karnataka pashu sangopana

ಕರ್ನಾಟಕ ಸರ್ಕಾರದ ಪಶುಪಾಲನೆ ಮತ್ತು ವೈದ್ಯಕೀಯ ಇಲಾಖೆಯಿಂದ ಹೈನುಗಾರಿಕೆಯನ್ನ ಪ್ರೋತ್ಸಾಹಿಸಲು ಪಶು ವೈದ್ಯಕೀಯ ಇಲಾಖೆ ಈಗಾಗಲೇ ಅರ್ಜಿ ಸಲ್ಲಿಕೆಗೆ ವರದಿ ನೀಡಿತ್ತು. ಸ್ವಾವಲಂಬಿ ಬದುಕನ್ನ ಸಾಗಿಸಲು ಅತಿ ಕಡಿಮೆ ಭೂಮಿ ಮತ್ತು ಸಣ್ಣ ಪ್ರಮಾಣದ ರೈತರಿಗೆ ಮೊದಲ ಆದ್ಯತೆ ನೀಡಲಾಗಿದೆ, ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ನಿಮ್ಮ ಹತ್ತಿರದ ಪಶು ಸಂಗೋಪನಾ ಇಲಾಖೆಯಲ್ಲಿ ಕೇಳಿ ಅಲ್ಲಿಯೇ ಅರ್ಜಿ ಸಲ್ಲಿಸಬಹುದು. ಈ ಸೌಕರ್ಯದ ಮೂಲಕ ನಿಮಗೆ ಎಮ್ಮೆ ಮತ್ತು ಆಕಳನ್ನು ಸರ್ಕಾರದ ಧನ ಸಹಾಯದ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ.

karnataka pashu sangopana

ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದದವರಿಗೆ ಅವಕಾಶವಿದೆ. ಇಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದವರು ಮತ್ತು ನೊಂದ ಹಾಗು ಅಂಗವಿಕಲ ಪುರುಷ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗಿದೆ. ರೈತರಿಗೆ ಹಾಗು ಸಣ್ಣರೈತರಿಗೆ ಮತ್ತು ಅತೀ ಸಣ್ಣ ರೈತರಿಗೆ ಹಾಗು ಭೂರಹಿತರಿಗೆ ಹಸುಗಳನ್ನು ಮತ್ತು ಎಮ್ಮೆಗಳನ್ನು ಕೊಂಡುಕೊಳ್ಳಲು ಸೇವಾ ಇಲಾಖೆಯಿಂದ ಅರ್ಜಿಗಳನ್ನು ಕರೆದಿದ್ದಾರೆ.

karnataka pashu sangopana

ಹಿಂದುಳಿದ ವರ್ಗದವರು ಮತ್ತು ವಿಧವೆಯರು,ಅಂಗವಿಕಲರು ಹಾಗು ಇತರರು ಕೂಡ ಹಸು ಹಾಗು ಎಮ್ಮೆ ಮತ್ತು ಕುರಿ,ಕೋಳಿ ಸಾಕಾಣಿಕೆಗಾಗಿ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ನೀವು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಭೂಮಿಗೆ ಸಂಬಂಧಪಟ್ಟ ದಾಖಲೆಗಳು ಜೊತೆಗೆ ತಗೆದುಕೊಂಡು ಹೋಗಿ.

karnataka pashu sangopana

ರೇಷನ್ ಕಾರ್ಡ್ ಫೋಟೋ ಸಮೇತ ಹತ್ತಿರದ ಪಶು ವೈದ್ಯಕೀಯ ಇಲಾಖೆಗೆ ಭೇಟಿ ನೀಡಿದರೆ ನಿಮಗೆ ಎಲ್ಲ ರೀತಿಯ ಮಾಹಿತಿಯ ಜೊತೆಗೆ ಸಹಕಾರ ದೊರೆಯಲಿದೆ. ಕೃಷಿಯಿಂದ ಬದುಕು ಸಾಗಿಸಲು ಭೂಮಿ ಇಲ್ಲದಿದ್ದರೆ ಈ ರೀತಿ ಪ್ರಾಣಿ ಸಾಕಾಣಿಕೆ ಮೂಲಕ ನೀವು ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದಷ್ಟು ಬಡ ರೈತರಿಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/hainugarike-1024x576.jpghttp://karnatakatoday.in/wp-content/uploads/2018/08/hainugarike-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಕರ್ನಾಟಕ ಸರ್ಕಾರದ ಪಶುಪಾಲನೆ ಮತ್ತು ವೈದ್ಯಕೀಯ ಇಲಾಖೆಯಿಂದ ಹೈನುಗಾರಿಕೆಯನ್ನ ಪ್ರೋತ್ಸಾಹಿಸಲು ಪಶು ವೈದ್ಯಕೀಯ ಇಲಾಖೆ ಈಗಾಗಲೇ ಅರ್ಜಿ ಸಲ್ಲಿಕೆಗೆ ವರದಿ ನೀಡಿತ್ತು. ಸ್ವಾವಲಂಬಿ ಬದುಕನ್ನ ಸಾಗಿಸಲು ಅತಿ ಕಡಿಮೆ ಭೂಮಿ ಮತ್ತು ಸಣ್ಣ ಪ್ರಮಾಣದ ರೈತರಿಗೆ ಮೊದಲ ಆದ್ಯತೆ ನೀಡಲಾಗಿದೆ, ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ನಿಮ್ಮ ಹತ್ತಿರದ ಪಶು ಸಂಗೋಪನಾ ಇಲಾಖೆಯಲ್ಲಿ ಕೇಳಿ ಅಲ್ಲಿಯೇ ಅರ್ಜಿ ಸಲ್ಲಿಸಬಹುದು. ಈ ಸೌಕರ್ಯದ ಮೂಲಕ ನಿಮಗೆ ಎಮ್ಮೆ...Kannada News