ರಾಜ್ಯ ಸರ್ಕಾರವೀಗ ಬಡ ರೋಗಿಗಳಿಗೆ ಮತ್ತಷ್ಟು ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಅವರ ಪಾಲಿನ ದೇವರಾಗಿದ್ದಾರೆ, ಹೌದು ಇಂದಿನ ಈ ಫಾಸ್ಟ್ ಯುಗದ ಆಹಾರಾಭ್ಯಾಸ ಯಾರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಕಾಯಿಲೆ ಬರುತ್ತದೋ ಎಂದು ಹೇಳುವುದು ಅಸಾಧ್ಯ ಅದರಲ್ಲೂ ಈಗಿನ ಕಾಲದಲ್ಲಿ ಬಡವನ ಪಾಲಿಗೆ ಈ ದುಸ್ಥಿತಿ ಬಂತೆಂದರೆ ನಿಭಾಯಿಸಿಕೊಳ್ಳುವುದು ಬಹಳ ಕಷ್ಟ. ಕಾಯಿಲೆ ಎಂದು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗೆ ಸೇರಿಕೊಂಡರೆ ಚೀಟ್ಸ್ ವೆಚ್ಚವಿರಲಿ ಒಂದು ದಿನದ ಕೊಠಡಿ ವೆಚ್ಚವೇ ಭರಿಸುವುದು ಕಷ್ಟ, ಸಾಲದ ಮೇಲೆ ಸಾಲ ಮಾಡಿಕೊಂಡು ಜೀವನವೇ ಸಾಲದ ಹೊರೆಯಾಗಿಬಿಡುತ್ತದೆ, ಹೀಗಾಗಿ ಸರ್ಕಾರವೀಗ ಬಡವರಿಗಾಗಿ ಅದರಲ್ಲೂ ಬಿಪಿಎಲ್ ಕಾರ್ಡುದಾರರಿಗೆ ಒಂದರ ಮೇಲೊಂದು ಉಪಕಾರ ಮಾಡುತ್ತಿದೆ ಎನ್ನಬಹುದು.

ಇನ್ನು ಮೇಲೆ ನೀವು ಈ ಕೆಳಗಿನ ಚಿಕೆತ್ಸೆಗಳನ್ನು ಮಾಡಿದರೆ ಸರ್ಕಾರವೇ ಎಲ್ಲ ಹಣವನ್ನು ಭರಿಸಲಿದೆ ರಾಜ್ಯ ವೈದ್ಯಕೀಯ ಇಲಾಖೆಯು ಬಿಪಿಎಲ್ ಕಾರ್ಡುದಾರರಿಗೆ ಸಿಹಿ ಸುದ್ದಿಯನ್ನ ನೀಡಿದೆ, ಹೌದು ಬಡವರಿಗಾಗಿ ಉಚಿತವಾಗಿ ಅಂಗಾಂಗ ಕಸಿ ಮಾಡಲಾಗುತ್ತದೆ ಮತ್ತು ಇದಕ್ಕೆ ತಗಲುವ ಎಲ್ಲಾ ವೆಚ್ಚವನ್ನ ಸರ್ಕಾರವೇ ಭರಿಸಲಿದೆ. ರಾಜ್ಯದಲ್ಲಿ ಇರುವ ಬಡ ಜನರು ಹೃದಯದ ಆಪರೇಷನ್, ಲಿವರ್ ಆಪರೇಷನ್, ಕಿಡ್ನಿ ಆಪರೇಷನ್ ಮತ್ತು ದೇಹದ ಇತರ ಅಂಗಗಳು ಇಲ್ಲದೆ ಅಥವಾ ಫೇಲ್ ಆದರೆ ಉಚಿತವಾಗಿ ಅಂಗಗಳ ಕಸಿ ಮಾಡಲಾಗುತ್ತದೆ.

arogya suraksha Trust

ಸರ್ಕಾರವೀಗ ದೊಡ್ಡ ದೊಡ್ಡ ಆಪರೇಷನ್ ಮಾಡುವ ಬಡ ರೋಗಿಗಳ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವ ಹೊಣೆ ಹೊತ್ತುಕೊಂಡಿದೆ. ಹಾಗಿದ್ದರೆ ಈ ಸೇವೆಯನ್ನು ಹೇಗೆ ಮತ್ತು ಎಲ್ಲಿ ಪಡೆಯಬೇಕು ಎನ್ನುವುದರ ಬಗ್ಗೆ ನಿಮಗೆ ನಾವಿಂದು ತಿಳಿಸಲಿದ್ದೇವೆ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವಯಸ್ಸಾಗುತ್ತಿದ್ದಂತೆ ಅಂಗಾಂಗ ವೈಫಲ್ಯದ ಸಮಸ್ಯೆ ಹಲವರನ್ನು ಕಾಡುತ್ತಡವೆ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಯಾವುದೇ ಬಡ ವ್ಯಕ್ತಿ ಯಾವುದೇ ದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಸೇರಿದ್ದರೆ ಆತನ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಸರ್ಕಾರದ ಈ ಸೌಲಭ್ಯವನ್ನ ಪಡೆದುಕೊಳ್ಳಬಹುದಾಗಿದೆ.

ರಾಜ್ಯದಲ್ಲಿ ಈಗಾಗಲೇ ಇರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಹೋಗಿ ನಿಮ್ಮ ಹೆಸರನ್ನ ನೋಂದಾವಣೆ ಮಾಡಿಕೊಳ್ಳಿ, ಇನ್ನು ಈ ಟ್ರಸ್ಟ್ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೆ, ಇನ್ನು ನಿಮ್ಮ ಹತ್ತಿರದ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿದರೆ ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಸಿಗಲಿದೆ. ಇನ್ನು ಈ ಟ್ರಸ್ಟ್ ನಲ್ಲಿ ಅನುಮತಿ ಪಡೆದುಕೊಂಡು ಅಂಗಾಂಗ ಕಸಿಯ ಆಪರೇಷನ್ ಮಾಡಿಸಿಕೊಂಡು ನಂತರ ಎಲ್ಲಾ ಬಿಲ್ಲುಗಳನ್ನ ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸಲ್ಲಿಸಿದರೆ ಟ್ರಸ್ಟ್ ಚಿಕಿತ್ಸ ವೆಚ್ಚವನ್ನ ಪಾವತಿ ಮಾಡಲಿದೆ ಮತ್ತು ನಂತರ ವೈದ್ಯಕೀಯ ವೆಚ್ಚವನ್ನ ಕೂಡ ಸರ್ಕಾರವೇ ಭರಿಸಲಿದೆ.

ಒಟ್ಟಾರೆಯಾಗಿ ಬಡ ಕುಟುಂಬದವರು ತಮ್ಮ ಅಂಗಾಂಗ ಕಸಿಯನ್ನ ಈ ಟ್ರಸ್ಟ್ ನ ಮೂಲಕ ಸಂಪೂರ್ಣವಾಗಿ ಉಚಿತವಾಗಿ ಮಾಡಿಕೊಳ್ಳಬಹುದು, ಇನ್ನು ಟ್ರಸ್ಟ್ ಮೂಲಕ ಕಿಡ್ನಿ ಕಸಿಗೆ 2 ಲಕ್ಷ ರೂಪಾಯಿ, ಹೃದಯ ಕಸಿಗೆ 10 ಗೆ ಲಕ್ಷ ರೂಪಾಯಿ ಮತ್ತು ಲಿವರ್ ಕಸಿಗೆ 11 ಲಕ್ಷ ರೂಪಾಯಿಯನ್ನ ಉಚಿತವಾಗಿ ಸರ್ಕಾರವೇ ಭರಿಸಲಿದೆ. ಇನ್ನು ಆಪರೇಷನ್ ಬಳಿಕವೂ ವೈದ್ಯೋಪಚಾರಕ್ಕೆ ಎಂದು ಪ್ರತಿ ವರ್ಷಕ್ಕೆ 1 ಲಕ್ಷ ರೂಪಾಯಿಯನ್ನ ನೀಡಲಿದೆ. ಈ ಹಿಂದೆ ಈ ಎಲ್ಲಾ ಸೇವೆಗಳ ಅರಿವಿಲ್ಲದೆ ಅದೆಷ್ಟೋ ಬಡವರು ಸಾಕಷ್ಟು ನೊಂದಿದ್ದಾರೆ, ಹೀಗಾಗಿ ತಪ್ಪದೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ತಲುಪಿಸಿ.

arogya suraksha Trust

Please follow and like us:
error0
http://karnatakatoday.in/wp-content/uploads/2019/10/trust-free-1024x576.pnghttp://karnatakatoday.in/wp-content/uploads/2019/10/trust-free-150x104.pngKarnataka Trendingಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲರಾಜ್ಯ ಸರ್ಕಾರವೀಗ ಬಡ ರೋಗಿಗಳಿಗೆ ಮತ್ತಷ್ಟು ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಅವರ ಪಾಲಿನ ದೇವರಾಗಿದ್ದಾರೆ, ಹೌದು ಇಂದಿನ ಈ ಫಾಸ್ಟ್ ಯುಗದ ಆಹಾರಾಭ್ಯಾಸ ಯಾರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಕಾಯಿಲೆ ಬರುತ್ತದೋ ಎಂದು ಹೇಳುವುದು ಅಸಾಧ್ಯ ಅದರಲ್ಲೂ ಈಗಿನ ಕಾಲದಲ್ಲಿ ಬಡವನ ಪಾಲಿಗೆ ಈ ದುಸ್ಥಿತಿ ಬಂತೆಂದರೆ ನಿಭಾಯಿಸಿಕೊಳ್ಳುವುದು ಬಹಳ ಕಷ್ಟ. ಕಾಯಿಲೆ ಎಂದು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗೆ ಸೇರಿಕೊಂಡರೆ ಚೀಟ್ಸ್ ವೆಚ್ಚವಿರಲಿ ಒಂದು ದಿನದ...Film | Devotional | Cricket | Health | India