ಕೆಜಿಎಫ್ ಮೊದಲ ಭಾಗವನ್ನು ನೋಡಿ ಸಂಪೂರ್ಣ ಶಾಕ್ ಆದ ಪ್ರೇಕ್ಷಕ ಇದೀಗ ಚಿತ್ರ ಮುಗಿದ ಬಳಿಕ ಎರಡನೇ ಭಾಗ ಯಾವಾಗ ಎನ್ನುವ ಗೊಂದಲದಲ್ಲಿದ್ದಾನೆ. ಇನ್ನು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರಕ್ಕೆ ಪರಭಾಷಾ ನಾಯಕರು ಕೂಡ ವಿಶ್ ಮಾಡಿರುವುದು ವಿಶೇಷ, ಎಲ್ಲಾ ಭಾಷಾ ಅಭಿಮಾನಿಗಳು ಕೂಡ ಚಿತ್ರಕ್ಕೆ ಉತ್ತಮ ರೇಟಿಂಗ್ ನೀಡಿದ್ದು ಚಿತ್ರದ ಅದ್ಬುತ ಮೇಕಿಂಗ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರದ ಚಾಪ್ಟರ್ 2 ಯಾವಾಗ ಅನ್ನೋ ಪ್ರಶ್ನೆಗೆ ಲೈವ್ ಮೂಲಕ ಉತ್ತರ ನೀಡಿದ್ದಾರೆ. ಚಿತ್ರ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಕೆಜಿಎಫ್ ಪಾರ್ಟ್ 2 ನತ್ತ ನೆಟ್ಟಿದ್ದು, ಪಾರ್ಟ್ 2 ರಿಲೀಸ್ ಡೇಟ್ ಯಾವಾಗ ಎಂಬ ಪ್ರಶ್ನೆಗೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರ ಯಶಸ್ಸು ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ಪೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ ಯಶ್, ಕೆಜಿಎಫ್ ಚಿತ್ರದ ಈ ಯಶಸ್ಸಿಗೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ, ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು. ಮುಂದಿನಭಾಗ ಯಾವಾಗ ರಿಲೀಸ್ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯಶ್ ಚಿತ್ರ ಈಗಷ್ಟೇ ಪ್ರದರ್ಶನ ಕಂಡಿದೆ ಸದ್ಯಕ್ಕೆ ಎರಡನೇ ಭಾಗದ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ಜವಾಬ್ದಾರಿ ಇದೆ ಆದ್ದರಿಂದ ಆ ಬಗ್ಗೆ ಎಲ್ಲವು ಪಕ್ಕ ಆದ್ಮೇಲೆ ಶೂಟಿಂಗ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚಾಪ್ಟರ್ 2 ಬಗ್ಗೆ ಎಲ್ಲವೂ ಸಸೂತ್ರವಾಗಿ ನಡೆದ ಬಳಿಕ ಮುಂದಿನ ನಡೆ ಬಗ್ಗೆ ತಿಳಿಸುತ್ತೇವೆ ಎಂದರು. ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಇದು. ಒಂಚೂರು ಎಲ್ಲೂ ಬೋರು ಹೊಡೆಸಲ್ಲ. ಕ್ಲೈಮ್ಯಾಕ್ಸ್ ಅಂತೂ ಚಿಂದಿ ಗುರು. ಮೈಯಲ್ಲಾ ರೋಮಾಂಚನವಾಗುತ್ತದೆ ಎಂದು ಪ್ರೇಕ್ಷಕರು ಟ್ವಿಟರ್‌ನಲ್ಲಿ ಕೆಜಿಎಫ್ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಕೆಜಿಎಫ್ ಸಿನಿಮಾಗಾಗಿ ಯಶ್ ಎರಡು ವರ್ಷಗಳ ಕಾಲ ವ್ಯಯಿಸಿದ್ದು ಸಾರ್ಥಕ ಅನ್ನಿಸುತ್ತದೆ. ಚಿತ್ರಕಥೆ ಅದ್ಭುತವಾಗಿದೆ, ಮೊದಲರ್ಧ ಸೂಪರ್ ಎಂದು ಕೆಲವು ಹೇಳಿದರೆ. ಇನ್ನೂ ಕೆಲವರು ದ್ವಿತೀಯಾರ್ಧ ಇನ್ನೂ ಸೂಪರ್. ಕ್ಲೈಮ್ಯಾಕ್ಸ್ ಅಂತೂ ಅದ್ಭುತ ಅಂದಿದ್ದಾರೆ. ಇನ್ನೂ ಕೆಲವರು ತೆಲುಗು ಸಿನಿಮಾ ರೀತಿ ಇದೆ ಎಂದು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಾರೆ.

Please follow and like us:
0
http://karnatakatoday.in/wp-content/uploads/2018/12/kgf-chapter-2-rlease-date-1024x576.jpghttp://karnatakatoday.in/wp-content/uploads/2018/12/kgf-chapter-2-rlease-date-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರಕೆಜಿಎಫ್ ಮೊದಲ ಭಾಗವನ್ನು ನೋಡಿ ಸಂಪೂರ್ಣ ಶಾಕ್ ಆದ ಪ್ರೇಕ್ಷಕ ಇದೀಗ ಚಿತ್ರ ಮುಗಿದ ಬಳಿಕ ಎರಡನೇ ಭಾಗ ಯಾವಾಗ ಎನ್ನುವ ಗೊಂದಲದಲ್ಲಿದ್ದಾನೆ. ಇನ್ನು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರಕ್ಕೆ ಪರಭಾಷಾ ನಾಯಕರು ಕೂಡ ವಿಶ್ ಮಾಡಿರುವುದು ವಿಶೇಷ, ಎಲ್ಲಾ ಭಾಷಾ ಅಭಿಮಾನಿಗಳು ಕೂಡ ಚಿತ್ರಕ್ಕೆ ಉತ್ತಮ ರೇಟಿಂಗ್ ನೀಡಿದ್ದು ಚಿತ್ರದ ಅದ್ಬುತ ಮೇಕಿಂಗ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರದ ಚಾಪ್ಟರ್ 2 ಯಾವಾಗ ಅನ್ನೋ...Kannada News