KGF Chapter 2

KGF ಭಾಗ ಒಂದು ಚಿತ್ರ ಬಿಡುಗಡೆಯಾಗಿ ಎಲ್ಲಡೆ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ, KGF ಚಿತ್ರ ನೋಡಿದ ಪ್ರತಿಯೊಬ್ಬರೂ ಚಿತ್ರ ಸೂಪರ್ ಹಿಟ್ ಎಂದು ಹೇಳುತ್ತಿದ್ದಾರೆ.

ಇನ್ನು KGF ಚಿತ್ರ ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು KGF ಚಿತ್ರ ಹಿಂದೆ ಕನ್ನಡದ ಎಲ್ಲಾ ಚಿತ್ರಗಳು ಮಾಡಿದ ದಾಖಲೆಯನ್ನ ಅಳಿಸಿ ಹೊಸ ದಾಖಲೆಯನ್ನ ಸೃಷ್ಟಿ ಮಾಡಿದೆ.

KGF Chapter 2

ಇನ್ನು ಚಿತ್ರವನ್ನ ನೋಡಿ ಹೊರಗೆ ಬಂದ ಪ್ರತಿಯೊಬ್ಬರೂ ಹೊರಗೆ ಬಂದು ಹೇಳುತ್ತಿರುವ ವಿಷಯ ಏನು ಅಂದರೆ KGF ಭಾಗ 2 ಯಾವಾಗ ಬಿಡುಗಡೆಯಾಗುತ್ತದೆ ಎಂದು. ಇನ್ನು ಈ ಪ್ರಶ್ನೆ ಕೇವಲ ಯಶ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ಕನ್ನಡಿಗರಲ್ಲಿಯೂ ಕಾಣುತ್ತಿದೆ, ಸ್ನೇಹಿತರೆ ನಿಮಗೂ ಕೂಡ ಯಾವ ಅನ್ನುವುದ ಕೂತುಹಲ ಇದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಬಂದ ಒಂದು ಮೂಲದ ಪ್ರಕಾರ KGF ಭಾಗ ಎರಡು ಚಿತ್ರದ ಶೂಟಿಂಗ್ ಈಗಾಗಲೇ ಅರ್ಧ ಮುಗಿದಿದ್ದು ಸ್ವಲ್ಪ ದಿನದ ನಂತರ ಯಶ್ ಅವರ ಭಾಗದ ಚಿತ್ರೀಕರಣವನ್ನ ಚಿತ್ರ ತಂಡ ಶುರು ಮಾಡಲಿದೆಯಂತೆ. ಇನ್ನು KGF ಭಾಗ ಎರಡು ಚಿತ್ರೀಕರಣದ ನಂತರ ಯಶ್ ಅವರು ಕಿರಾತಕ 2 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

KGF Chapter 2

ಇನ್ನು ಯಶ್ ಅವರ ಭಾಗದ ಚಿತ್ರೀಕರಣ ಪೂರ್ತಿಯಾಗಿ ಮುಗಿದ ನಂತರ ಇನ್ನುಳಿದ ಭಾಗದ ಚಿತ್ರೀಕರಣವನ್ನ ಮಾಡಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ. ಇನ್ನು ಕಿರಾತಕ 2 ಚಿತ್ರದ ಚಿತ್ರಿಕ್ರನ ಈಗಾಗಲೇ ಅರ್ಧದಷ್ಟು ಮುಗಿದಿದ್ದು 2019 ರ ಮದ್ಯದಲ್ಲಿ ಮೊದಲು ಕಿರಾತಕ 2 ಚಿತ್ರ ಬಿಡುಗಡೆಯಾಗುತ್ತದೆಯಂತೆ.

ಇನ್ನು ಕಿರಾತಕ 2 ಚಿತ್ರದ ಬಿಡುಗಡೆಯ ನಂತರ 2019 ರ ಡಿಸೆಂಬರ್ ನಲ್ಲಿ KGF ಚಾಪ್ಟರ್ 2 ಚಿತ್ರ ಬಿಡುಗಡೆಯಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸ್ನೇಹಿತರೆ ನೀವು ಯಾವ ಚಿತ್ರಕ್ಕಾಗಿ ಕಾಯುತ್ತ ಇದ್ದೀರಾ, ನೀವು KGF ಚಾಪ್ಟರ್ 2 ಚಿತ್ರ ಮೊದಲು ನೋಡಬೇಕಾ ಅಥವಾ ಕಿರಾತಕ 2 ಚಿತ್ರ ಮೊದಲು ನೋಡಬೇಕಾ ಅನ್ನುವುದನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಯಶ್ ಅಭಿಮಾನಿಗೂ ತಲುಪಿಸಿ.

KGF Chapter 2

Please follow and like us:
0
http://karnatakatoday.in/wp-content/uploads/2018/12/KGF-chapter-2-1024x576.jpghttp://karnatakatoday.in/wp-content/uploads/2018/12/KGF-chapter-2-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲKGF ಭಾಗ ಒಂದು ಚಿತ್ರ ಬಿಡುಗಡೆಯಾಗಿ ಎಲ್ಲಡೆ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ, KGF ಚಿತ್ರ ನೋಡಿದ ಪ್ರತಿಯೊಬ್ಬರೂ ಚಿತ್ರ ಸೂಪರ್ ಹಿಟ್ ಎಂದು ಹೇಳುತ್ತಿದ್ದಾರೆ. ಇನ್ನು KGF ಚಿತ್ರ ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು KGF ಚಿತ್ರ ಹಿಂದೆ ಕನ್ನಡದ ಎಲ್ಲಾ ಚಿತ್ರಗಳು ಮಾಡಿದ ದಾಖಲೆಯನ್ನ ಅಳಿಸಿ ಹೊಸ ದಾಖಲೆಯನ್ನ ಸೃಷ್ಟಿ ಮಾಡಿದೆ. ಇನ್ನು ಚಿತ್ರವನ್ನ ನೋಡಿ ಹೊರಗೆ ಬಂದ...Kannada News