ಕ್ರಿಕೆಟ್ ಪಂದ್ಯವೇ ಹಾಗೆ ಇಲ್ಲಿ ಆಟಗಾರರು ಮಾಡುವ ಸಣ್ಣ ತಪ್ಪನ್ನು ಕೂಡ ಅಭಿಮಾನಿಗಳು ಎಂದು ಮರೆಯೋದಿಲ್ಲ ಎಲ್ಲವನ್ನು ನೆನಪಿನಲ್ಲೇ ಇಟ್ಟುಕೊಂಡಿರುತ್ತಾರೆ. ಆದರೆ ಎಲ್ಲವನ್ನು ಮರೆತು ಆಡುವುದೇ ನಿಜವಾದ ಸ್ಪರ್ಧಾತ್ಮಕ ಆಟ ಎಂದು ಕೊಹ್ಲಿ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು. ಇಷ್ಟಕ್ಕೂ ಆಸ್ಟ್ರೇಲಿಯಾ ಹಾಗು ಭಾರತ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಅಂದು ನಡೆದ ಈ ಘಟನೆ ಎಲ್ಲರ ಗಮನ ಸೆಳೆಯಿತು. ಕೊಹ್ಲಿ ಮಾಡಿದ ಕೆಲಸಕ್ಕೆ ಹಲವಾರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಒಂದು ವರ್ಷದ ನಿಷೇಧವನ್ನು ಶಿಕ್ಷೆಯನ್ನು ಎದುರಿಸಿರುವ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಆಸ್ಟ್ರೇಲಿಯಾದ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿರುವ ಸ್ಮಿತ್ ಹಾಗೂ ವಾರ್ನರ್‌ ಕಮ್‌ಬ್ಯಾಕ್ ನಿರೀಕ್ಷಿಸಿದಷ್ಟು ಸಿಹಿಯಾಗಿರಲಿಲ್ಲ. ಅಭ್ಯಾಸ ಪಂದ್ಯದ ವೇಳೆಯಲ್ಲೇ ಇಂಗ್ಲೆಂಡ್ ಅಭಿಮಾನಿಗಳು ಮೋಸಗಾರ ಎಂದು ಜರೆದದ್ದರು.

ಇದೀಗ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಂದ್ಯದಲ್ಲೂ ಇದಕ್ಕೆ ಸಮಾನವಾದ ಅನುಭವ ಎದುರಾಗಿದೆ. ಗ್ಯಾಲರಿಯಲ್ಲಿ ನೆರೆದಿದ್ದ ಭಾರತೀಯ ಅಭಿಮಾನಿಗಳ ಪೈಕಿ ಕೆಲವರು ಚೀಟರ್ ಚೀಟರ್ ಎಂದು ಜೋರಾಗಿ ಕಿರುಚಾಡಿದ್ದರು. ಈ ವೇಳೆಯಲ್ಲಿ ಕ್ರೀಸಿನಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಕ್ಷಣವೇ ಗ್ಯಾಲರಿಯತ್ತ ಸನ್ನೆ ಮಾಡಿ ಸ್ಮಿತ್‌ ವಿರುದ್ಧ ಮೋಸಗಾರ ಎಂದು ತೆಗಳುವುದನ್ನು ನಿಲ್ಲಿಸುವಂತೆ ಕೋರಿದರು.

ಇದರ ಬದಲು ಟೀಮ್ ಇಂಡಿಯಾಗೆ ಜೈಕಾರ ಹಾಕುವಂತೆ ಸೂಚಿಸಿದರು. ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿಯನ್ನು ಗಮನಿಸಿದ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದರು. ಪ್ರಸ್ತುತ ವಿರಟ್ ಕೊಹ್ಲಿ ಮೆರಿದಿರುವ ಕ್ರೀಡಾಸ್ಫೂರ್ತಿಗೆ ವ್ಯಾಪಕ ಮನ್ನಣೆ ದೊರಕುತ್ತಿದೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧವನ್ನು ಶಿಕ್ಷೆಯನ್ನು ಎದುರಿಸಿರುವುದು ಇದೀಗ ಇತಿಹಾಸ. ಹಳೆಯ ಪ್ರಕರಣ ಇನ್ನು ಹಚ್ಚ ಹಸಿರಾಗಿರುವಾಗಲೇ ಮಗದೋರ್ವ ಆಸೀಸ್ ಆಟಗಾರ ಬಾಲ್ ಟ್ಯಾಂಪರಿಂಗ್ ಮಾಡಿರುವುದರ ಬಗ್ಗೆ ಬಲವಾದ ಅನುಮಾನ ಮೂಡಿದೆ.

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಾಂಪಾ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸದಿದ್ದಾರೆಂದು ಟ್ವಿಟರ್‌ನಲ್ಲಿ ಬಲವಾದ ಆರೋಪಗಳು ಕೇಳಿಬರುತ್ತಿದೆ.  ಈ ಸಂಬಂಧ ಸಾಲು ಸಾಲು ಟ್ವೀಟ್‌ಗಳು ಹರಿದಾಡುತ್ತಿದೆ.

ಪದೇ ಪದೇ ತಮ್ಮ ಪಾಕೆಟ್‌ಗೆ ಕೈಯನ್ನು ಹಾಕುತ್ತಿದ್ದ ಜಾಂಪಾ ಕರವಸ್ತ್ರದಿಂದ ಬಾಲನ್ನು ಉಜ್ಜುವ ಪ್ರಯತ್ನ ಮಾಡುತ್ತಿದ್ದರು. ಸ್ಮಿತ್ ಹಾಗೂ ವಾರ್ನರ್ ಪ್ರಕರಣಕ್ಕೆ ಇದು ಸಾಮತ್ಯೆಯನ್ನು ಪಡೆದಿರುವುದು ಗಮನಾರ್ಹವೆನಿಸುತ್ತದೆ. ಹಿಂದಿನ ಪ್ರಕರಣದಲ್ಲಿ ಪಾಕೆಟ್‌ನಲ್ಲಿದ್ದ ಸ್ಯಾಂಡ್ ಪೇಪರ್ ಬಳಸಿಕೊಂಡು ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದರು.

Please follow and like us:
0
http://karnatakatoday.in/wp-content/uploads/2019/06/kohli-fan-1024x576.jpghttp://karnatakatoday.in/wp-content/uploads/2019/06/kohli-fan-150x104.jpgKarnataka Today's Newsಕ್ರಿಕೆಟ್ನಗರಕ್ರಿಕೆಟ್ ಪಂದ್ಯವೇ ಹಾಗೆ ಇಲ್ಲಿ ಆಟಗಾರರು ಮಾಡುವ ಸಣ್ಣ ತಪ್ಪನ್ನು ಕೂಡ ಅಭಿಮಾನಿಗಳು ಎಂದು ಮರೆಯೋದಿಲ್ಲ ಎಲ್ಲವನ್ನು ನೆನಪಿನಲ್ಲೇ ಇಟ್ಟುಕೊಂಡಿರುತ್ತಾರೆ. ಆದರೆ ಎಲ್ಲವನ್ನು ಮರೆತು ಆಡುವುದೇ ನಿಜವಾದ ಸ್ಪರ್ಧಾತ್ಮಕ ಆಟ ಎಂದು ಕೊಹ್ಲಿ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು. ಇಷ್ಟಕ್ಕೂ ಆಸ್ಟ್ರೇಲಿಯಾ ಹಾಗು ಭಾರತ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಅಂದು ನಡೆದ ಈ ಘಟನೆ ಎಲ್ಲರ ಗಮನ ಸೆಳೆಯಿತು. ಕೊಹ್ಲಿ ಮಾಡಿದ ಕೆಲಸಕ್ಕೆ ಹಲವಾರು ಮೆಚ್ಚುಗೆ ವ್ಯಕ್ತ ಪಡಿಸಿದರು. ಬಾಲ್...Kannada News