ಕುರುಕ್ಷೇತ್ರ ಬಿಡುಗಡೆಗೆ ಮೊದಲೇ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸೆಡ್ಡು ಹೊಡೆಯಲಿದೆ, ಮತ್ತು ಹೆಚ್ಚಿನ ಕಲೆಕ್ಷನ್ ಮಾಡಲಿದೆ ಎಂದು ದೊಡ್ಡ ಮಟ್ಟಿನ ಕೂಗು ಕೇಳಿ ಬಂದಿತ್ತು. ಅದರಂತೆಯೇ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತ್ರಿಡಿಯಲ್ಲಿ ಕೂಡ ಚಿತ್ರ ಇರುವುದರಿಂದ ಹೆಚ್ಚಿನ ಕಲೆಕ್ಷನ್ ಮಾಡುತ್ತದೆ ಎನ್ನಲಾಗಿದೆ. ಚಾಲೆಂಜಿಂಸ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಕುರುಕ್ಷೇತ್ರ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಚಿತ್ರದ ಗಳಿಕೆ ಮೊದಲ ದಿನವೇ ₹ 13 ಕೋಟಿಯಾದರೆ ಎರಡನೇ ದಿನ ₹ 10 ಕೋಟಿ ದಾಟಿದೆ ಎಂದಿದ್ದಾರೆ ಚಿತ್ರದ ವಿತರಕರಾದ ರಾಕ್‍ಲೈನ್ ವೆಂಕಟೇಶ್. ಅದೇ ರೀತಿ ನಾಲಕ್ನೆ ದಿನಕ್ಕೆ 30 ಕೋಟಿ ದಾಟಿದೆ. ಒಟ್ಟಾರೆ ಇದುವರೆಗೆ ಅಂದಾಜು ₹ 35 ಕೋಟಿ ಕಲೆಕ್ಷನ್ ಮಾಡಿದೆಯಂತೆ.

ಗಳಿಕೆಯ ಓಟ ಇದೇ ರೀತಿ ಮುಂದುವರೆದರೆ ‘ಕೆಜಿಎಫ್: ಚಾಪ್ಟರ್ 1’ ನಂತರದ ನೂರು ಕೋಟಿ ಕ್ಲಬ್ ಸೇರುತ್ತಿರುವ ಮತ್ತೊಂದು ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅದೇ ರೀತಿ ಶೀಘ್ರದಲ್ಲೇ ತಮಿಳಿನಲ್ಲೂ ಕುರುಕ್ಷೇತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಮುಂದಿನ ಎರಡು ವಾರಗಳಲ್ಲಿ 100 ರಿಂದ 150 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಚಿತ್ರವನ್ನು ನೀವು ತ್ರಿಡಿಯಲ್ಲಿ ನೋಡಿದರೆ ಮಾತ್ರ ನಿಮಗೆ ಹೆಚ್ಚು ಎಫೆಕ್ಟ್ಸ್ ಬಗ್ಗೆ ತಿಳಿಯಲಿದೆ ಎನ್ನುವುದು ನಮ್ಮ ಅಭಿಪ್ರಾಯ. ಚಿತ್ರಕ್ಕೆ ಎಫೆಕ್ಟ್ಸ್ ನೀಡಿದ ದುರ್ಗಪ್ರಸಾದ್ ಕೇಥಾ ಅವರಿಗೆ 15 ವರ್ಷಗಳ ಅನುಭವದಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಿಗೆ ವಿಷುಯಲ್ ಎಫೆಕ್ಟ್ ಸಂಯೋಜಿಸಿದ್ದಾರೆ. ಇನ್ನು ಕುರುಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನನ್ನ ಜೀವನದ ಬೆಂಚ್ ಮಾರ್ಕ್ ಚಿತ್ರವಾಗಲಿದೆ ಎಂದು ದುರ್ಗಪ್ರಸಾದ್ ಹೇಳಿದ್ದಾರೆ.

ಬಾಲ್ಯದಿಂದಲೂ ನಾನು ಪೌರಾಣಿಕ ಚಿತ್ರಗಳ ಅಭಿಮಾನಿಯಾಗಿದ್ದೇನೆ, ರಾಮಾಯಣ ಮತ್ತು ಮಹಾಭಾರತಗಳನ್ನು ಕೇಳುತ್ತಾ ಬೆಳೆದಿದ್ದು ನನಗೆ ಕುರುಕ್ಷೇತ್ರದಂತಹ ಚಿತ್ರಕ್ಕೆ ನನ್ನ ದೃಷ್ಟಿಯನ್ನು ಕಾರ್ಯಗತಗೊಳಿಸಲು ಅವಕಾಶ ಮಾಡಿಕೊಟ್ಟಿತು ಎಂದು ದುರ್ಗಪ್ರಸಾದ್ ಹೇಳುತ್ತಾರೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಾದ್ಯಂತ ಸುಮಾರು 550 ವೃತ್ತಿಪರ ತಂತ್ರಜ್ಞರನ್ನು ಒಟ್ಟುಗೂಡಿಸಿದರು. ಈ ಚಿತ್ರವನ್ನು 2ಡಿ ಮತ್ತು 3ಡಿಯಲ್ಲಿ ಮಾಡಲಾಗಿದೆ. ಮತ್ತು ನಂತರದ ಆವೃತ್ತಿಯನ್ನು ಕೆಲವೇ ವಾರಗಳ ಹಿಂದೆ ವಿತರಿಸಲಾಯಿತು ಎಂದು ಅವರು ಹೇಳಿದ್ದಾರೆ.

Please follow and like us:
error0
http://karnatakatoday.in/wp-content/uploads/2019/08/kgf-vs-kurukshetra-1024x576.jpghttp://karnatakatoday.in/wp-content/uploads/2019/08/kgf-vs-kurukshetra-150x104.jpgKarnataka Trendingಅಂಕಣಕುರುಕ್ಷೇತ್ರ ಬಿಡುಗಡೆಗೆ ಮೊದಲೇ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸೆಡ್ಡು ಹೊಡೆಯಲಿದೆ, ಮತ್ತು ಹೆಚ್ಚಿನ ಕಲೆಕ್ಷನ್ ಮಾಡಲಿದೆ ಎಂದು ದೊಡ್ಡ ಮಟ್ಟಿನ ಕೂಗು ಕೇಳಿ ಬಂದಿತ್ತು. ಅದರಂತೆಯೇ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತ್ರಿಡಿಯಲ್ಲಿ ಕೂಡ ಚಿತ್ರ ಇರುವುದರಿಂದ ಹೆಚ್ಚಿನ ಕಲೆಕ್ಷನ್ ಮಾಡುತ್ತದೆ ಎನ್ನಲಾಗಿದೆ. ಚಾಲೆಂಜಿಂಸ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಕುರುಕ್ಷೇತ್ರ ಸಿನಿಮಾವನ್ನು...Film | Devotional | Cricket | Health | India