love life in date of month

ಅನೇಕ ವರ್ಷಗಳಿಂದಲೂ ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ನಮ್ಮ ಜೀವನದ ಬಗ್ಗೆ ಹೇಳುತ್ತಲೇ ಬಂದಿದೆ, ಅವು ಹೇಳುವ ವಿಷಯಗಳು ನಮ್ಮ ಜೀವನದಲ್ಲಿ ಸತ್ಯವಾಗಿಯೂ ನಡೆದೇ ಇರುತ್ತದೆ.

ಇನ್ನು ನೀವು ಹುಟ್ಟಿದ ಮಾಸವನ್ನ ತಿಳಿದುಕೊಂಡರೆ ಸಾಕು ನಿಮ್ಮ ಲವ್ ಲೈಫ್ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು ಎಂದು ಹೇಳುತ್ತಿದ್ದರೆ ಸಂಖ್ಯಾ ಶಾಸ್ತ್ರಜ್ಞರು, ಇನ್ನು ಅನೇಕರು ಈ ಸಂಖ್ಯಾ ಶಾಸ್ತ್ರಜ್ಞರು ಹೇಳುವುದು ನಿಜ ಎಂದು ಕೂಡ ಹೇಳುತ್ತಿದ್ದಾರೆ.love life in date of month

ಇನ್ನು ಜನವರಿಯಲ್ಲಿ ಹುಟ್ಟಿದವರು ತುಂಬಾ ಆಕರ್ಷಣೀಯವಾಗಿರುತ್ತಾರೆ ಮತ್ತು ಇತರರನ್ನ ಆಕರ್ಷಿಸುತ್ತಾರೆ ಕೂಡ, ತಮ್ಮ ಎದುರು ಇರುವವರನ್ನ ತೂಕ ಮಾಡದೆ ಅವರನ್ನ ತಮ್ಮ ಮನಸ್ಸಿನ ಹತ್ತಿರ ಇಟ್ಟು ಪ್ರೀತಿ ಮಾಡುತ್ತಾರೆ. ಇನ್ನು ಇವರು ತನ್ನ ಸಂಗತಿಯನ್ನ ತುಂಬಾ ಪ್ರೀತಿ ಪ್ರೇಮದಿಂದ ನೋಡಿಕೊಂಡು ಅವರೊಂದಿಗೆ ನೋಡಿಕೊಳ್ಳುತ್ತಾರೆ.

love life in date of month

ಇನ್ನು ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ತುಂಬಾ ಅಟ್ಟ್ರಕ್ಟಿವ್ ಆಗಿ ಇರುತ್ತಾರೆ ಮತ್ತು ಎಲ್ಲರ ಜೊತೆ ಅಷ್ಟು ಬೇಗ ಹೊಂದಿಕೊಳ್ಳುವುದಿಲ್ಲ, ಇನ್ನು ಇವರು ತುಂಬಾ ರೋಮ್ಯಾಂಟಿಕ್ ಆಗಿ ಇರುತ್ತಾರೆ. ಇನ್ನು ಇವರಿಗೆ ಸಂಕೋಚ ತುಂಬಾ ಜಾಸ್ತಿ ತನ್ನ ಮನಸ್ಸಿನಲ್ಲಿ ಇರುವ ಪ್ರೀತಿಯನ್ನ ಬಹುಬೇಗ ವ್ಯಕ್ತ ಪಡಿಸುವುದಿಲ್ಲ.

love life in date of month

ಇನ್ನು ಮಾರ್ಚ್ ತಿಂಗಳಲ್ಲಿ ಹುಟ್ಟಿದವರಿಗೆ ಪ್ರವಾಸ ಅಂದರೆ ತುಂಬಾ ಇಷ್ಟ, ಇವರು ಸ್ವಲ್ಪ ನಾಚಿಕೆ ಸ್ವಭಾವದವರಾಗಿರುತ್ತಾರೆ. ಪ್ರೀತಿಯ ನಂಬಿಕೆಯಲ್ಲಿ ಇವರದ್ದು ಎತ್ತಿದ ಕೈ ಅಂತಾನೆ ಹೇಳಬಹುದು.

love life in date of month

ಇನ್ನು ಏಪ್ರಿಲ್ ನಲ್ಲಿ ಹುಟ್ಟಿದವರು ತುಂಬಾ ಡೈನಾಮಿಕ್ ಆಗಿ ಮತ್ತು ಅಟ್ಟ್ರಕ್ಟಿವ್ ಆಗಿ ಇರುತ್ತಾರೆ, ಇನ್ನು ತನ್ನ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ಸ್ನೇಹಿತರ ಸಹಾಯವನ್ನ ತಪ್ಪದೆ ಪಡೆಯುತ್ತಾರೆ. ಇವರಿಗೆ ಮೂಗಿನ ಮೇಲೆಯೇ ಕೋಪ ಇರುತ್ತಾರೆ ಆದರೆ ಹೃದಯದ ತುಂಬಾ ಪ್ರೀತಿಯನ್ನ ತುಂಬಿಕೊಂಡಿರುತ್ತಾರೆ.

love life in date of month

ಇನ್ನು ಮೇ ನಲ್ಲಿ ಹುಟ್ಟಿದವರು ತಮ್ಮ ಸ್ವಂತ ನಿರ್ಣಯಕ್ಕೆ ಹೆಚ್ಚಿನ ಪ್ರಾಧಾನ್ಯತೆನ್ನ ಕೊಡುತ್ತಾರೆ, ಇತರರ ನಿರ್ಣಯವನ್ನ ಇವರು ಕಿವಿಗೆ ಹಾಕಿಕೊಳ್ಳೋದಿಲ್ಲ. ಇನ್ನು ಇವರು ಶ್ರಮ ಜೀವಿಗಳು ಆಗಿರುತ್ತಾರೆ ಮತ್ತು ತಮ್ಮ ಕುಟುಂಬವನ್ನ ತುಂಬಾ ಪ್ರೀತಿ ಮಾಡುತ್ತಾರೆ.

love life in date of month

ಇನ್ನು ಜೂನ್ ನಲ್ಲಿ ಹುಟ್ಟಿದವರು ಲವ್ ಗೆ ಹೇಳಿ ಮಾಡಿಸಿದ ವ್ಯಕ್ತಿಯಂತೆ, ಇವರಿಗೆ ರೊಮ್ಯಾಂಟಿಕ್ ಮೂಡ್ ಜಾಸ್ತಿ ಅಂತೇ. ಇವರು ಬಹುಬೇಗ ಬೇರೆಯವರ ಜೊತೆ ಹೊಂದಿಕೊಳ್ಳುತ್ತಾರೆ ಆದರೆ ಕೋಪ ಮಾತ್ರ ಮೂಗಿನ ಮೇಲೇನೆ ಇರುತ್ತದೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಇವರು ಮುಂಚೂಣಿಯಲ್ಲಿ ಇರುತ್ತಾರೆ.

love life in date of month

ಇನ್ನು ಜುಲೈ ನಲ್ಲಿ ಹುಟ್ಟಿದವರು ತುಂಬಾನೇ ನಿಯತ್ತಿನ ವ್ಯಕ್ತಿಗಳು ಮತ್ತು ಇತರರನ್ನ ಬಹುಬೇಗ ಅರ್ಥ ಮಾಡಿಕೊಳ್ಳುವವರು. ಅಷ್ಟೇ ಅಲ್ಲದೆ ಇವರನ್ನ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ, ಇವರು ಒಂದು ಸಲ ಮನಸ್ನನ ಮುರಿಸಿಕೊಂಡರು ತಂದರೆ ಇವರು ಸಹಜ ಸ್ಥಿತಿಗೆ ಬರುವುದು ತುಂಬಾನೇ ಕಷ್ಟ.

love life in date of month

ಇನ್ನು ಆಗಸ್ಟ್ ನಲ್ಲಿ ಹುಟ್ಟಿದವರು ಸಮಾಜದಲ್ಲಿ ತುಂಬಾ ಪ್ರಮುಕ್ಯತೆಯನ್ನ ಹೊಂದಿರುವ ವ್ಯಕ್ತಿಯಾಗಿರುತ್ತಾರೆ, ಇವರು ಸುಲಭವಾಗಿ ಹಣವನ್ನ ಸಂಪಾದಿಸುವ ವ್ಯಕ್ತಿಯಾಗಿರುತ್ತಾರೆ. ಇವರು ಪ್ರೀತಿಸಿದ ಹುಡುಗಿಯ ಬಗ್ಗೆ ತುಂಬಾ ಕೇರ್ ತಗೆದುಕೊಳುತ್ತಾರೆ, ಸ್ವಲ್ಪ ಕಷ್ಟಗಳನ್ನ ಎದುರಿಸಿದರು ಇವರಿಗೆ ಧೈರ್ಯ ತುಂಬಾ ಜಾಸ್ತಿ.

love life in date of month

ಇನ್ನು ಸೆಪ್ಟೆಂಬರ್ ನಲ್ಲಿ ಹುಟ್ಟಿದವರು ತುಂಬಾ ಬುದ್ದಿವಂತರು ಮತ್ತು ತುಂಬಾ ಸೂಕ್ಶ್ಮ ಸ್ವಭಾವದರು ಆಗಿರುತ್ತಾರೆ, ಇವರು ತಮ್ಮ ಫೀಲಿಂಗ್ಸ್ ಗಳನ್ನ ಯಾರ ಬಳಿನೂ ಹೇಳಿಕೊಳ್ಳುದಿಲ್ಲ.

love life in date of month

ಇನ್ನು ಒಕ್ಟೋಬರ್ ತಿಂಗಳಲ್ಲಿ ಹುಟ್ಟಿದವರು ತುಂಬಾ ಅದೃಷ್ಟವಂತರು, ಇವರು ಬಹುಬೇಗ ತಮ್ಮ ಗುರಿಯನ್ನ ತಲುಪುತ್ತಾರೆ ಆದರೆ ಇವರು ತುಂಬಾ ಎಮೋಷನ್ ಎಲ್ಲರನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತಾನು ಹೇಗೆ ಇತರರನ್ನ ಪ್ರೀತಿಸುತ್ತಿನೋ ಇತರರು ಕೂಡ ತನ್ನನ್ನ ಹಾಗೆ ಪ್ರೀತಿಸಬೇಕು ಎನ್ನುವ ನಿರೀಕ್ಷೆಯನ್ನ ಇಟ್ಟುಕೊಂಡಿರುತ್ತಾರೆ.

love life in date of month

ಇನ್ನು ನವೆಂಬರ್ ತಿಂಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಬಹಳ ಸುಂದರವಾಗಿರುತ್ತದೆ ಮತ್ತು ಇವರು ತುಂಬಾ ಆಕರ್ಷಣೀಯವಾಗಿರುತ್ತಾರೆ. ಇವರು ತಮ್ಮ ಎಮೋಷನ್ ಗಳನ್ನ ತುಂಬಾ ಕಂಟ್ರೋಲ್ ಮಾಡಿಕೊಳ್ಳುತ್ತಾರೆ, ಇನ್ನು ಇವರು ತುಂಬಾ ರೋಮ್ಯಾಂಟಿಕ್ ಮೂಡ್ ಹೊಂದಿದವರು ಆಗಿರುತ್ತಾರೆ.

love life in date of month

ಇನ್ನು ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರು ಹೆಚ್ಚು ಫಿಲೊಸೊಫಾರ್ಸ್ ಆಗಿರುತ್ತಾರಂತೆ, ಇವರಲ್ಲಿ ಸಹನೆ ತುಂಬಾನೇ ಕಡಿಮೆ. ಹೊಗಳಿಕೆಯನ್ನ ಇವರು ಬಹಳ ಇಷ್ಟ ಪಡುತ್ತಾರೆ, ಇವರು ಹೊಗಳಿಕೆ ಇದ್ದರೆ ಮಾತ್ರ ಕೆಲಸವನ್ನ ಮಾಡುತ್ತಾರೆ.

ಇವರು ತುಂಬಾ ನೆಗೆಟಿವ್ ಆಲೋಚನೆ ಮಾಡಿಕೊಂಡು ಮುಂದೆ ನಡೆಯುವವರು ಆಗಿರುತ್ತಾರೆ, ಇವರು ಇರರರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯವನ್ನ ತಗೆದುಕೊಳ್ಳುತ್ತಾರೆ.

Please follow and like us:
0
http://karnatakatoday.in/wp-content/uploads/2018/05/month-1024x576.pnghttp://karnatakatoday.in/wp-content/uploads/2018/05/month-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಅನೇಕ ವರ್ಷಗಳಿಂದಲೂ ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ನಮ್ಮ ಜೀವನದ ಬಗ್ಗೆ ಹೇಳುತ್ತಲೇ ಬಂದಿದೆ, ಅವು ಹೇಳುವ ವಿಷಯಗಳು ನಮ್ಮ ಜೀವನದಲ್ಲಿ ಸತ್ಯವಾಗಿಯೂ ನಡೆದೇ ಇರುತ್ತದೆ. ಇನ್ನು ನೀವು ಹುಟ್ಟಿದ ಮಾಸವನ್ನ ತಿಳಿದುಕೊಂಡರೆ ಸಾಕು ನಿಮ್ಮ ಲವ್ ಲೈಫ್ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು ಎಂದು ಹೇಳುತ್ತಿದ್ದರೆ ಸಂಖ್ಯಾ ಶಾಸ್ತ್ರಜ್ಞರು, ಇನ್ನು ಅನೇಕರು ಈ ಸಂಖ್ಯಾ ಶಾಸ್ತ್ರಜ್ಞರು ಹೇಳುವುದು ನಿಜ ಎಂದು ಕೂಡ ಹೇಳುತ್ತಿದ್ದಾರೆ. ಇನ್ನು ಜನವರಿಯಲ್ಲಿ ಹುಟ್ಟಿದವರು ತುಂಬಾ ಆಕರ್ಷಣೀಯವಾಗಿರುತ್ತಾರೆ ಮತ್ತು...Kannada News