ಗುರು ಗ್ರಹವನ್ನು ಬ್ರಹಸ್ಪತಿ ಎಂದೂ ಕರೆಯಲಾಗುತ್ತದೆ, ಈ ಗ್ರಹವು ಮನುಷ್ಯನ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆಧ್ಯಾತ್ಮಿಕವಾಗಿಯೂ ಗುರುತಿಸಲ್ಪಡುವ ಈ ಗ್ರಹವು ಭಕ್ತಿ, ಪೂಜೆ ಮತ್ತು ಪ್ರಾರ್ಥನೆಯ ಸಂಕೇತವಾಗಿದೆ. ವ್ಯಕ್ತಿಯು ಬದುಕಿನಲ್ಲಿ ಉನ್ನತಿ ಕಾಣಲು ಪ್ರಯತ್ನದ ಜೊತೆಗೆ ಸ್ವಾಪ ಮಟ್ಟಿಗೆ ಗುರುಬಲದ ಅವಶ್ಯಕತೆಯೂ ಬೇಕು, ಹೀಗಾಗಿ ಗುರುಬಲ ಹೊಂದಿರುವವರಿಗೆ ಬಯಸಿದ್ದೆಲ್ಲ ಬಹಳ ಬೇಗನೆ ಸಿಗುತ್ತದೆ. ಸಾಮಾನ್ಯವಾಗಿ ಹಲವಾರು ಜನ ತಾವು ಬೇಡಿದ್ದೆಲ್ಲ ಸಿಗಲಿಲ್ಲ ಎಂದು ಭಗವಂತನಲ್ಲಿ ಮರುಗುತ್ತಾರೆ, ಆದರೆ ಇನ್ನು ಕೆಲವರು ಚಿಕ್ಕ ಪ್ರಯತ್ನ ಮಾಡಿದರೂ ಕೂಡ ದೊಡ್ಡ ಯಶಸ್ಸು ಪಡೆಯುತ್ತಾರೆ ಇದೆಲ್ಲವೂ ಅವರವರ ಯೋಗಕ್ಕೆ ಸಂಬಂಧಪಟ್ಟಿದ್ದು. ಸಾಮಾನ್ಯವಾಗಿ ಈ ರೀತಿಯ ಯೋಗ ಪಡೆದಿರುವ ಕೆಲ ರಾಶಿಗಳ ಬಗ್ಗೆ ತಿಳಿಸುತ್ತೇವೆ ನೋಡಿ, ಜನಿಸುವಾಗಲೇ ರಾಜಯೋಗ ಪಡೆದುಕೊಂಡು ಬಂದಿರುವ ಈ ರಾಶಿಗಳ ವ್ಯಕ್ತಿಗಳು ಹೇಗಿರುತ್ತಾರೆ ಅವರ ದಿನಚರಿ ಏನು ಎನ್ನುವುದರ ಬಗ್ಗೆ ಪಕ್ಷಿನೋಟ ನೋಡೋಣ ಬನ್ನಿ.

ವೃಷಭ ರಾಶಿಯವರು ಸಾಮಾನ್ಯವಾಗಿ ಯೋಗ ಪುರುಷರು ಇವರಿಗೆ ಬಯಸಿದ್ದೆಲ್ಲ ಶೀಘ್ರವೇ ಸಿಗುವ ಯೋಗ ಹೆಚ್ಚು, ಸಾಮಾನ್ಯವಾಗಿ ಉದ್ಯೋಗದಲ್ಲಿ ಇವರು ಎಂಜಿನಿಯರ್, ವೈದ್ಯರು, ವಕೀಲರು, ವ್ಯವಸಾಯದಲ್ಲಿ ಬಹಳ ಪರಿಣತರೂ ಆಗುತ್ತಾರೆ, ಇವರಿಗೆ ಸರಿಯಾದ ಸಮಯಕ್ಕೆ ಮದುವೆಯಾಗುತ್ತದೆ ಮತ್ತು ಸುಂದರವಾದ ಪತ್ನಿ ಮತ್ತು ಮಕ್ಕಳನ್ನು ಹೊಂದುವರು, ಪತ್ನಿ ಮತ್ತು ಮಕ್ಕಳಲ್ಲಿ ಹೆಚ್ಚಿನ ಪ್ರೀತಿ ಇಟ್ಟಿರುತ್ತಾರೆ. ಮಕರ ರಾಶಿಯವರಿಗೂ ಕೂಡ ಈ ಯೋಗವಿದೆ, ಇವರಿಗೆ ಸಂಚಾರದಲ್ಲಿ ಅಭಿರುಚಿಯೂ, ಧರ್ಮದಲ್ಲಿ ಆಸಕ್ತಿಯೂ ಇರುತ್ತದೆ ಮತ್ತು ಇವರು ಗಣ್ಯರಲ್ಲಿ ವಿರೋಧ ಕಟ್ಟಿಕೊಳ್ಳುತ್ತಾರೆ ಹಾಗೆ ಇವರು ಉಪವಾಸ ಮಾಡುವುದರಲ್ಲಿ ಆಸಕ್ತಿ ಹೊಂದುತ್ತಾರೆ. ತುಲಾ ಲಗ್ನದಲ್ಲಿ ಹುಟ್ಟಿದವರ ಆಯಸ್ಸು ಸುದೀರ್ಘವಾಗಿರುತ್ತದೆ, ದೇಹ ಸುಂದರವಾಗಿರುತ್ತದೆ. ತಮ್ಮ ಕೆಲಸದಲ್ಲಿ ನಿಷ್ಠೆ ಇರುತ್ತದೆ ಮತ್ತು ಮೂಗು ಉದ್ದವಾಗಿರುತ್ತದೆ.

December Jyothishya

ಸಿಂಹ ರಾಶಿಯವರು ದೈವ ಭಕ್ತಿಯುಳ್ಳವರು, ನಡೆನುಡಿಗಳಿಂದ ಜನರಿಗೆ ಉಪಕಾರ ಮಾಡುವ ಮನೋಭಾವವುಳ್ಳವರು. ಅಂದುಕೊಂಡ ಕೆಲಸ ಆಗುವವರೆಗೂ ಹಾಗೂ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುವರು. ಇವರು ಅಲೋಚನೆ ಮಾಡಿ ಯಾವುದೇ ಕೆಲಸಗಳನ್ನು ಮಾಡುತ್ತಾರೆ ಮತ್ತು ಪರೋಪಕಾರಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧ. ಈ ಲಗ್ನದವರು ಬಹಳ ಅಂದ ಚಂದದ ಉಡುಪು ಧರಿಸುತ್ತಾರೆ, ಯಾವಾಗಲೂ ಸುಗಂಧ ದ್ರವ್ಯಗಳನ್ನು ಉಪಯೋಗಿಸುತ್ತಾರೆ ಮತ್ತು ಆಭರಣಗಳನ್ನೂ ಆಸಕ್ತಿಯಿಂದ ಧರಿಸುತ್ತಾರೆ. ಧನು ರಾಶಿಯವರು ಕೂಡ ಪ್ರಯತ್ನ ಪಡುವಲ್ಲಿ ನಿಷ್ಠೆ ಅನುಸರಿಸುತ್ತಾರೆ, ಹಠವಾದಿ ಆಗಿರುತ್ತಾರೆ, ಅರ್ಧಕ್ಕೆ ಯಾವ ಕೆಲಸವನ್ನು ಬಿಡುವುದಿಲ್ಲ.

ನದಿ, ಸರೋವರ ಮುಂತಾದ ಜಾಗಗಳು ಪ್ರಿಯವಾದವುಗಳಾಗಿರುತ್ತವೆ. ಗಲಾಟೆ, ತಂಟೆ, ತಕರಾರಿಗೆ ಹೋಗುವುದಿಲ್ಲ, ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಇವರು ತಮ್ಮ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳುತ್ತಾರೆ, ಇವರು ಬಂಧು ವರ್ಗದವರೊಂದಿಗೆ ಅನ್ಯೋನ್ಯ ಪ್ರೀತಿಯಿಂದ ಇದ್ದು, ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿರುತ್ತಾರೆ. ಈ ಎಲ್ಲ ರಾಶಿಗಳಿಗೂ ಈ ವರ್ಷದ ಅಂತ್ಯದಲ್ಲಿ ಕೂಡ ಉತ್ತಮ ಫಲವಿದೆ, ಮುಂದಿನ ತಿಂಗಳು ಆರ್ಥಿಕ ಲಾಭವನ್ನು ಪಡೆಯುವ ಉತ್ತಮ ಅವಕಾಶಗಳು ಪಡೆಯಬಹುದು, ಆದರೆ ಈ ತಿಂಗಳ ಮೊದಲಾರ್ಧದಲ್ಲಿ ಪರಿಸ್ಥಿತಿ ಒತ್ತಡದಿಂದ ಕೂಡಿರುತ್ತದೆ ಮತ್ತು ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿ ಉಳಿಯುತ್ತವೆ. ಆದ್ದರಿಂದ ದ್ವಿತೀಯಾರ್ಧದಲ್ಲಿ ಹಣವನ್ನು ಸಾಧಿಸಲು ಪೂರ್ಣ ಪ್ರಯತ್ನ ಮಾಡಿ ಇದರಿಂದ ನೀವು ಪೂರ್ಣ ಲಾಭ ಪಡೆಯುತ್ತೀರಿ.

December Jyothishya

Please follow and like us:
error0
http://karnatakatoday.in/wp-content/uploads/2019/11/December-Jyothishya-1-1024x576.jpghttp://karnatakatoday.in/wp-content/uploads/2019/11/December-Jyothishya-1-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಗುರು ಗ್ರಹವನ್ನು ಬ್ರಹಸ್ಪತಿ ಎಂದೂ ಕರೆಯಲಾಗುತ್ತದೆ, ಈ ಗ್ರಹವು ಮನುಷ್ಯನ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆಧ್ಯಾತ್ಮಿಕವಾಗಿಯೂ ಗುರುತಿಸಲ್ಪಡುವ ಈ ಗ್ರಹವು ಭಕ್ತಿ, ಪೂಜೆ ಮತ್ತು ಪ್ರಾರ್ಥನೆಯ ಸಂಕೇತವಾಗಿದೆ. ವ್ಯಕ್ತಿಯು ಬದುಕಿನಲ್ಲಿ ಉನ್ನತಿ ಕಾಣಲು ಪ್ರಯತ್ನದ ಜೊತೆಗೆ ಸ್ವಾಪ ಮಟ್ಟಿಗೆ ಗುರುಬಲದ ಅವಶ್ಯಕತೆಯೂ ಬೇಕು, ಹೀಗಾಗಿ ಗುರುಬಲ ಹೊಂದಿರುವವರಿಗೆ ಬಯಸಿದ್ದೆಲ್ಲ ಬಹಳ ಬೇಗನೆ ಸಿಗುತ್ತದೆ. ಸಾಮಾನ್ಯವಾಗಿ ಹಲವಾರು ಜನ ತಾವು ಬೇಡಿದ್ದೆಲ್ಲ ಸಿಗಲಿಲ್ಲ ಎಂದು ಭಗವಂತನಲ್ಲಿ ಮರುಗುತ್ತಾರೆ,...Film | Devotional | Cricket | Health | India