ಕೇವಲ ಭಾರತ ಮಾತ್ರವಲ್ಲದೆ ವಿಶ್ವಕಂಡ ಅತಿ ಶ್ರೇಷ್ಠ ಕ್ರಿಕೆಟ್ ಆಟಗಾರ ಭಾರತದ ಸಚಿನ್ ತೆಂಡೂಲ್ಕರ್, ಕೇವಲ ಆಟಕ್ಕೆ ಮಾತ್ರವಲ್ಲದೆ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಸಚಿನ್ ಭಾರತದ ಸವ್ಯಸಾಚಿ ಆಟಗಾರ ಎನಿಸಿಕೊಂಡಿದ್ದಾರೆ. ಜಗತ್ತು ಕಂಡ ಹತ್ತು ಹಲವು ದಾಖಲೆಗಳಿಗೆ ಮೊದಲಿಗ ನಮ್ಮ ತೆಂಡೂಲ್ಕರ್. ಭಾರತದ ದೇಶದಲ್ಲಿ ಕ್ರಿಕೆಟ್ ಎಷ್ಟೊಂದು ಪ್ರಸಿದ್ದಿ ಅನ್ನುವುದು ನಮಗೆಲ್ಲ ತಿಳಿದೇ ಇದೆ. ಇಲ್ಲಿ ಕ್ರಿಕೆಟ್ ಒಂದು ಧರ್ಮ ಎಂದು ಭಾವಿಸಿದರೆ ಸಚಿನ್ ಆ ಧರ್ಮಕ್ಕೆ ದೇವರು. ಇನ್ನು ಬದಲಾದ ಕಾಲಘಟ್ಟದಲ್ಲಿ ಸಚಿನ್ ಈಗ ನಿವೃತ್ತಿ ಪಡೆದು ಬೇರೆ ಬೇರೆ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಾರೆ.

ಸದ್ಯಕ್ಕೆ ಈಗ ವಿಶ್ವ ಕ್ರಿಕೆಟ್ ನಲ್ಲಿ ಭಾರತದ ಮತ್ತೊಬ್ಬ ದೈತ್ಯ ಪ್ರತಿಭೆ ವಿರಾಟ್ ಕೊಹ್ಲಿಯ ಅಬ್ಬರ ಜೋರಾಗಿದೆ. ಸಚಿನ್ ದಾಖಲೆಯನ್ನು ಒಂದೊಂದಾಗಿ ಪುಡಿ ಮಾಡುತ್ತಿರುವ ಈ ನಾಯಕ ಇದೀಗ ವಿಶ್ವ ಕ್ರಿಕೆಟ್ ನ ಜಗದೇಕ ಮಲ್ಲ. ಹೌದು ಸಚಿನ್ ಹಾಗು ಕೊಹ್ಲಿಯನ್ನು ಸಮದೂಗಿಸುವುದು ಸರಿಯಾದ ಮಾತಲ್ಲ ಆದರೂ ಕೂಡ ಹಲವು ದಾಖಲೆಗಳಲ್ಲಿ ಕೊಹ್ಲಿ ಸಚಿನ್ ಅವರನ್ನು ಸರಿದೂಡಲಿದ್ದಾರೆ.

ಶತಕಗಳ ಶತಕ ಹಾಗು ಅತಿ ಹೆಚ್ಚು ರನ್ ಗಳಿಕೆ, ಅತಿ ಹೆಚ್ಚು ಮ್ಯಾನ್ ಆ ದಿ ಮ್ಯಾಚ್ ಹೀಗೆ ಇವುಗಳನ್ನೆಲ್ಲ ಕೊಹ್ಲಿ ಬ್ರೇಕ್ ಮಾಡಲಿದ್ದಾರೆ ಎನ್ನುತ್ತೆ ಅಂಕಿ ಅಂಶ. ಭಾರತ ಕ್ರಿಕೆಟ್‌ನಲ್ಲಿ ಒಂದು ಕಾಲದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಸಾಲಿನಲ್ಲಿ ಇದೀಗ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಗುತ್ತಿದ್ದಾರೆ. ಸಚಿನ್‌ ಅವರ ಹಲವು ದಾಖಲೆಗಳನ್ನು ಈಗಾಗಲೇ ಕಿಂಗ್‌ ಕೊಹ್ಲಿ ಮುರಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಅವರು ಈಗಿನ ತಲೆಮಾರಿನಲ್ಲಿ ವಿರಾಟ್‌ ಕೊಹ್ಲಿ ಒಬ್ಬ ಪ್ರಬುದ್ಧ ಬ್ಯಾಟ್ಸ್‌ಮನ್‌. ಅವರು ದೀರ್ಘಾವಧಿ ಸ್ಥಿರ ಬ್ಯಾಟಿಂಗ್‌ ಮಾಡುವ ಆಟಗಾರರಾಗಿದ್ದು, ಸಚಿನ್‌ ತೆಂಡೂಲ್ಕರ್‌ ಅವರ ಇನ್ನೂ ಹಲವು ದಾಖಲೆಗಳನ್ನು ಟೀಮ್‌ ಇಂಡಿಯಾ ನಾಯಕ ಮುರಿಯಲಿದ್ದಾರೆಂದು ವೀರು ಭವಿಷ್ಯ ನುಡಿದ್ದಾರೆ. ಆದರೆ ಎಲ್ಲ ದಾಖಲೆಗಳನ್ನು ಕೊಹ್ಲಿ ಮುರಿದರೂ ಕೂಡ ಈ ಒಂದು ದಾಖಲೆಯನ್ನು ಮುರಿಯಲು ಅಸಾಧ್ಯ ಎನ್ನಲಾಗಿದೆ.

ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ 200 ಪಂದ್ಯಗಳನ್ನು ಆಡಿದ್ದು ಈ ದಾಖಲೆಯನ್ನು ಯಾರು ಸಹ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸದ್ಯ 77 ಪಂದ್ಯಗಳನ್ನು ಮಾತ್ರ ಆಡಿದ್ದು ಸಚಿನ್ ಅವರ ಈ ಒಂದು ದಾಖಲೆಯನ್ನು ಮುರಿಯುವುದು ಕಷ್ಟ ಎಂದು ವಿರೇಂದ್ರ್ ಸೆಹ್ವಾಗ್ ಹೇಳಿದ್ದಾರೆ. ಕೊಹ್ಲಿ ಫಿಟ್ನೆಸ್ ನಲ್ಲಿ ಸಾಕಷ್ಟು ಪಳಗಿದ್ದರೂ ಕೂಡ ಈಗಿನ ಸ್ಪರ್ಧಾತ್ಮಕ ಘಟ್ಟದಲ್ಲಿ ಇನ್ನೂರು ಟೆಸ್ಟ್ ಆಡುವುದು ಸುಲಭವಲ್ಲ.

Please follow and like us:
error0
http://karnatakatoday.in/wp-content/uploads/2019/08/kohli-cannot-1024x576.jpghttp://karnatakatoday.in/wp-content/uploads/2019/08/kohli-cannot-150x104.jpgKarnataka Trendingಅಂಕಣಕೇವಲ ಭಾರತ ಮಾತ್ರವಲ್ಲದೆ ವಿಶ್ವಕಂಡ ಅತಿ ಶ್ರೇಷ್ಠ ಕ್ರಿಕೆಟ್ ಆಟಗಾರ ಭಾರತದ ಸಚಿನ್ ತೆಂಡೂಲ್ಕರ್, ಕೇವಲ ಆಟಕ್ಕೆ ಮಾತ್ರವಲ್ಲದೆ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಸಚಿನ್ ಭಾರತದ ಸವ್ಯಸಾಚಿ ಆಟಗಾರ ಎನಿಸಿಕೊಂಡಿದ್ದಾರೆ. ಜಗತ್ತು ಕಂಡ ಹತ್ತು ಹಲವು ದಾಖಲೆಗಳಿಗೆ ಮೊದಲಿಗ ನಮ್ಮ ತೆಂಡೂಲ್ಕರ್. ಭಾರತದ ದೇಶದಲ್ಲಿ ಕ್ರಿಕೆಟ್ ಎಷ್ಟೊಂದು ಪ್ರಸಿದ್ದಿ ಅನ್ನುವುದು ನಮಗೆಲ್ಲ ತಿಳಿದೇ ಇದೆ. ಇಲ್ಲಿ ಕ್ರಿಕೆಟ್ ಒಂದು ಧರ್ಮ ಎಂದು ಭಾವಿಸಿದರೆ ಸಚಿನ್ ಆ ಧರ್ಮಕ್ಕೆ ದೇವರು....Film | Devotional | Cricket | Health | India