ಕೇರಳದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಜೋರಾಗಿದೆ, ನಿಲ್ಲದೆ ಸುರಿಯುತ್ತಿರುವ ಮಳೆ ಜನರು ತತ್ತರಗೊಂಡಿದ್ದಾರೆ. ಕಣ್ಣು ಹಾಯಿಸಿದಷ್ಟು ದೂರ ನೀರು, ಕಾಲಿಟ್ಟಲ್ಲೆಲ್ಲ ಕೆಸರು, ಶಾಲೆ, ದೇವಸ್ಥಾನ, ಚರ್ಚ್, ಮಸೀದಿಗಳಲ್ಲೆಲ್ಲ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಜನ, ಆಗಸದಲ್ಲಿ ಹೆಲಿಕಾಪ್ಟರ್​ಗಳ ಹಾರಾಟ, ಸೇನೆ, ನೌಕಾಪಡೆ, ಅಗ್ನಿಶಾಮಕ ಪಡೆಗಳ ರಕ್ಷಣಾ ಕಾರ್ಯಾಚರಣೆ, ಕುಸಿದು ಬಿದ್ದಿರುವ ಬೆಟ್ಟಗುಡ್ಡ, ನಜ್ಜುಗುಜ್ಜಾಗಿರುವ ವಾಹನಗಳು.

ತನ್ನ ಮನೆ ಕಣ್ಣೆದುರೇ ಕುಸಿದು ಬಿದ್ದಿರುವುದನ್ನ ಕಂಡು ಮರುಗುತ್ತಿರುವ ಜನತೆ ಅಬ್ಬಬ್ಬಾ ಇವರ ಸಂಕಷ್ಟ ಹೇಳತೀರದು. ರಾಷ್ಟೀಯ ವಿಪತ್ತು ಪಡೆ ಮತ್ತು ಎಲ್ಲಾ ತುರ್ತು ವಿಭಾಗದ ಇಲಾಖೆಯವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಇಷ್ಟರ ಮಧ್ಯದಲ್ಲೇ ಎಂದು ಬಾರದ ಈ ನೆರೆಗೆ ಕಾರಣ ಹುಡುಕಿದಾಗ ಜನತೆಗೆ ಸಿಕ್ಕ ಮಹತ್ವದ ಸುಳಿವು ಏನಾದರೆ ಅದು ಕೇರಳದ ಅಯ್ಯಪ್ಪ್ಪ ಸ್ವಾಮಿ ಮಂದಿರ, ಸಂಪೂರ್ಣ ದೇವಾಲಯ ಜಲಾವೃತವಾಗಿದೆ, ಅಯ್ಯಪ್ಪನ ಪಾದದವರೆಗೆ ನೀರು ನುಗ್ಗಿದೆ ಎಂದು ವರದಿಯಾಗಿದೆ.

ಇತ್ತ ಫೇಸಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಶಬರಿಮಲೆಗೆ ಮಹಿಳೆಯರ ನಿರ್ಬಂಧಕ್ಕೆ ಹೇರಿದ ನಿಷೇಧವನ್ನು ಕೋರ್ಟ್ ಮಧ್ಯಪ್ರವೇಶ ಮಾಡಿ ವಿರೋಧಿಸಿದ್ದೆ ಇಂತಹ ದುರಂತಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ. ಆರ್‌ಬಿಐ ಮಂಡಳಿಗೆ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಎಸ್‌. ಗುರುಮೂರ್ತಿ ಅವರು ಕೂಡ ಇದೇ ರೀತಿ ಅರ್ಥಬರುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಶಬರಿಮಲೆಯಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಗತಿಯೂ ಕಾರಣವೇ ಎಂಬ ವಿಚಾರವನ್ನು ಗುರುಮೂರ್ತಿ ಅವರು ತೇಲಿ ಬಿಟ್ಟಿದ್ದಾರೆ. ಆದರೆ ಅಯ್ಯಪ್ಪ ಕೋಪಗೊಂಡಿದ್ದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂದು ನಿರ್ಧರಿಸಲು ಹೇಗೆ ಸಾಧ್ಯ. ಈ ವಿಷಯದ ಬಗ್ಗೆ ನಿಮಗೆ ಏನಾದರು ಅಭಿಪ್ರಾಯವಿದ್ದರೆ ತಪ್ಪದೆ ತಿಳಿಸಿ. ಮತ್ತು ಕೇರಳ ಹಾಗು ಕೊಡಗು ಜಲಪ್ರಳಯಕ್ಕೆ ಸಿಕ್ಕಿದವರಿಗೆ ಪರಿಹಾರವಾಗಿ ನಿಮ್ಮ ಕೈಲಾದಷ್ಟನ್ನು ಸಂಬಂಧಪಟ್ಟ ವಿಭಾಗಕ್ಕೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/08/kerala-1024x576.jpghttp://karnatakatoday.in/wp-content/uploads/2018/08/kerala-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಮಂಗಳೂರುಸುದ್ದಿಜಾಲಕೇರಳದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಜೋರಾಗಿದೆ, ನಿಲ್ಲದೆ ಸುರಿಯುತ್ತಿರುವ ಮಳೆ ಜನರು ತತ್ತರಗೊಂಡಿದ್ದಾರೆ. ಕಣ್ಣು ಹಾಯಿಸಿದಷ್ಟು ದೂರ ನೀರು, ಕಾಲಿಟ್ಟಲ್ಲೆಲ್ಲ ಕೆಸರು, ಶಾಲೆ, ದೇವಸ್ಥಾನ, ಚರ್ಚ್, ಮಸೀದಿಗಳಲ್ಲೆಲ್ಲ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಜನ, ಆಗಸದಲ್ಲಿ ಹೆಲಿಕಾಪ್ಟರ್​ಗಳ ಹಾರಾಟ, ಸೇನೆ, ನೌಕಾಪಡೆ, ಅಗ್ನಿಶಾಮಕ ಪಡೆಗಳ ರಕ್ಷಣಾ ಕಾರ್ಯಾಚರಣೆ, ಕುಸಿದು ಬಿದ್ದಿರುವ ಬೆಟ್ಟಗುಡ್ಡ, ನಜ್ಜುಗುಜ್ಜಾಗಿರುವ ವಾಹನಗಳು. ತನ್ನ ಮನೆ ಕಣ್ಣೆದುರೇ ಕುಸಿದು ಬಿದ್ದಿರುವುದನ್ನ ಕಂಡು ಮರುಗುತ್ತಿರುವ ಜನತೆ...Kannada News