Kurukshetra Audio release

ಕುರುಕ್ಷೇತ್ರ ಚಿತ್ರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮೊದಲು ಭಾರಿ ವಲವಿತ್ತು, ಆದರೆ ಈಗ ಅದು ಅಸಮಾನದಕ್ಕೆ ತಿರುಗಿದೆ ಮತ್ತು ಆ ಅಸಮಾಧಾನ ಈಗ ಆಡಿಯೋ ರಿಲೀಸ್ ಸಮಯದಲ್ಲಿ ಭಹಿರಂಗವಾಗಿದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಆಗಸ್ಟ್ 9 ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ದಿನ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಇನ್ನು ಚಿತ್ರದ ಆಡಿಯೋ ರಿಲೀಸ್ ಗೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ಮನವಿಯನ್ನ ಮಾಡಿಕೊಳ್ಳುವ ಮಟ್ಟಿಗೆ ದರ್ಶನ್ ಅಭಿಮಾನಿಗಳು ಅಸಮಾಧಾನ ಮಾಡಿಕೊಂಡಿರುವ ಈಗ ಭಹಿರಂಗವಾಗಿದೆ.

ಹಾಗಾದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಿದ್ದೇನು ಮತ್ತು ಕುರುಕ್ಷೇತ್ರ ಚಿತ್ರದ ವಿವಾದ ಹುಟ್ಟಿಕೊಳ್ಳಲು ಪ್ರಮುಖ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kurukshetra Audio release

ಎಲ್ಲಿ ನೋಡಿದರು ಕುರುಕ್ಷೇತ್ರ ಚಿತ್ರವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಅನ್ನುವುದಕ್ಕಿಂತ ಹೆಚ್ಚಾಗಿ ಮುನಿರತ್ನ ಅವರ ಸಿನಿಮಾ ಎಂದು ಬಿಂಬಿಸಲಾಗುತ್ತಿದೆ.

ಇನ್ನು ಕೆಲವು ಕಡೆಗಳಲ್ಲಿ ದರ್ಶನ್ ಅವರಿಗೆ ಅನ್ಯಾಯವಾಗುತ್ತಿದೆ, ಇನ್ನು ಆಡಿಯೋ ರಿಲೀಸ್ ಸಮಯದಲ್ಲಿ ಕೂಡ ದರ್ಶನ್ ಅವರ ಚಿತ್ರವನ್ನ ಹಾಕದೆ ಮುನಿರತ್ನ ಅವರ ಚಿತ್ರವನ್ನ ಹಾಕಲಾಗುತ್ತಿದೆ, ಇದರಿಂದ ದರ್ಶನ್ ಅಭಿಮಾನಿಗಳು ಸಾಮಾನ್ಯವಾಗಿ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್ ಅವರಿಗೆ ಹೀಗೆ ಅನ್ಯಾಯವಾಗುತ್ತಿರುವಾಗ ದರ್ಶನ್ ಅವರು ಒಂದು ಸಿನಿಮಾಗಾಗಿ ತನ್ನ ಸಂಭಾವನೆಯನ್ನ ಪಡೆದುಕೊಂಡು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಿಟ್ಟುಬಿಡಬಹುದಿತ್ತು, ಆದರೆ ಸಿನಿಮಾದ ನಿರ್ಮಾಪಕರಿಗೆ ಅನ್ಯಾಯವಾಗಬಾರದು ಅನ್ನುವ ಕಾರಣಕ್ಕಾಗಿ ದರ್ಶನ್ ಅವರು ಅಭಿಮಾನಿಗಳಲ್ಲಿ ಮನವಿಯನ್ನ ಮಾಡಿಕೊಂಡಿದ್ದಾರೆ.

Kurukshetra Audio release

ಕುರುಕ್ಷೇತ್ರ ಅನ್ನುವುದು ಬಹುತಾರಾಗಣದ ಚಿತ್ರ, ಎಲ್ಲರನ್ನ ಸಮಾನವಾಗಿ ಕಾಣಬೇಕು ಅನ್ನುವ ಸದುದ್ದೇಶದಿಂದ ಯಾವ ತಾರೆಯ ಚಿತ್ರಗಳನ್ನ ಪಾಸ್ ಗಳ ಮೇಲೆ ಪ್ರಿಂಟ್ ಮಾಡಲಾಗಿಲ್ಲ, ಇಂತಹ ಚಿಕ್ಕ ವಿಷಯಗಳಿಗೆ ಬೇಸರವನ್ನ ವ್ಯಕ್ತಪಡಿಸುವ ಅವಶ್ಯಕತ್ಯೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನ ಒದಗಿಸಲಾಗಿದೆ, ಇನ್ನು ಆರಾಮವಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ ಎಂದು ದರ್ಶನ್ ಅವರು ತಮ್ಮ ಅಭಿಮಾನಿಗಳಲ್ಲಿ ಕಳಕಳಿಯ ಮನವಿಯನ್ನ ಮಾಡಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅವರಿಗೆ ಸಪೋರ್ಟ್ ಮಾಡಿದ್ದಕ್ಕಾಗಿ ಮುನಿರತ್ನ ಅವರು ರಾಜಕೀಯವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಹೀಗೆ ಮಾಡಿದ್ದಾರೆ ಅನ್ನುವುದು ದರ್ಶನ್ ಅಭಿಮಾನಿಗಳ ಭಾವನೆಯಾಗಿದೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Kurukshetra Audio release

Please follow and like us:
0
http://karnatakatoday.in/wp-content/uploads/2019/07/Kurukshtra-Audio-release-1024x576.jpghttp://karnatakatoday.in/wp-content/uploads/2019/07/Kurukshtra-Audio-release-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕುರುಕ್ಷೇತ್ರ ಚಿತ್ರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮೊದಲು ಭಾರಿ ವಲವಿತ್ತು, ಆದರೆ ಈಗ ಅದು ಅಸಮಾನದಕ್ಕೆ ತಿರುಗಿದೆ ಮತ್ತು ಆ ಅಸಮಾಧಾನ ಈಗ ಆಡಿಯೋ ರಿಲೀಸ್ ಸಮಯದಲ್ಲಿ ಭಹಿರಂಗವಾಗಿದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಆಗಸ್ಟ್ 9 ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ದಿನ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಚಿತ್ರದ ಆಡಿಯೋ ರಿಲೀಸ್ ಗೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ಮನವಿಯನ್ನ...Kannada News