ಗಂಡು ಮತ್ತು ಹೆಣ್ಣಿನ ಜಾತಕವನ್ನ ನೋಡಿ ಕೂಡಿ ಬಂದರೆ ಅವರ ವಿವಾಹವನ್ನ ಮಾಡಿ ಎಂದು ಹಿರಿಯರು ಹೇಳುತ್ತಾರೆ, ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಿಳೆಯರು ಕೆಲವು ನಿರ್ದಿಷ್ಟ ರಾಶಿಚಕ್ರದ ಪುರುಷರನ್ನ ಬಹಳ ಇಷ್ಟ ಪಡುತ್ತಾರೆ. ಪ್ರತಿಯೊಂದು ಆಕರ್ಷಣೆ ಅನ್ನುವುದು ಜಗದ ಒಂದು ನಿಯಮವಾಗಿದೆ, ಪ್ರಪಂಚದಲ್ಲಿ ಎಲ್ಲರೂ ಕೂಡ ಕೆಲವೊಂದರ ಮೇಲೆ ಆಕರ್ಷಣೆ ಆಗುತ್ತಾರೆ. ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಗಳಿವೆ ಮತ್ತು ಈ ರಾಶಿಗಳು ಉಳಿದ ರಾಶಿಗಳಿಗಿಂತ ಹೆಚ್ಚಿನ ಆಕರ್ಷಣೆಯನ್ನ ಹೊಂದಿರುವ ರಾಶಿಗಳಾಗಿವೆ, ಇನ್ನು ಈ ರಾಶಿಯ ವ್ಯಕ್ತಿಗಳು ಎಲ್ಲರನ್ನ ಬಹಳ ಬೇಗ ಆಕರ್ಷಣೆ ಮಾಡುತ್ತಾರೆ ಮತ್ತು ಅವರ ಗಮನವನ್ನ ತಮ್ಮತ್ತ ಸೆಳೆಯುವ ಶಕ್ತಿ ಇವರಲ್ಲಿ ಇರುತ್ತದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ.

ಹೌದು ಜ್ಯೋತಿಷ್ಯ ಕೆಲವು ಆಧಾರಗಳನ್ನ ಗಮನದಲ್ಲಿ ಇರಿಸಿಕೊಂಡು ಹಾಕಿ ವಧು ಮತ್ತು ವರರ ಸಾಮ್ಯತೆಯನ್ನ ಲೆಕ್ಕ ಹಾಕುತ್ತದೆ, ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 4 ರಾಶಿಯವರು ಹೆಚ್ಚು ಪ್ರಭಾವಶಾಲಿ ರಾಶಿಗಳಾಗಿವೆ, ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಈ ಮಾಹಿತಿಯ ಅಭಿಪ್ರಾಯವನ್ನ ನಮಗೆ ತಿಳಿಸಿ. ಮೊದಲನೇದಾಗಿ ಮಿಥುನ ರಾಶಿ, ಈ ರಾಶಿಯ ಪುರುಷರು ಬಹಳ ಅದೃಷ್ಟವಂತರು ಮತ್ತು ಬಹಳ ನಂಬಿಕಸ್ತರು, ಇನ್ನೊಬ್ಬರ ತಮ್ಮತ್ತ ಸೆಳೆಯುವ ಶಕ್ತಿ ಇವರಲ್ಲಿ ಹುಟ್ಟುವಾಗಲೇ ಬಂದಿರುತ್ತದೆ. ಈ ರಾಶಿಯವರ ಒಳ್ಳೆಯ ವ್ಯಕ್ತಿತ್ವದಿಂದ ಮಹಿಳೆಯರು ಈ ರಾಶಿಯ ಪುರುಷರಿಗೆ ಬಹಳ ಬೇಗ ಆಕರ್ಷಿತವಾರುತ್ತಾರೆ, ಸಹಜ ಮತ್ತು ರಸಿಕತೆಯ ಸ್ವಭಾವ ಇವರದ್ದಾಗಿದೆ, ಇನ್ನು ಈ ರಾಶಿಯವರು ತಾವು ಇಷ್ಟಪಟ್ಟ ಹುಡುಗಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಸಾಯುವ ತನಕ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

Love Jyothishya

ಇನ್ನು ಎರಡನೆಯದಾಗಿ ಸಿಂಹ ರಾಶಿ, ಈ ರಾಶಿಯವರು ಹೃದಯವಂತರು ಮತ್ತು ಎಲ್ಲರೊಡನೆ ಉತ್ತಮವಾದ ಭಾವನೆಯನ್ನ ಹೊಂದಿರುತ್ತಾರೆ, ಸಂಕೋಚ ಇಲ್ಲದೆ ಎಲ್ಲರೊಡನೆ ಮುಕ್ತರಾಗಿ ವ್ಯವಹಾರ ಮಾಡುವ ಇವರ ನಡೆ ಎಲ್ಲರಿಗೂ ಬಹಳ ಬೇಗ ಇಷ್ಟವಾಗುತ್ತದೆ.ಈ ರಾಶಿಯವರು ಸಮಾಜದಲ್ಲಿ ಎಲ್ಲರನ್ನ ಪ್ರೀತಿಯಿಂದ ಕಾಣುತ್ತಾರೆ, ಇವರ ನಡೆ ಮತ್ತು ಸ್ವಭಾವ ಎಲ್ಲರಿಗೂ ಇಷ್ಟ ಆಗುತ್ತದೆ ಮತ್ತು ಈ ರಾಶಿಯ ಪುರುಷರನ್ನ ಹೆಣ್ಣು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಮೂರನೆಯದಾಗಿ ತುಲಾ ರಾಶಿ, ಈ ರಾಶಿಯವರು ಯಾವುದೇ ಸ್ಥಳಕ್ಕೆ ಹೋದರು ಚಿರಪರಿಚಿತರಂತೆ ಕಾಣುತ್ತಾರೆ, ಇವರ ಸುಂದರ ನೋಟ, ಕೇಶ ವಿನ್ಯಾಸ, ಧರಿಸುವ ಬಟ್ಟೆ ಬೇರೆಯವರಿಗಿಂತ ಬಹಳ ವಿಬ್ನಿನ್ನವಾಗಿರುತ್ತದೆ ಮತ್ತು ಅದು ಮಹಿಳೆಯರಿಗೆ ಬಹಳ ಇಷ್ಟವಾಗುತ್ತದೆ.

ಈ ರಾಶಿಯವರು ಬಹಳ ಭಾವನಾತ್ಮಕ ಜೀವಿಗಳು ಆಗಿದ್ದಾರೆ, ಈ ರಾಶಿಯ ಮಹಿಳೆಯರು ಅಲಂಕಾರ ಪ್ರಿಯರು ಮತ್ತು ನಾವು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಅನ್ನುವ ಸ್ವಭಾವ ಇವರದ್ದು. ಇನ್ನು ಕೊನೆಯದಾಗಿ ಮಕರ ರಾಶಿ, ಈ ರಾಶಿಯ ಪುರುಷರು ಸಹಜವಾಗಿ ಸುಂದರವಾಗಿರುತ್ತಾರೆ, ಈ ರಾಶಿಯವರ ಬಹಳ ಸ್ನೇಹಮಹಿಗಳು ಆಗಿರುತ್ತಾರೆ ಮತ್ತು ಇವು ಎಲ್ಲರಿಗೂ ಬಹಳ ಬೇಗ ಇಷ್ಟವಾಗುತ್ತಾರೆ. ಇವರ ಮಾತಿನ ಶೈಲಿ ಮತ್ತು ಇವರ ಸುಂದರತೆಗೆ ಮಹಿಳೆಯರು ಬಹಳ ಬೇಗ ಆಕರ್ಷಿತರಾಗುತ್ತಾರೆ ಮತ್ತು ಇಷ್ಟಪಡುತ್ತಾರೆ, ಈ ರಾಶಿಯವರು ಸಹಜವಾಗಿ ಇನ್ನೊಬ್ಬರ ಆಕರ್ಷಣೆಗೆ ಕಾರಣರಾಗುತ್ತಾರೆ ಮತ್ತು ಈ ರಾಶಿಯವರು ಸದಾ ಹಸನ್ಮುಖಿಯಾಗಿರುತ್ತಾರೆ.

Love Jyothishya

Please follow and like us:
error0
http://karnatakatoday.in/wp-content/uploads/2019/11/Love-and-Jyohishya-1024x576.jpghttp://karnatakatoday.in/wp-content/uploads/2019/11/Love-and-Jyohishya-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಗಂಡು ಮತ್ತು ಹೆಣ್ಣಿನ ಜಾತಕವನ್ನ ನೋಡಿ ಕೂಡಿ ಬಂದರೆ ಅವರ ವಿವಾಹವನ್ನ ಮಾಡಿ ಎಂದು ಹಿರಿಯರು ಹೇಳುತ್ತಾರೆ, ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಿಳೆಯರು ಕೆಲವು ನಿರ್ದಿಷ್ಟ ರಾಶಿಚಕ್ರದ ಪುರುಷರನ್ನ ಬಹಳ ಇಷ್ಟ ಪಡುತ್ತಾರೆ. ಪ್ರತಿಯೊಂದು ಆಕರ್ಷಣೆ ಅನ್ನುವುದು ಜಗದ ಒಂದು ನಿಯಮವಾಗಿದೆ, ಪ್ರಪಂಚದಲ್ಲಿ ಎಲ್ಲರೂ ಕೂಡ ಕೆಲವೊಂದರ ಮೇಲೆ ಆಕರ್ಷಣೆ ಆಗುತ್ತಾರೆ. ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಗಳಿವೆ ಮತ್ತು ಈ ರಾಶಿಗಳು ಉಳಿದ ರಾಶಿಗಳಿಗಿಂತ ಹೆಚ್ಚಿನ...Film | Devotional | Cricket | Health | India