ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಇನ್ನೊಂದು ಸಿಹಿ ಸುದ್ದಿಯನ್ನ ನೀಡಿದೆ, ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗ್ರಾಹಕರಾಗಿದ್ದರೆ ನೀವು ಈ ಮಾಹಿತಿಯನ್ನ ಅತ್ಯಾವಶ್ಯವಾಗಿ ತಿಳಿದುಕೊಳ್ಳುವುದು ಉತ್ತಮ. ಹೌದು ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಏಪ್ರಿಲ್ ತಿಂಗಳಲ್ಲಿ ಎರಡು ತಿಂಗಳ ರೇಷನ್ ದಾನ್ಯವನ್ನ ನೀಡಲಾಗಿದೆ, ಇನ್ನು ದೇಶದಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆದ ಕಾರಣಕ್ಕೆ ಮತ್ತೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಬಡವರಿಗೆ ರಾಜ್ಯ ಸರ್ಕಾರವು ಇನ್ನೊಂದು ಸಿಹಿ ಸುದ್ದಿಯನ್ನ ನೀಡಿದೆ, ಹಾಗಾದರೆ ಏನದು ಸಿಹಿ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಮೇ 1 ನೇ ತಾರೀಕಿನಿಂದ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಹಾಗು ಒಂದು ಕೆಜಿ ತೊಗರಿ ಬೆಳೆಯನ್ನ ಉಚಿತವಾಗಿ ನೀಡುವಂತೆ ಇನ್ನೊಮ್ಮೆ ಹೊಸದಾಗಿ ಆದೇಶವನ್ನ ಹೊರಡಿಸಲಾಗಿದೆ. ಹೌದು ಬಹಳಷ್ಟು ಬಡ ಕುಟುಂಬಗಳಿಗೆ ತೊಗರಿ ಬೆಳೆ ನೀಡುವುದನ್ನ ನಿಲ್ಲಿಸಿ ಬಹಳಷ್ಟು ತಿಂಗಳುಗಳೇ ಕಳೆದಿದೆ ಎಂದು ಹೇಳಿದರೆ ತಪ್ಪಾಗಲ್ಲ, ಆದರೆ ರಾಜ್ಯ ಸರ್ಕಾರವು ಹೊಸ ಆದೇಶವನ್ನ ಹೊರಡಿಸಿದ್ದು ಮುಂದಿನ ತಿಂಗಳು ಅಂದರೆ ಮೇ ತಿಂಗಳಿನಿಂದ ಕಡ್ಡಾಯವಾಗಿ ಐದು ಕೆಜಿ ಅಕ್ಕಿಯ ಜೊತೆಗೆ ಒಂದು ತೊಗರಿ ಬೆಳೆಯನ್ನ ಕಡ್ಡಾಯವಾಗಿ ನೀಡಲಾಗುತ್ತದೆ.

Lock down ration

ಮೇ ಮೊದಲನೆಯ ತಾರೀಕಿನಿಂದ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಎರಡು ತಿಂಗಳ ರೇಷನ್ ಆಹಾರವನ್ನ ಏಕಕಾಲಕ್ಕೆ ಅಂದರೆ ಒಂದೇ ಭಾರಿ ನೀಡಲು ಸೂಚನೆಯನ್ನ ನೀಡಲಾಗಿದ್ದು ಇದೆ ತಿಂಗಳ ಅಂತ್ಯದ ಒಳಗಾಗಿ ಎಲ್ಲಾ ಆಹಾರ ದಾನ್ಯಗಳನ್ನ ಗೋಡನ್ ಗಳಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಕೂಲಿ ಕಾರ್ಮಿಕರಿಗೆ ಪಾಸ್ ವ್ಯವಸ್ಥೆಯನ್ನ ಕೂಡ ಮಾಡಿಕೊಡಲು ಆದೇಶವನ್ನ ಹೊರಡಿಸಲಾಗಿದೆ. ಇನ್ನು ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ರೇಷನ್ ಅಂಗಡಿಗಳಿಗೆ ಇದೆ ಏಪ್ರಿಲ್ 25 ರ ಒಳಗಾಗಿ ಎಲ್ಲಾ ಆಹಾರ ದಾನ್ಯಗಳನ್ನ ತಲುಪಿಸಲು ಕೂಡ ಸೂಚನೆಯನ್ನ ನೀಡಲಾಗಿದೆ.

ಇನ್ನು ಪಡಿತರ ಅಂಗಡಿಯವರು ಮತ್ತು ಫಲಾನುಭವಿಗಳು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಲು ತಿಳಿಸಲಾಗಿದ್ದು ಹಣ ವಸೂಲಿ ಮತ್ತು ತೂಕದಲ್ಲಿ ಮೋಸ ಮಾಡಿದರೆ ಅಂಗಡಿಯವರ ವಿರುದ್ಧ ಕಠಿಣ ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆಯು ತಿಳಿಸಿದೆ. ಇನ್ನು ರೇಷನ್ ಕಾರ್ಡ್ ಇದ್ದವರಿಗೆ ಇನ್ನೊಂದು ಸಿಹಿ ಸುದ್ದಿ ಏನು ಅಂದರೆ ಮುಂದಿನ ತಿಂಗಳಿನಿಂದ ಕೇಂದ್ರ ಸರ್ಕಾರದ ಅನುದಾನದಲ್ಲಿ ಅಕ್ಕಿ ಮತ್ತು ಗೋಧಿಯನ್ನ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದ್ದು ಇದು ಎಲ್ಲಾ ಗ್ರಾಹಕರಿಗೆ ಸಂತೋಷವನ್ನ ತರಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನೀವು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ರಾಜ್ಯದ ಪ್ರತಿಯೊಬ್ಬ ಬಿಪಿಎಲ್ ಕಾರ್ಡುದಾರನಿಗೆ ತಲುಪಿಸಿ.

Lock down ration

Please follow and like us:
error0
http://karnatakatoday.in/wp-content/uploads/2020/04/Lock-down-ration-1-1024x576.jpghttp://karnatakatoday.in/wp-content/uploads/2020/04/Lock-down-ration-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಇನ್ನೊಂದು ಸಿಹಿ ಸುದ್ದಿಯನ್ನ ನೀಡಿದೆ, ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗ್ರಾಹಕರಾಗಿದ್ದರೆ ನೀವು ಈ ಮಾಹಿತಿಯನ್ನ ಅತ್ಯಾವಶ್ಯವಾಗಿ ತಿಳಿದುಕೊಳ್ಳುವುದು ಉತ್ತಮ. ಹೌದು ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಏಪ್ರಿಲ್ ತಿಂಗಳಲ್ಲಿ ಎರಡು ತಿಂಗಳ ರೇಷನ್ ದಾನ್ಯವನ್ನ ನೀಡಲಾಗಿದೆ, ಇನ್ನು ದೇಶದಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆದ ಕಾರಣಕ್ಕೆ ಮತ್ತೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ...Film | Devotional | Cricket | Health | India