತ್ತರಿಸಿ ಹೋಗಿದ್ದು ಕನ್ನಡಿಗರೆಲ್ಲರೂ ಕೂಡ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡುತ್ತಿದ್ದಾರೆ.

Karnataka Floods

ಇನ್ನು ನಮ್ಮ ಸ್ಯಾಂಡಲ್ ವುಡ್ ನ ಟಾಪ್ ನಟರು ಕೂಡ ಪ್ರವಾಹದಲ್ಲಿ ಸಿಲುಕಿದ ಜನರಿಗೆ ಸಹಾಯ ಮಾಡಲು ಮುಂದಾಗಿದ್ದು ಕೋಟಿ ಕೋಟಿ ಹಣವನ್ನ ಸಹಾಯ ಮಾಡಿದ್ದಾರೆ, ಇನ್ನು ದರ್ಶನ್ ಅವರ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿದ್ದರೂ ಕೂಡ ದರ್ಶನ್ ಅವರು ಸಿನಿಮಾ ಪ್ರಚಾರಕ್ಕೆ ಹೋಗದೆ ತಮ್ಮ ಗೆಳೆಯರನ್ನ ಕೂರಿಸಿಕೊಂಡು ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ಇನ್ನು ಆರ್ಥಿಕವಾಗಿ ದರ್ಶನ್ ಅವರು ತಮ್ಮ ಕೈಯಲ್ಲಿ ಆದಷ್ಟು ಹಣವನ್ನ ಪ್ರವಾಹ ಪೀಡಿತ ಜನರಿಗೆ ಕೊಟ್ಟಿದ್ದು ಮಾತ್ರವಲ್ಲದೆ ಅವರಿಗೆ ಬೇಕಾದ ಹಲವು ಅಗತ್ಯ ವಸ್ತುಗಳ ಸಹಾಯವನ್ನ ಮಾಡಿದ್ದಾರೆ. ಇನ್ನು ನೆರೆ ಪೀಡಿತ ರಾಜ್ಯಗಳಲ್ಲಿ ದರ್ಶನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದು ಅವರೆಲ್ಲ ಕೂಡ ದರ್ಶನ್ ಅವರ ಮಾತಿನಂತೆ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ ಮತ್ತು ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡುತ್ತಿದ್ದಾರೆ.

Karnataka Floods

ಇನ್ನು ಇದೆ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದ ಆಡಿಯೋ ಕೂಡ ಲಾಂಚ್ ಆಗಬೇಕಿತ್ತು ಮತ್ತು ಇದಕ್ಕೆ ಪುನೀತ್ ರಾಜಕುಮಾರ್ ಅವರು ಕೂಡ ಬೆಂಬಲವನ್ನ ಸೂಚಿಸಿದ್ದರು, ಆದರೆ ಕರ್ನಾಟಕದ ಹಲವು ರಾಜ್ಯಗಳಲ್ಲಿ ನೆರೆ ಬಂದಿರುವ ಕಾರಣ ಎಲ್ಲಾ ಆಡಿಯೋ ಲಾಂಚ್ ಕಾರ್ಯಕ್ರಮವನ್ನ ರದ್ದು ಮಾಡಿ ನೆರೆ ಸಂತ್ರಸ್ತರ ನೆರೆವಾಗಿಗೆ ಧಾವಿಸಿದ್ದಾರೆ ಸುದೀಪ್ ಮತ್ತು ಅವರ ತಂಡ.

ತಮಗೆ ಎದುರಾಗಿರುವ ಕಷ್ಟದ ನಡುವೆಯೂ ಕೂಡ ಇಬ್ಬರು ಸ್ಟಾರ್ ನಟರು ಮಾಡುತ್ತಿರುವ ಈ ಸಹಾಯಕ್ಕೆ ನೆರೆ ಸಂತ್ರಸ್ತರು ಕೃತಜ್ಞತೆಯನ್ನ ಸಲ್ಲಿಸಿದ್ದಾರೆ, ಸ್ನೇಹಿತರೆ ಈ ನಂತರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Karnataka Floods

Please follow and like us:
0
http://karnatakatoday.in/wp-content/uploads/2019/08/Uttara-Karnataka-Flood-1024x576.jpghttp://karnatakatoday.in/wp-content/uploads/2019/08/Uttara-Karnataka-Flood-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಉತ್ತರ ಕರ್ನಾಟಕದ ಬೆಳಗಾವಿಯಿಂದ ಶುರುವಾದ ಪ್ರವಾಹ ಮಲೆನಾಡು, ದಕ್ಷಿಣ ಕನ್ನಡ, ಮೈಸೂರು, ಹಾಸನ, ಚಿಕ್ಕಮಗಳೂರು ಹೀಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೊಡ್ಡ ಅವಾಂತರವನ್ನ ಸೃಷ್ಟಿ ಮಾಡಿದೆ. ಇನ್ನು ಭೀಕರ ಪ್ರವಾಹಕ್ಕೆ ಸಿಕ್ಕಿ ಮನೆ ಮತ್ತು ಆಸ್ತಿಗಳನ್ನ ಕಳೆದುಕೊಂಡು ನಿರಾಶ್ರೀತರಾದ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ ಇಡೀ ಕರ್ನಾಟಕದ ಜನತೆ. ಇನ್ನು ರಾಜ್ಯದ ಎಲ್ಲಾ ಕಡೆಗಳಿಂದ ಸಮಸ್ಯೆಗೆ ಸಿಲುಕಿದವರಿಗೆ ಆಹಾರ ಪದಾರ್ಥಗಳು ಮತ್ತು ವಸತಿಯನ್ನ ಕಲ್ಪಿಸಲು ಸಲುವಾಗಿ ಹಲವು ವಸ್ತುಗಳನ್ನ ವಾಹನಗಳಲ್ಲಿ...Kannada News