Lilavathi And Sudhamurty

ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರವಾಹದಿಂದ ಜನರ ಜೀವನ ಅಸ್ತವೆಸ್ತವಾಗಿ ಅಲ್ಲಿನ ಜನರು ಸಹಾಯಸ್ತಕ್ಕಾಗಿ ಕೈಚಾಚುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಕೇವಲ ರಾಜಕೀಯ ನಾಯಕರನ್ನ ನೆಚ್ಚಿಕೊಂಡರೆ ಎಲ್ಲವೂ ಸಾಧ್ಯವಿಲ್ಲ ಎಂದು ಅರಿತ ಕರ್ನಾಟಕದ ಜನತೆ ತಮ್ಮ ಕೈಯಲ್ಲಿ ಆದ ಸಹಾಯವನ್ನ ನೆರೆ ಪೀಡಿತ ಜನರಿಗೆ ಮಾಡುತ್ತಿದ್ದಾರೆ.

ಇನ್ನು ಕಷ್ಟ ಎಂದವರಿಗೆ ಸಹಾಯವನ್ನ ಮಾಡಲು ಒಂದು ಹೆಜ್ಜೆ ಮುಂದೆ ಇರುವ ಇನ್ಫೋಸಿಸ್ ಸುಧಾ ಮೂರ್ತಿಯವರು ಮಾಡಿರುವ ಈ ಸಹಾಯಕ್ಕೆ ಇಡೀ ಕರ್ನಾಟಕವೇ ಕೃತಜ್ಞತೆಯನ್ನ ಸಲ್ಲಿಸುತ್ತಿದೆ, ಇನ್ನು ಇದರ ಜೊತೆಗೆ ತಾವೇ ಕಷ್ಟದಲ್ಲಿ ಇರುವಾಗ ಲೀಲಾವತಿ ಮತ್ತು ಮಗ ವಿನೋದ್ ರಾಜ್ ಮಾಡಿರುವ ಈ ಸಹಾಯವನ್ನ ಯಾರು ಕೂಡ ಮರೆಯುವ ಹಾಗೆ ಇಲ್ಲ, ಅಂತಹ ಸಹಾಯವನ್ನ ಮಾಡಿದ್ದಾರೆ ಲೀಲಾವತಿ ಮತ್ತು ವಿನೋದ್ ರಾಜ್ ಅವರು.

Lilavathi And Sudhamurty

ಹಾಗಾದರೆ ಈ ಇಬ್ಬರು ಮಹಾ ತಾಯಿಯರು ಮಾಡಿದ ಸಹಾಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಭಾರಿ ಪ್ರಮಾಣದ ಜಲಪ್ರಳಯಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕಕ್ಕೆ ಈಗ ಕರ್ನಾಟಕದ ಹಲವು ಭಾಗಗಳಿಂದ ಜನರು ಸಹಾಯ ಹಸ್ತವನ್ನ ಚಾಚುತ್ತಿದ್ದಾರೆ.

ಇನ್ನು ಇನ್ಫೋಸಿಸ್ ನ ಸುಧಾಮೂರ್ತಿಯವರು ಈಗಾಗಲೇ ಪ್ರವಾಹ ನಿರ್ವಹಣೆಗಾಗಿ 10 ಕೋಟಿ ರೂಪಾಯಿಯನ್ನ ನೀಡಿ ಸಹಾಯ ಹಸ್ತವನ್ನ ಚಾಚಿದ್ದಾರೆ, ಇನ್ನು ಇಷ್ಟಕ್ಕೆ ಸುಮ್ಮನಾಗದ ಸುಧಾಮೂರ್ತಿ ಅವರು ಸ್ವತಃ ತಾವೇ ಖುದ್ದಾಗಿ ತಮ್ಮ ಇನ್ಫೋಸಿಸ್ ನ ಶಾಖೆಗಳ ಮೂಲಕ ದೊಡ್ಡ ದೊಡ್ಡ ಲಾರಿಗಳಲ್ಲಿ ಅಗತ್ಯವಾಗಿ ಬೇಕಾಗಿರುವ ಆಹಾರ ಪದಾರ್ಥಗಳನ್ನ, ವಸ್ತ್ರಗಳು ಮತ್ತು ಇನ್ನಿತರೇ ವಸ್ತುಗಳನ್ನ ಉತ್ತರ ಕರ್ನಾಟಕಕ್ಕೆ ಕಳುಹಿಸಿ ಕೊಟ್ಟಿದ್ದಾರೆ.

Lilavathi And Sudhamurty

ಒಂದು ಕಡೆ ಕೋಟ್ಯಧಿಪತಿ ಸುಧಾಮೂರ್ತಿ ಅವರು ಈ ರೀತಿಯಾಗಿ ಸಹಾಯವನ್ನ ಮಾಡುತ್ತಿದ್ದರೆ ಇನ್ನೊಂದು ಕಡೆ ನಮ್ಮ ಕನ್ನಡ ಸಿನಿಮಾ ಜಗತ್ತಿನಲ್ಲಿ ಒಂದು ಕಾಲದಲ್ಲಿ ಪ್ರಸಿದ್ಧ ನಟಿಯಾಗಿ ಮಿಂಚಿದ್ದ ಲೀಲಾವತಿ ಅವರು ಮಾಡಿರುವ ಸಹಾಯವನ್ನ ಕೇಳಿದರೆ ನೀವು ಹೆಮ್ಮೆ ಪಡುತ್ತೀರಾ. ಇನ್ನು ಲೀಲಾವತಿ ಈಗ ತುಂಬಾ ಕಷ್ಟದಲ್ಲಿ ಪರಿಸ್ಥಿತಿಯಲ್ಲಿ ಇದ್ದಾರೆ ಮತ್ತು ಮಗ ವಿನೋದ್ ರಾಜ್ ಅವರು ಕೂಡ ಆರ್ಥಿಕವಾಗಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ.

ಇನ್ನು ಇಷ್ಟು ಕಷ್ಟ ಇದ್ದರೂ ಕೂಡ ತಾಯಿ ಲೀಲಾವತಿ ಮತ್ತು ಮಗ ವಿನೋದ್ ರಾಜ್ ಅವರು ಪ್ರವಾಹದಲ್ಲಿ ಸಿಲುಕಿದ ಮುಖ ಪ್ರಾಣಿಗಳ ಮತ್ತು ಜಾನುವಾರುಗಳ ರೋಧನೆಯನ್ನ ನೋಡಲಾಗದೆ ತಮ್ಮ ಸ್ವಂತ ಹಣದಲ್ಲಿ ಅವುಗಳಿಗೆ ಮೇವನ್ನ ಖರಿಸಿ ಮಾಡಿ ದೊಡ್ಡ ಲಾರಿಯಲ್ಲಿ ಅವುಗಳನ್ನ ಉತ್ತರ ಕರ್ನಾಟಕದ ಜಾನುವಾರುಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಸ್ನೇಹಿತರೆ ತಾಯಿ ಸುಧಾಮೂರ್ತಿ ಮತ್ತು ತಾಯಿ ಲೀಲಾವತಿ ಅವರ ಈ ಈ ಸಹಾಯದ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Lilavathi And Sudhamurty

Please follow and like us:
error0
http://karnatakatoday.in/wp-content/uploads/2019/08/Leelavathi-and-Sudhamurty-1024x576.jpghttp://karnatakatoday.in/wp-content/uploads/2019/08/Leelavathi-and-Sudhamurty-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರವಾಹದಿಂದ ಜನರ ಜೀವನ ಅಸ್ತವೆಸ್ತವಾಗಿ ಅಲ್ಲಿನ ಜನರು ಸಹಾಯಸ್ತಕ್ಕಾಗಿ ಕೈಚಾಚುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಕೇವಲ ರಾಜಕೀಯ ನಾಯಕರನ್ನ ನೆಚ್ಚಿಕೊಂಡರೆ ಎಲ್ಲವೂ ಸಾಧ್ಯವಿಲ್ಲ ಎಂದು ಅರಿತ ಕರ್ನಾಟಕದ ಜನತೆ ತಮ್ಮ ಕೈಯಲ್ಲಿ ಆದ ಸಹಾಯವನ್ನ ನೆರೆ ಪೀಡಿತ ಜನರಿಗೆ ಮಾಡುತ್ತಿದ್ದಾರೆ. ಇನ್ನು ಕಷ್ಟ ಎಂದವರಿಗೆ ಸಹಾಯವನ್ನ ಮಾಡಲು ಒಂದು ಹೆಜ್ಜೆ ಮುಂದೆ ಇರುವ ಇನ್ಫೋಸಿಸ್ ಸುಧಾ ಮೂರ್ತಿಯವರು ಮಾಡಿರುವ ಈ...Film | Devotional | Cricket | Health | India