ಸ್ನೇಹಿತರೆ ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ವೀಕ್ಷಣೆ ಮಾಡುತ್ತಾರೆ, ಆರಂಭದಲ್ಲಿ ಸ್ವಲ್ಪ ಮಂಕಾಗಿದ್ದ ಬಿಗ್ ಬಾಸ್ ಈಗ ರೋಚಕ ಹಂತವನ್ನ ತಲುಪಿದೆ. ಮೊನ್ನೆ ಮೊನ್ನೆ ಆರಂಭ ಆಯಿತು ಅನ್ನುವ ಹಾಗೆ ಇದ್ದ ಬಿಗ್ ಬಾಸ್ ಸೀಸನ್ 7 ಆರಂಭ ಆಗಿ 14 ವಾರಗಳು ಕಳೆದಿದ್ದು ತುಂಬಿ ತುಳುಕುತ್ತಿದ್ದ ಮನೆ ಈಗ ಖಾಲಿ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಆಟಗಳು ತುಂಬಾ ರೋಚಕವಾಗಿದ್ದು ಈ ಭಾರಿ ಬಿಗ್ ಬಾಸ್ ವಿನ್ನರ್ ಯಾರಾಗುತ್ತಾರೆ ಎಂದು ಊಹೆ ಮಾಡುವುದು ಕಷ್ಟ ಆಗಿದೆ, ಇನ್ನು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಇದ್ದ ಕಾರಣ ಮೊದಲನೆಯದಾಗಿ ಕಿಶನ್ ಎಲಿಮಿನೇಷನ್ ಆಗಿ ತಮ್ಮ 98 ದಿನಗಳ ಬಿಗ್ ಬಾಸ್ ಮನೆಯಲ್ಲಿನ ಆಟವನ್ನ ಮುಗಿಸಿ ಮನೆಯಿಂದ ಆಚೆ ಬಂದಿದ್ದಾರೆ.

ಇಷ್ಟು ಲೋವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಕಿಶನ್ ಮನೆಯಲ್ಲಿನ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು, ಇನ್ನು ಕಿಶನ್ ಅವರು ತನ್ನ ಅಮೋಘವಾದ ಆಟದ ಮೂಲಕ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಕಿಶನ್ ಪ್ರಬಲ ಸ್ಪರ್ದಿಯಾಗಿದ್ದು ಫೈನಲ್ ಗೆ ಪ್ರವೇಶವನ್ನ ಪಡೆಯದೇ ಮನೆಯಿಂದ ಹೊರಗೆ ಬಂದಿದ್ದು ಕಿಶನ್ ಅಭಿಮಾನಿಗಳಿಗೆ ಬೇಸರವನ್ನ ತಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. 98 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಿಶನ್ ಅವರು ಬಿಗ್ ಬಾಸ್ ಕಡೆಯಿಂದ ತುಂಬಾ ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

Kishan Salary in Big Boss

ಹಾಗಾದರೆ ಬಿಗ್ ಬಾಸ್ ಮನೆಯಿಂದ ತನ್ನ ಆಟವನ್ನ ಮುಗಿಸಿ ಮನೆಯಿಂದ ಆಚೆ ಬಂಡ ಕಿಶನ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.  ಹೌದು ಬಿಗ್ ಬಾಸ್ ಮನೆಯಿಂದ ಹೊರಬಂದ ಕಿಶನ್ ಅವರಿಗೆ ವಾರಕ್ಕೆ 25 ಸಾವಿರ ರೂಪಾಯಿಯಂತೆ 14 ವಾರಗಳ ಕಾಲ ಬಾಗ್ ಬಾಸ್ ಮನೆಯಲ್ಲಿ ಇದ್ದ ಕಿಶನ್ ಅವರಿಗೆ ಸುಮಾರು 3.50 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಆಶ್ಚರ್ಯ ಪಡುವ ವಿಚಾರ ಏನು ಅಂದರೆ ಮುಂದಿನ ದಿನಗಳಲ್ಲಿ ಕಲರ್ಸ್ ಕನ್ನಡದಲ್ಲಿ ಮೂಡಿಬರುವ ಕಾರ್ಯಕ್ರಮಗಳಲ್ಲಿ ಕೂಡ ಕಿಶನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ಕಿಶನ್ ಅವರು ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ಕೆಲವು ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದು ಅದೂ ಯಾವ ಶೋ ಎಂದು ನಾವು ಕಾದುನೋಡಬೇಕಾಗಿದೆ. ಇನ್ನು ಕಿಶನ್ ಅವರು ಆಸೆ ಪಟ್ಟಂತೆ ಸುದೀಪ್ ಅವರು ಎಲಿಮಿನೇಷನ್ ಸಮಯದಲ್ಲಿ ತಮ್ಮ ಜಾಕೆಟ್ ತಗೆದು ಕಿಶನ್ ಅವರಿಗೆ ಕೊಟ್ಟಿದ್ದಾರೆ. ಇನ್ನು ಕಿಶನ್ ಅವರು ಕೊನೆಯ ದಿನಗಳಲ್ಲಿ ಆಟವನ್ನ ಸರಿಯಾಗಿ ಆಡದೆ ಇರುವುದು ಮತ್ತು ಜನರಿಂದ ಕಿಶನ್ ಅವರಿಗೆ ಕಡಿಮೆ ಮತ ಬಿದ್ದ ಕಾರಣ ಕಿಶನ್ ಅವರು ಈ ವಾರ ಮನೆಯಿಂದ ಆಚೆ ಬಂದಿದ್ದಾರೆ, ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Kishan Salary in Big Boss

Please follow and like us:
error0
http://karnatakatoday.in/wp-content/uploads/2020/01/Kishan-Salary-in-Big-Boss-1024x576.jpghttp://karnatakatoday.in/wp-content/uploads/2020/01/Kishan-Salary-in-Big-Boss-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ವೀಕ್ಷಣೆ ಮಾಡುತ್ತಾರೆ, ಆರಂಭದಲ್ಲಿ ಸ್ವಲ್ಪ ಮಂಕಾಗಿದ್ದ ಬಿಗ್ ಬಾಸ್ ಈಗ ರೋಚಕ ಹಂತವನ್ನ ತಲುಪಿದೆ. ಮೊನ್ನೆ ಮೊನ್ನೆ ಆರಂಭ ಆಯಿತು ಅನ್ನುವ ಹಾಗೆ ಇದ್ದ ಬಿಗ್ ಬಾಸ್ ಸೀಸನ್ 7 ಆರಂಭ ಆಗಿ 14 ವಾರಗಳು ಕಳೆದಿದ್ದು ತುಂಬಿ ತುಳುಕುತ್ತಿದ್ದ ಮನೆ ಈಗ ಖಾಲಿ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಆಟಗಳು ತುಂಬಾ ರೋಚಕವಾಗಿದ್ದು...Film | Devotional | Cricket | Health | India