Karnataka karmika card

ಕೆಲವರು ಈಗಾಗಲೇ ಈ ಕಾರ್ಡ್ ನ್ನ ಮಾಡಿಸಿಕೊಂಡಿದ್ದಾರೆ, ಇನ್ನು ಕೆಲವರಿಗೆ ಈ ಕಾರ್ಡ್ ನಮಗೆ ಸಿಗುತ್ತದೆಯೋ ಇಲ್ಲವೋ ಅನ್ನುವ ಡೌಟ್ ಇದೆ. ಸ್ನೇಹಿತರೆ ಈ ಕಾರ್ಡ್ ಇರುವವರ ಮಕ್ಕಳು ಮದುವೆಯಾದರೆ ಅವರಿಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಉಚಿತವಾಗಿ ಹಣ ಸಿಗುತ್ತದೆ ಮತ್ತು ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಚಿಕಿತ್ಸೆಗಾಗಿ ಹಣ, 60 ವರ್ಷದ ನಂತರ ಪಿಂಚಣಿ ಯೋಜನೆ ಮತ್ತು ಕುಟುಮದ ಸದಸ್ಯರು ಯಾರಾದರೂ ಸತ್ತರೆ ಮಣ್ಣು ಖರ್ಚು ಅಂತ 25000 ರೂಪಾಯಿ ಉಚಿತವಾಗಿ ಸರ್ಕಾರದಿಂದ ಈ ಕಾರ್ಡ್ ಇರುವವರಿಗೆ ಸಿಗುತ್ತದೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗಾಗಿ ಸಿಗುತ್ತಿರುವ ಈ ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡರೆ ಸರ್ಕಾರದಿಂದ ನಿಮಗೆ ಸಾಕಷ್ಟು ಸೌಲಭ್ಯ ಸಿಗಲಿದೆ.

Karnataka karmika card

ಇನ್ನು ಕಾರ್ಮಿಕರ ಕಾರ್ಡ್ ಯಾವ ಯಾವ ಕೆಲಸ ಮಾಡುವವರಿಗೆ ಸಿಗುತ್ತದೆ ಅಂದರೆ, ನಿರ್ಮಾಣ ಕೆಲಸ, ಮಾರ್ಪಾಡು ಕೆಲಸ ಮತ್ತು ರಿಪೇರಿ ಕೆಲಸ, ಕಟ್ಟಡ ಕೆಡುವುದು, ಕಾಮಗಾರಿ ಸಂಬಂದಿಸಿದ ಕೆಲಸಗಳು, ನೀರಾವರಿ, ಚರಂಡಿ, ಆಣೆಕಟ್ಟು, ವಿದ್ಯುತ್ ಉತ್ಪಾದನೆ, ಸುರಂಗ, ಸೇತುವೆ ಕೆಲಸ ಹೀಗೆ ಹಲವಾರು ಕೆಲಸ ಮಾಡುವವರಿಗೆ ಈ ಕಾರ್ಡ್ ಸಿಗುತ್ತದೆ.

ಸ್ನೇಹಿತರೆ ನೀವು ಕೂಡ ಈ ಕಾರ್ಮಿಕ ಕಾರ್ಡ್ ಪಡೆಯಬೇಕೆಂದರೆ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ತಗೆದುಕೊಂಡು ನಿಮ್ಮ ಹತ್ತಿರದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕ ಕಾರ್ಡ್ ಗೆ ಅರ್ಜಿಯನ್ನ ನೀಡಬೇಕಾಗುತ್ತದೆ, ಇನ್ನು ಇದರ ಜೊತೆ ನೀವು ಕೆಲಸ ಮಾಡುವ ಕಂಟ್ರಾಕ್ಟರ್ ನ ಸಹಿ ಅಥವಾ ಸೀಲ್ ಹಾಕಿಸಿ ಕೊಡಬೇಕು.

Karnataka karmika card

ಈ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲೇ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಯಲ್ಲೇ ನಿಮ್ಮ ಕಾರ್ಮಿಕ ಕಾರ್ಡ್ ಸಿಗುತ್ತದೆ, ಸ್ನೇಹಿತರೆ ಇದರಲ್ಲಿ ಎರಡು ಮಕ್ಕಳ ಹೆಸರನ್ನ ಮಾತ್ರ ಸೇರಿಸಬಹುದು, ಇನ್ನು ಸೇರಿಸಿದ ಆ ಎರಡು ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ ಮತ್ತು ಮದುವೆಗೆ ಎರಡು ಮಕ್ಕಳಿಗೆ ಸೇರಿಸಿ 1 ಲಕ್ಷ ರೂಪಾಯಿ ಸಿಗುತ್ತದೆ.

ಸ್ನೇಹಿತರೆ ನಿಮ್ಮ ತಂದೆ ಅಥವಾ ತಾಯಿ ಯಾವುದೇ ಕೆಲಸವನ್ನ ಮಾಡುತ್ತಿರಲಿ ಒಂದು ಸಲ ಕಾರ್ಮಿಕ ಇಲಾಖೆಯಲ್ಲಿ ವಿಚಾರಿಸಿ ಕಾರ್ಮಿಕ ಕಾರ್ಡ್ ಸಿಗುತ್ತಾ ಇಲ್ವಾ ಅಂತ, ಯಾಕೆ ಅಂದರೆ ಮಕ್ಕಳ ಮದುವೆ ಖರ್ಚಿಗೆ ಈ ಕಾರ್ಮಿಕ ಕಾರ್ಡ್ ತುಂಬಾ ಹೆಲ್ಪ್ ಆಗುತ್ತದೆ, ಸ್ನೇಹಿತರೆ ಇದನ್ನ ಪ್ರತಿ ಬಡವರಿಗೂ ತಲುಪುವ ವರೆಗೂ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ಹೇಳಿ.

Karnataka karmika card

Please follow and like us:
0
http://karnatakatoday.in/wp-content/uploads/2018/10/INDINAN-LABOUR-REGISTRATION-CARD-1024x576.jpghttp://karnatakatoday.in/wp-content/uploads/2018/10/INDINAN-LABOUR-REGISTRATION-CARD-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಕೆಲವರು ಈಗಾಗಲೇ ಈ ಕಾರ್ಡ್ ನ್ನ ಮಾಡಿಸಿಕೊಂಡಿದ್ದಾರೆ, ಇನ್ನು ಕೆಲವರಿಗೆ ಈ ಕಾರ್ಡ್ ನಮಗೆ ಸಿಗುತ್ತದೆಯೋ ಇಲ್ಲವೋ ಅನ್ನುವ ಡೌಟ್ ಇದೆ. ಸ್ನೇಹಿತರೆ ಈ ಕಾರ್ಡ್ ಇರುವವರ ಮಕ್ಕಳು ಮದುವೆಯಾದರೆ ಅವರಿಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಉಚಿತವಾಗಿ ಹಣ ಸಿಗುತ್ತದೆ ಮತ್ತು ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಚಿಕಿತ್ಸೆಗಾಗಿ ಹಣ, 60 ವರ್ಷದ ನಂತರ ಪಿಂಚಣಿ ಯೋಜನೆ ಮತ್ತು ಕುಟುಮದ ಸದಸ್ಯರು ಯಾರಾದರೂ ಸತ್ತರೆ ಮಣ್ಣು...Kannada News