KGF ticket bookig in Pakisthana

ಕನ್ನಡ ಸಿನೆಮಾರಂಗದಲ್ಲಿ ರಾಕಿಂಗ್ ಯಶ್ ಅವರ KGF ಸಿನಿಮಾ ಇತಿಹಾಸವನ್ನ ನಿರ್ಮಾಣ ಮಾಡಿದೆ, ರಿಲೀಸ್ ಆದ ದಿನದಿಂದ ಹಿಡಿದು ಇಲ್ಲಿಯವರೆಗೂ KGF ಸಿನಿಮಾದ ಹವಾ ಸ್ವಲ್ಪಾನು ಕಮ್ಮಿ ಆಗಿಲ್ಲ ಅಂತ ಹೇಳಿದರೆ ತಪ್ಪಾಗಲ್ಲ.

200 ಕೋಟಿ ಕ್ಲಬ್ ಸೇರುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ದಾಖಲೆ ಬರೆದ KGF ಸಿನಿಮಾ ಈಗ ಮತ್ತೊಂದು ದಾಖಲೆಯನ್ನ ಬರೆದಿದೆ, ಇನ್ನು ಆ ದಾಖಲೆ ಏನು ಅನ್ನುವುದರ ಬಗ್ಗ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ಪ್ರತಿಯೊಬ್ಬ ಯಶ್ ಅಭಿಮಾನಿಗೆ ತಲುಪಿಸಿ.

KGF ticket bookig in Pakisthana

KGF ಹವಾ ಈಗ ಪಾಕಿಸ್ತಾನದಲ್ಲಿ ಶುರುವಾಗಿದೆ ಅಂತ ಹೇಳಿದರೆ ನೀವು ನಂಬುತ್ತೀರಾ, ಹೌದು KGF ಟ್ರೈಲರ್ ರಿಲೀಸ್ ಆದ ದಿನ ಪಾಕಿಸ್ತಾನದ ಜನರು ಈ ಚಿತ್ರವನ್ನ ನಮ್ಮ ದೇಶದಲ್ಲೂ ಕೂಡ ರಿಲೀಸ್ ಮಾಡಿಯೇ ಎಂದು ಬಾರಿ ಒತ್ತಡವನ್ನ ಹಾಕಿದ್ದರು.

ಇನ್ನು ಸಿನಿಮಾ ರಿಲೀಸ್ ಆದ ದಿನ ಕೆಲವು ಪಾಕಿಸ್ತಾನದ ಜನರು ವಿಡಿಯೋಗಳನ್ನ ಮಾಡಿ ನಾವು KGF ಸಿನಿಮಾ ನೋಡಬೇಕು ಎಂದು ಸೋಶಿಯಲ್ ಮೀಡಿಯಾ ಮೂಲಕ ಮನವಿಯನ್ನ ಮಾಡಿದ್ದರು.

ಇನ್ನು ಇದನ್ನ ಕಂಡ KGF ಚಿತ್ರತಂಡದವರು ಈಗ KGF ಸಿನಿಮಾವನ್ನ ಪಾಕಿಸ್ತಾನದಲ್ಲಿ ಕೂಡ ರಿಲೀಸ್ ಮಾಡಿದ್ದಾರೆ, ಇನ್ನು ಅಷ್ಟೇ ಅಲ್ಲದೆ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಕನ್ನಡದ ಮೊಟ್ಟ ಮೊದಲ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಕೂಡ KGF ಸಿನಿಮಾ ಪಾತ್ರವಾಗಿದೆ. ಇನ್ನು ಪಾಕಿಸ್ತಾನದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದ್ದು ಇಸ್ಲಾಮಾಬಾದ್ ಕ್ಲಬ್ ಬುಕಿಂಗ್ ಸೈಟ್ ನಲ್ಲಿ ನಿನ್ನೆಯಿಂದ ಟಿಕೆಟ್ ಬುಕಿಂಗ್ ಶುರುವಾಗಿದೆ.

KGF ticket booking in Pakisthana

ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳು ಸಾಕಷ್ಟು ಟ್ರೆಂಡಿಂಗ್ ನ್ನ ಪಡೆದುಕೊಳ್ಳುತ್ತದೆ ಅಷ್ಟೇ ಅಲ್ಲದೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಗೆ ಪಾಕಿಸ್ತಾನದಲ್ಲಿ ತುಂಬಾ ಅಭಿಮಾನಿಗಳು ಇದ್ದಾರೆ.

ಇನ್ನು ಮೊನ್ನೆ KGF ಟ್ರೈಲರ್ ನೋಡಿದ ಪಾಕಿಸ್ತಾನದ ಪ್ರಜೆಯೊಬ್ಬ ಇದು ಗ್ರೇಟ್ ಟ್ರೈಲರ್, ಮಾಮೂಲಿ ಸಲ್ಮಾನ್ ಖಾನ್ ಸಿನಿಮಾ ಇದಲ್ಲ ಸಲ್ಮಾನ್ ಸಿನೆಮಾಗೂ ಮೀರಿದ ಸಿನಿಮಾ ಇದು, ನಾನು ಖಂಡಿತ ಈ ಸಿನಿಮಾ ನೋಡುತ್ತೀನಿ ಎಂದು ಟ್ವೀಟ್ ಮಾಡಿಕೊಂಡಿದ್ದ.

ಇನ್ನು ಬಂದಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನದ ಎಲ್ಲಾ ಥಿಯೇಟರ್ ಗಳಲ್ಲಿ ಕೂಡ ಹೌಸ್ ಫುಲ್ ಆಗಿ ಚಿತ್ರ ಪ್ರದರ್ಶನವನ್ನ ಕಾಣುತ್ತಿದೆ, ಒಟ್ಟಾರೆಯಾಗಿ ಬರಿ ಬಾಲಿವುಡ್ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದ್ದ ಪಾಕಿಸ್ತಾವನ್ನ ಈಗ ಕನ್ನಡ ಸಿನಿಮಾ ಬಂದು ಆವರಿಸಿದೆ ಅಂತ ಹೇಳಿದರೆ ತಪ್ಪಾಗಲ್ಲ.

ಒಳ್ಳೆಯ ಸಿನೆಮಾಗೆ ಭಾಷೆಯ ಗಡಿ ಮಾತ್ರ ಅಲ್ಲ ದ್ವೇಷದ ಗಡಿ ಕೂಡ ಇಲ್ಲ ಅನ್ನುವುದನ್ನ KGF ಸಿನಿಮಾ ಸಾಬೀತು ಮಾಡಿದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

KGF ticket bookig in Pakisthana

Please follow and like us:
0
http://karnatakatoday.in/wp-content/uploads/2019/01/KGF-ticket-booking-i-Pakisthana-1024x576.jpghttp://karnatakatoday.in/wp-content/uploads/2019/01/KGF-ticket-booking-i-Pakisthana-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನ್ನಡ ಸಿನೆಮಾರಂಗದಲ್ಲಿ ರಾಕಿಂಗ್ ಯಶ್ ಅವರ KGF ಸಿನಿಮಾ ಇತಿಹಾಸವನ್ನ ನಿರ್ಮಾಣ ಮಾಡಿದೆ, ರಿಲೀಸ್ ಆದ ದಿನದಿಂದ ಹಿಡಿದು ಇಲ್ಲಿಯವರೆಗೂ KGF ಸಿನಿಮಾದ ಹವಾ ಸ್ವಲ್ಪಾನು ಕಮ್ಮಿ ಆಗಿಲ್ಲ ಅಂತ ಹೇಳಿದರೆ ತಪ್ಪಾಗಲ್ಲ. 200 ಕೋಟಿ ಕ್ಲಬ್ ಸೇರುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ದಾಖಲೆ ಬರೆದ KGF ಸಿನಿಮಾ ಈಗ ಮತ್ತೊಂದು ದಾಖಲೆಯನ್ನ ಬರೆದಿದೆ, ಇನ್ನು ಆ ದಾಖಲೆ ಏನು ಅನ್ನುವುದರ ಬಗ್ಗ ಸಂಪೂರ್ಣ ಮಾಹಿತಿಯನ್ನ ನಾವು ಈಗ...Kannada News