ಹೊಂಬಾಳೆ ಪ್ರೊಡಕ್ಷನ್ಸ್’ ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆಜಿಎಫ್. ಕನ್ನಡ, ಹಿಂದಿ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಬಹುಕೋಟಿ ವೆಚ್ಚದ ಚಿತ್ರದ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿಕೊಂಡಿದೆ. ಹೌದು ದೇಶಾದ್ಯಂತ ಈಗ ಕೆಜಿಎಫ್ ಚಿತ್ರದ ಬಗ್ಗೆ ಭಾರಿ ಕ್ರೇಜ್ ಹುಟ್ಟಿಕೊಂಡಿದೆ ಅದಕ್ಕೆ ಕರಣ ಕೂಡ ಇದೆ. ಪರಭಾಷಾ ಚಿತ್ರಗಳು ಏಕಕಾಲದಲ್ಲಿ ಇಡೀ ದೇಶದಲ್ಲಿ ರಿಲೀಸ್ ಆಗುತ್ತದೆ ಮತ್ತು ಕರ್ನಾಟಕದಲ್ಲಿಯೂ ಕೂಡ ಒಳ್ಳೆಯ ಪ್ರದರ್ಶನ ಕಾಣುತ್ತದೆ ಕಾರಣ ಇಲ್ಲಿ ಕೂಡ ಹಿಂದಿ ತಮಿಳು ತೆಲುಗು ನೋಡುವವರ ಸಂಖ್ಯೆ ಹೆಚ್ಚಿದೆ. ಅವರ ಅಭಿಮಾನಿಗಳು ಕೂಡ ಇಲ್ಲಿದ್ದಾರೆ, ಆದರೆ ಅದೇ ಕನ್ನಡ ಚಿತ್ರ ಬೇರೆ ರಾಜ್ಯಗಳಲ್ಲಿ ರಿಲೀಸ್ ಮಾಡಲು ಹೋದಾಗ ಚಿತ್ರಕ್ಕೆ ಥಿಯೇಟರ್ ಮಾಡಿಕೊಡುವುದೇ ಕಷ್ಟವಾಗಿ ಬಿಡುತ್ತದೆ.

ಒಂದು ವಾರ ಕೂಡ ಚಿತ್ರ ಅಲ್ಲಿ ಪ್ರದರ್ಶನ ಮಾಡಿಸುವುದು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿ ನಡುವೆಯೂ ಕನ್ನಡ ಚಿತ್ರವೊಂದು ದೇಶಾದ್ಯಂತ ಟ್ರೆಂಡ್ ಮಾಡಿದೆ ಎಂದರೆ ನೀವು ನಂಬಲೇಬೇಕಾಗುತ್ತದೆ. ನಿಮಗೆ ಗೊತ್ತಿರಬಹುದು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಹಾಗು ಸಲ್ಮಾನ್ ಜೊತೆಯಾಗಿ ನಟಿಸಿರುವ ಜೀರೋ ಸಿನೆಮಾ ಕೂಡ ಅದೇ ದಿನ ಎಂದರೆ ಕೆಜಿಎಫ್ ಪ್ರದರ್ಶನ ಕಾಣುವ ಡಿಸೆಂಬರ್ ೨೧ ಕ್ಕೆ ಆರಂಭವಾಗಲಿದೆ. ಸಿನೆಮಾ ರೇಟಿಂಗ್ ನೋಡುವಾಗ ವಾರದ ಹಿಂದೆಯಷ್ಟೇ ಜೀರೋ ಸಿನಿಮಾಗಿಂತ ಕೆಜಿಎಫ್ ಟಾಪ್ ರೇಟಿಂಗ್ ಪಡೆದಿತ್ತು.

ಇದನ್ನು ನೋಡಿ ಖಾನ್ ಗಳು ಮಾಡಿದ್ದೇನು ಗೊತ್ತಾ. ಒಂದು ಕನ್ನಡ ಸಿನೆಮಾ ಎಷ್ಟೊಂದು ಸೌಂಡ್ ಮಾಡುತ್ತಿರುವುದನ್ನು ಕಂಡು ತಬ್ಬಿಬ್ಬಾದ ಇವರು ಕೆಜಿಎಫ್ ಟ್ರೇಲರ್ ರಿಲೀಸ್ ಆಗೋ ಹತ್ತು ದಿನದ ಮೊದಲೇ ತಮ್ಮ ಟ್ರೇಲರ್ ಬಿಡುಗಡೆ ಮಾಡಿದ್ದಾರೆ ಇನ್ನು ಇವತ್ತು ಯಶ್ ನಟಿಸಿದ ಕೆಜಿಎಫ್ ಸಿನಿಮಾದ ಟ್ರೇಲರ್ ಮಧಾಹ್ನ ಬಿಡುಗಡೆಯಾಗಲಿದೆ.

ಅದೇನೇ ಇರಲಿ ಕನ್ನಡ ಸಿನೆಮಾ ಬಾಲಿವುಡ್ ಮಂದಿಗೆ ಸೆಡ್ಡು ಹೊಡೆದಿರುವುದು ಖುಷಿ ತಂದಿದೆ. ಬಹು‌ನಿರೀಕ್ಷಿತ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಭಾರತೀಯ ಮಾಧ್ಯಮಗಳೆಲ್ಲ ಬಂದೆರಗಲಿವೆ. ಈ ಕಾರ್ಯಕ್ರಮ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆಯಾಗಿ ಮೂಡಿಬರುವಂತಾಗಲು ಹೊಂಬಾಳೆ ಸಂಸ್ಥೆ ಅಣಿಗೊಂಡಿದೆ.

Please follow and like us:
0
http://karnatakatoday.in/wp-content/uploads/2018/11/KGF-khan-news-1024x576.pnghttp://karnatakatoday.in/wp-content/uploads/2018/11/KGF-khan-news-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರಹೊಂಬಾಳೆ ಪ್ರೊಡಕ್ಷನ್ಸ್' ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆಜಿಎಫ್. ಕನ್ನಡ, ಹಿಂದಿ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಬಹುಕೋಟಿ ವೆಚ್ಚದ ಚಿತ್ರದ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿಕೊಂಡಿದೆ. ಹೌದು ದೇಶಾದ್ಯಂತ ಈಗ ಕೆಜಿಎಫ್ ಚಿತ್ರದ ಬಗ್ಗೆ ಭಾರಿ ಕ್ರೇಜ್ ಹುಟ್ಟಿಕೊಂಡಿದೆ ಅದಕ್ಕೆ ಕರಣ ಕೂಡ ಇದೆ. ಪರಭಾಷಾ ಚಿತ್ರಗಳು ಏಕಕಾಲದಲ್ಲಿ ಇಡೀ ದೇಶದಲ್ಲಿ ರಿಲೀಸ್ ಆಗುತ್ತದೆ...Kannada News