Krishna poojari stop train accident

ಕೆಲವೊಮ್ಮೆ ನಾವು ಊಹಿಸಲು ಆಗದ ಘಟನೆಗಳು ನಡೆಯುತ್ತದೆ ಆದರೆ ಕೆಲವು ಸಂದರ್ಭದಲ್ಲಿ ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿದ ಘಟನೆಗಳು ಇವೆ. ನಾವು ಈಗ ಹೇಳುವ ಈ ಘಟನೆಯನ್ನ ಕೇಳಿದರೆ ನೀವು ಒಂದು ಕ್ಷಣ ಬೆಚ್ಚಿ ಬೀಳೋದು ಗ್ಯಾರೆಂಟಿ, ಈ ಘಟನೆಯ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ.

ಉಡುಪಿಯಲ್ಲಿ ಕೃಷ್ಣ ಪೂಜಾರಿ ಅನ್ನುವವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ವೈದ್ಯರು ಕೃಷ್ಣ ಪೂಜಾರಿ ಅವರಿಗೆ ದಿನ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಲು ಹೇಳಿದ್ದರು, ಇನ್ನು ಕೃಷ್ಣ ಪೂಜಾರಿ ಕೂಡ ದಿನ ಬೆಳಿಗ್ಗೆ ರೈಲು ಹಳಿಗುಂಟ ವಾಯುವಿಹಾರಕ್ಕೆ ಹೋಗುವ ಅಭ್ಯಾಸವನ್ನ ಮಾಡಿಕೊಂಡಿದ್ದರು.

Krishna poojari stop train accident

ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಬೆಳೆಸಿಕೊಂಡಿರುವ ಈ ಅಭ್ಯಾಸ ಶನಿವಾರ ಹಲವಾರು ಜನರ ಜೀವವನ್ನೆ ಕಾಪಾಡಿತು, ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಅಂದರೆ, ಶನಿವಾರ ಕೃಷ್ಣ ಪೂಜಾರಿ ವಾಯುವಿಹಾರ ಮಾಡುವಾಗ ಹಳಿಯಲ್ಲಿ ಬಿರುಕು ಆಗಿರುವುದು ಕೃಷ್ಣ ಪೂಜಾರಿ ಅವರಿಗೆ ಕಾಣಿಸಿಕೊಂಡಿದೆ.

ಇದನ್ನ ನೋಡಿದ ಕೃಷ್ಣ ಪೂಜರಿ ಅವರಿಗೆ ಏನು ಮಾಡಬೇಕು ಎಂದು ತೋಚಲಿಲ್ಲ, ಅಷ್ಟರಲ್ಲಿ ಒಂದು ರೈಲು ಅದೇ ಮಾರ್ಗವಾಗಿ ಸಾಗಿದ್ದು ಬಿರುಕು ಮತ್ತಷ್ಟು ದೊಡ್ಡದಾಗಿರುವುದು ಕೃಷ್ಣ ಪೂಜಾರಿ ಅವರಾಗಮನಕ್ಕೆ ಬಂತು.

Krishna poojari stop train accident

ಇನ್ನು ಮತ್ತೆ ಇದರ ಮೇಲೆ ರೈಲು ಸಾಗಿದರೆ ಆಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಕೃಷ್ಣ ಪೂಜಾರಿ ಅವರು ತಮ್ಮ ಆರೋಗ್ಯ ಸಮಸ್ಯೆಯನ್ನ ಲೆಕ್ಕಿಸದೆ ಉಡುಪಿಯ ರೈಲು ನಿಲ್ದಾಣದ ವರೆಗೆ ಓಡಿದ್ದಾರೆ.

ಬರೊಬ್ಬರು 3 km ಓದಿದ ಕೃಷ್ಣ ಪೂಜಾರಿ ಹಳಿ ಬಿರುಕು ಬಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯನ್ನ ಕೊಟ್ಟಿದಾರೆ, ತಕ್ಷಣ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಅಲ್ಲಿಗೆ ಇಂಜಿನಿಯರ್ ಗಳನ್ನ ಕಳುಹಿಸಿದ್ದಾರೆ, ಆ ಸಮಯದಲ್ಲಿ ಆ ಮಾರ್ಗವಾಗಿ ಹೋಗುವ ರೈಲುಗಳನ್ನ ಉಡುಪಿ ಮತ್ತು ಪಡುಬಿದ್ರಿ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.

ಸ್ನೇಹಿತರೆ ಕೃಷ್ಣ ಪೂಜಾರಿ ಅವರು ಹಲವಾರು ಜನರ ಪ್ರಾಣವನ್ನ ಕಾಪಾಡಿದ್ದಾರೆ, ಸ್ನೇಹಿತರೆ ಕೃಷ್ಣ ಪೂಜಾರಿ ಅವರ ಈ ಒಳ್ಳೆಯ ಕೆಲಸದ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Krishna poojari stop train accident

Please follow and like us:
0
http://karnatakatoday.in/wp-content/uploads/2018/10/Krishna-poojari-stop-train-accident4-1024x576.jpghttp://karnatakatoday.in/wp-content/uploads/2018/10/Krishna-poojari-stop-train-accident4-150x104.jpgeditorಎಲ್ಲಾ ಸುದ್ದಿಗಳುನಗರಮಂಗಳೂರುಸುದ್ದಿಜಾಲಕೆಲವೊಮ್ಮೆ ನಾವು ಊಹಿಸಲು ಆಗದ ಘಟನೆಗಳು ನಡೆಯುತ್ತದೆ ಆದರೆ ಕೆಲವು ಸಂದರ್ಭದಲ್ಲಿ ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿದ ಘಟನೆಗಳು ಇವೆ. ನಾವು ಈಗ ಹೇಳುವ ಈ ಘಟನೆಯನ್ನ ಕೇಳಿದರೆ ನೀವು ಒಂದು ಕ್ಷಣ ಬೆಚ್ಚಿ ಬೀಳೋದು ಗ್ಯಾರೆಂಟಿ, ಈ ಘಟನೆಯ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ. ಉಡುಪಿಯಲ್ಲಿ ಕೃಷ್ಣ ಪೂಜಾರಿ ಅನ್ನುವವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ವೈದ್ಯರು ಕೃಷ್ಣ ಪೂಜಾರಿ ಅವರಿಗೆ ದಿನ...Kannada News